ಮಂಗಳೂರು: ಮಿಲಾಗ್ರಿಸ್ ಕಾಲೇಜಿನ ವತಿಯಿಂದ`ಅಕ್ವಾಮೇಟರ್ಕಪ್ 2022′ ಅಂತರ್ಕಾಲೇಜು ಫುಟ್ಬಾಲ್ ಪಂದ್ಯಾವಳಿಯನ್ನು ಆಗಸ್ಟ್ 17 ಮತ್ತು 18, 2022ರಂದು ಮಂಗಳೂರಿನ ನೆಹರು ಮೈದಾನದಲ್ಲಿಆಯೋಜಿಸಲಾಗಿದೆ.
ಈ ಪಂದ್ಯಾವಳಿಯನ್ನು ಅಕ್ವಾಮೇಟರ್ ಲ್ಯಾಬೋರೇಟರಿಯ ಎಂ.ಡಿ. ಯಾಗಿರುವ ಜಾನ್ಎರೋಲ್ ಸ್ಯಾಮ್ಯುಯೆಲ್ ಪ್ರಾಯೋಜಿಸಿದ್ದಾರೆ.
ವಿಜೇತರಿಗೆರೂ 25,000/- ನಗದು ಬಹುಮಾನ ಮತ್ತು ಟ್ರೋಫಿ, ರನ್ನರ್ ಅಪ್ಗೆ ರೂ. 15,000/- ನಗದು ಬಹುಮಾನ ಮತ್ತು ಟ್ರೋಫಿ. ಬೆಸ್ಟ್ಡಿಫೆಂಡರ್, ಬೆಸ್ಟ್ಗೋಲ್ ಸ್ಕೋರರ್ ಮತ್ತು ಬೆಸ್ಟ್ಗೋಲ್ ಕೀಪರ್ ಗೆ ರೂ. ತಲಾ 5,000/- ಮತ್ತು ಟ್ರೋಫಿಯನ್ನು ನೀಡಲಾಗುವುದು.
ಪಂದ್ಯಾವಳಿಯ ಉದ್ಘಾಟನೆಯು ಆಗಸ್ಟ್ 17, 2022 ರಂದು ಬೆಳಿಗ್ಗೆ 9 ಗಂಟೆಗೆ ನಡೆಯಲಿದೆ. ಅಕ್ವಾಮೇಟರ್ ವಾಟರ್ ಸೊಲ್ಯೂಷನ್ಸ್ನ ಡೆಪ್ಯೂಟಿ ಎಂಡಿ ರೋಜರ್ ಆಂಟೋನಿ ಸ್ಯಾಮ್ಯುಯೆಲ್ ಉದ್ಘಾಟಕರಾಗಿರುತ್ತಾರೆ. ಅಕ್ವಾಮೇಟರ್ ಲ್ಯಾಬೋರೇಟರಿ ಇದರ ಎಂಡಿ ಮತ್ತು ಅನಿವಾಸಿ ಭಾರತೀಯ ಉದ್ಯಮಿ ಜಾನ್ಎರೋಲ್ ಸ್ಯಾಮ್ಯುಯೆಲ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಮಂಗಳೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ನಿರ್ದೇಶಕರಾದ ಡಾ.ಜೆರಾಲ್ಡ್ ಸಂತೋಷ್ ಡಿಸೋಜ ಮತ್ತು ದ.ಕ.ಫುಟ್ಬಾಲ್ ಅಸೋಸಿಯೇಶನ್ ಅಧ್ಯಕ್ಷರಾದ ಡಿ.ಎಂ.ಅಸ್ಲಂ ಗೌರವ ಅತಿಥಿಗಳಾಗಿ ಆಗಮಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಿಲಾಗ್ರಿಸ್ ಶಿಕ್ಷಣ ಸಂಸ್ಥೆಗಳ ಸಂಚಾಲಕರಾದ ರೆ.ಫಾ ಬೊನವೆಂಚರ್ ನಜರೆತ್ ವಹಿಸಲಿದ್ದಾರೆ.
2022ರ ಆಗಸ್ಟ್ 18ರಂದು ಸಂಜೆ 4.30ಕ್ಕೆ ಸಮಾರೋಪ ಸಮಾರಂಭ ಜರುಗಲಿರುವುದು.