News Karnataka Kannada
Sunday, April 28 2024
ಮಂಗಳೂರು

ಆಟದಲ್ಲಿ ಸ್ವಯಂ ಶಿಸ್ತು ಹೊಂದಿದ್ದರೆ ಯಶಸ್ವಿ ಆಟಗಾರರಾಗಲು ಸಾಧ್ಯ- ಪ್ರೇಮನಾಥ ಶೆಟ್ಟಿ

If you have self-discipline in the game, you can be recognized as a successful player: Premnath Shetty
Photo Credit : News Kannada

ಮಂಗಳೂರು, ಏ.17: ಶಕ್ತಿನಗರದ ಶಕ್ತಿ ಪಪೂ ಕಾಲೇಜಿನ ಮೈದಾನದಲ್ಲಿ ಕಬಡ್ಡಿ ಆಯ್ಕೆ ಪ್ರಕ್ರಿಯೆಯನ್ನು ಎಡಪದವು ವಿವೇಕಾನಂದ ಪಪೂ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ಪ್ರೇಮನಾಥ ಶೆಟ್ಟಿ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ನಾವು ಸ್ವಯಂ ಶಿಸ್ತನ್ನು ಈ ಆಟದಲ್ಲಿ ಹೊಂದಬೇಕು. ಆಗ ನಾವು ಯಶಸ್ವಿ ಆಟಗಾರರಾಗಿ ಗುರುತಿಸಿಕೊಳ್ಳಲು ಸಾಧ್ಯವಿದೆ. ಕಬಡ್ಡಿ ಆಟವಾಡ ಬೇಕಾದರೆ ನಾವು ಖೋ ಖೋ, ವಾಲಿಬಾಲ್‌ ಹಾಗೂ ಇತರೆ ಆಟವನ್ನಾಡಿದಾಗ ಇದನ್ನು ಸುಲಭವಾಗಿ ಆಟವಾಡಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.

ಕಬಡ್ಡಿಯಲ್ಲಿ ತನ್ನಕೌಶಲ್ಯದ ಪ್ರದರ್ಶನ, ತಾಳ್ಮೆಯ ಪ್ರದರ್ಶನದಿಂದ ಯಶಸ್ವಿ ಆಟಗಾರರಾಗಿ ಹೊರ ಹೊಮ್ಮಲು ಸಾಧ್ಯವಿದೆ. ಕ್ರೀಡೆಗೆ ಶಕ್ತಿ ವಿದ್ಯಾ ಸಂಸ್ಥೆಯು ಹೆಚ್ಚಿನ ಉತ್ತೇಜನ ನೀಡುತ್ತಿರುವ ಸಂಸ್ಥೆಯ ಸಂಸ್ಥಾಪಕರಾದ ಡಾ. ಕೆ.ಸಿ ನಾಯ್ಕ್ ರನ್ನುಅಭಿನಂದಿಸುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಕಬಡ್ಡಿಯ ಆಟದ ಬಗ್ಗೆ ಅನೇಕ ರೀತಿಯ ಒಳ್ಳೆಯ ಕೌಶಲ್ಯವನ್ನು ತಿಳಿಸಿಕೊಟ್ಟು ಹೊಸದಾಗಿ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸುತ್ತಿರುವ ರಾಜ್ಯದ 116 ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶಕ್ತಿ ಎಜ್ಯುಕೇಶನ್‌ಟ್ರಸ್ಟ್ನ ಪ್ರಧಾನ ಸಲಹೆಗಾರರ ಮೇಶ್ ಕೆ. ಮಾತನಾಡಿ, ಶಕ್ತಿ ವಿದ್ಯಾ ಸಂಸ್ಥೆಯು ಕಳೆದ 2 ವರ್ಷಗಳಿಂದ ಕಬಡ್ಡಿಯ ವಿದ್ಯಾರ್ಥಿಗಳಿಗೆ ಉಚಿತ ಊಟ, ವಸತಿ ಮತ್ತು ಪಾಠ ಪ್ರವಚನವನ್ನು ಮಾಡುತ್ತಿದೆ. ಇದರ ಪರಿಣಾಮವಾಗಿ ಶಕ್ತಿ ವಿದ್ಯಾರ್ಥಿಗಳು ಕರ್ನಾಟಕ ರಾಜ್ಯವನ್ನು ಅಖಿಲ ಭಾರತೀಯ ಮಟ್ಟದಲ್ಲಿ ಪ್ರತಿನಿಧಿಸಿರುತ್ತಾರೆ.

ಕಬಡ್ಡಿಯ ವಿದ್ಯಾರ್ಥಿಗಳು 90% ರಿಂದ 97% ವರೆಗೆ ಅಂಕ ಪಡೆದು ತೇರ್ಗಡೆಯಾಗಿರುವುದು ಇಲ್ಲಿಯ ವಿಶೇಷ. ಆಟದ ಜೊತೆ ನಿರಂತರ ಪಾಠ ಪ್ರವಚನವು ನಡೆಯುತ್ತಿದೆ. ವಿದ್ಯಾ ಭಾರತಿ ಅಖಿಲ ಭಾರತ ಮಟ್ಟದಲ್ಲಿ ಕಂಚು ಪದಕ ಪಡೆದಿರುವುದು ಇವರ ಸಾಧನೆಯಾಗಿದೆ. ಮುಂದಿನ ದಿನಗಳಲ್ಲಿಯೂ ಸಂಸ್ಕಾರಯುತ ಶಿಕ್ಷಣ ನೀಡಿಅವರನ್ನುತೇರ್ಗಡೆ ಮಾಡುವುದು ನಮ್ಮಉದ್ದೇಶ.

ಈ ಬಾರಿಯೂ 116 ವಿದ್ಯಾರ್ಥಿಗಳು ಕಬಡ್ಡಿ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದು ಅವರಲ್ಲಿ 10 ಜನ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ಅವರಿಗೆ ಸಂಪೂರ್ಣಉಚಿತ ಶಿಕ್ಷಣ ನೀಡಲಾಗುವುದು. ಒಟ್ಟು 35 ವಿದ್ಯಾರ್ಥಿಗಳಿಗೆ ವರ್ಷ ಪೂರ್ತಿಉಚಿತ ಶಿಕ್ಷಣ ನೀಡಲಾಗುವುದು. ಇದಲ್ಲದೆ ಕ್ರೀಡೆಗೆ ವರ್ಷದಲ್ಲಿ 30ಲಕ್ಷ ರೂಪಾಯಿಯನ್ನುಖರ್ಚು ಮಾಡುತ್ತಿರುವುದು ಸಂಸ್ಥೆಯ ವಿಶೇಷತೆ. ವೇದಿಕೆಯಲ್ಲಿ ಪಾಟ್ನ ಪ್ರೋ-ಕಬಡ್ಡಿಆಟಗಾರ ರಂಜಿತ್ ನಾಯ್ಕ ಉಪಸ್ಥಿತರಿದ್ದು ಇವರನ್ನು ಮತ್ತು ಪ್ರೇಮನಾಥ್ ಶೆಟ್ಟಿಯವರನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಸಂಸ್ಥೆಯ ಸಂಸ್ಥಾಪಕರಾದ ಡಾ. ಕೆ.ಸಿ ನಾಯ್ಕ್, ಕಾರ್ಯದರ್ಶಿ ಸಂಜೀತ್ ನಾಯ್ಕ್ ಉಪಸ್ಥಿತರಿದ್ದರು.

ಕಾರ್ಯಕ್ರಮದ ಸ್ವಾಗತವನ್ನು ಶಕ್ತಿ ಪದವಿ ಪೂರ್ವಕಾಲೇಜಿನ ಪ್ರಾಂಶುಪಾಲರಾದ ಪೃಥ್ವಿರಾಜ್ ನಡೆಸಿದರು. ಶಕ್ತಿ ವಸತಿ ಶಾಲೆಯ ಪ್ರಾಂಶುಪಾಲರಾದರ ವಿಶಂಕರ್ ಹೆಗಡೆ ವಂದಿಸಿದರು. ಕಾರ್ಯಕ್ರಮವನ್ನುಅಧ್ಯಾಪಕರಾದ ಶರಣಪ್ಪ ನಿರೂಪಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು