News Karnataka Kannada
Saturday, May 04 2024
ಮಂಗಳೂರು

ಹರೀಶ್‌ ಪೂಂಜ 50 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ – ಅಣ್ಣಾಮಲೈ

Harish Poonja will win by a margin of 50,000 votes and enter the Assembly for the second time: Annamalai
Photo Credit : By Author

ಬೆಳ್ತಂಗಡಿ: ಕಾಂಗ್ರೆಸ್ ಪಕ್ಷದ ಎಕ್ಸಪೈರೀ ದಿನಾಂಕ ದಾಟಿದೆ. ಅವರು ನೀಡುವ ಗ್ಯಾರಂಟಿಗೆ ವಾರಂಟಿ ಇಲ್ಲದೆ ಇರುವುದರಿಂದ ಅದಕ್ಕೆ ಯಾವುದೇ ಮರ್ಯಾದೆ ಇರುವುದಿಲ್ಲ. ಹೀಗಾಗಿ ಭವಿಷ್ಯದ ಸುಭದ್ರ ಚಿಂತನೆ ಇಲ್ಲದ ಕಾಂಗ್ರೆಸ್‌ಗೆ ಯಾವುದೇ ಬೂತ್‌ನಲ್ಲಿ ಲೀಡ್‌ ಸಿಗದಂತೆ ಮಾಡುವುದು ನಮ್ಮ ಗುರಿಯಾಗಿರಬೇಕು ಎಂದು ರಾಜ್ಯದ ಚುನಾವಣಾ ಸಹ ಪ್ರಭಾರಿ ಅಣ್ಣಾಮಲೈ ಹೇಳಿದರು.

ಅವರು ಆದಿತ್ಯವಾರ ಸಂಜೆ ಬೆಳ್ತಂಗಡಿ ತಾಲೂಕಿನ ಅಳದಂಗಡಿಯಲ್ಲಿ ಭಾರತೀಯ ಜನತಾ ಪಕ್ಷ ಆಯೋಜಿಸಿದ ಬೃಹತ್‌ ಚುನಾವಣಾ ಪ್ರಚಾರ ಸಭೆಯನ್ನುದ್ದೇಶಿಸಿ ಪ್ರಚಾರ ಭಾಷಣ ಮಾಡಿದರು.

ಈ ಬಾರಿ ಕರ್ನಾಟಕದಲ್ಲಿನ ೨೨೪ ಕ್ಷೇತ್ರದಲ್ಲೂ ಇತಿಹಾಸ ನಿರ್ಮಾಣವಾಗಲಿದೆ. ೧೩೦ ಕ್ಕೂ ಹೆಚ್ಚು ಅಭ್ಯರ್ಥಿಗಳು ಶಾಸಕರಾಗಿ ವಿಧಾನಸಭೆ ಪ್ರವೇಶಿಸಲಿದ್ದಾರೆ. ಪಿಎಫ್‌ಐ ನಂತಹ ಉಗ್ರಗಾಮಿಗಳಿಗೆ ಪ್ರೋತ್ಸಾಹ ಕೊಡುವ ಕಾಂಗ್ರೆಸ್‌ ಪಕ್ಷವು ಕರ್ನಾಟಕದಲ್ಲಿ ಮುಕ್ತವಾಗುವತ್ತ ಸಾಗಲಿದೆ. ಚುನಾವಣಾ ಪ್ರಚಾರದ ಕೊನೆಯ ಹಂತದಲ್ಲಿ ಇಂದು ನಾವಿದ್ದೇವೆ. ಇನ್ನೆರಡು ದಿನಗಳಲ್ಲಿ ಕುದುರೆ ರೇಸ್‌ನಲ್ಲಿ ಕುದುರೆಗೆ ಕೊಡುವ ಕೊನೆಯ ಸೂಚನೆಯಂತೆ ನಾವು ಕೆಲಸ ಮಾಡಬೇಕಾಗಿದೆ. ಮತ್ತೊಮ್ಮೆ ಮತದಾರ ಮನೆಬಾಗಿಲಿಗೆ ಹೋಗಿ ಮತದಾನ ಮಾಡುವಂತೆ ಕೋರಬೇಕಾಗಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರೂ ಕೂಡ ಕರ್ನಾಟಕದ ಚುನಾವಣೆಯನ್ನು ಗಂಭೀರವಾಗಿ ತೆಗೆದುಕೊಂಡು ಕಳೆದ ೨೦ ದಿನಗಳಿಂದ ಅವಿರತ ಶ್ರಮವನ್ನು ಹಾಕಿ ರಾಜ್ಯವು ಬಹುಮತದತ್ತ ಸಾಗುವಂತೆ ಹೋರಾಟದಂತೇ ಮಾಡುತ್ತಿದ್ದಾರೆ. ಹೀಗಾಗಿ ಪ್ರಧಾನಿಯವರ ಹಂಬಲವನ್ನು ನಾವು ಸಾಕಾರಗೊಳಿಸಬೇಕಾಗಿದೆ ಎಂದರು.

ರಾಜ್ಯದಲ್ಲಿ ಇತಿಹಾಸ ನಿರ್ಮಾಣವಾಗುಂತೆಯೇ ಬೆಳ್ತಂಗಡಿಯಲ್ಲೂ ಆಗಬೇಕಾಗಿದೆ. ಪಕ್ಷದ ಅಭ್ಯರ್ಥಿ ಹರೀಶ ಪೂಂಜ ಅವರು ೫೦,೦೦೦ ಮತಗಳ ಅಂತರದಿಂದ ಗೆಲ್ಲಿಸುವ ಹೊಣೆ ನಮ್ಮದು. ಇದಕ್ಕೆ ಕಾರಣವೂ ಇದೆ. ೩,೫೦೦ ಕೋಟಿ ರೂ. ಗಳ ಅನುದಾನವನ್ನು ತರುವ ಮೂಲಕ  ಅಗಲವಾದ ಕಾಂಕ್ರೀಟ್‌ ರಸ್ತೆಗಳು, ಸುಸ್ಥಿರ ರಾಜ್ಯ ಹೆದ್ದಾರಿಗಳು, ಕಿಂಡಿ ಅಣೆಕಟ್ಟುಗಳ ಮೂಲಕ ನೀರನ್ನು ನಿಲ್ಲಿಸಿ ಅಂತರ್ಜಲ ಹೆಚ್ಚಿಸುವ ಯೋಜನೆ ಹಾಗೂ ಇನ್ನಿತರ ಮೂಲಭೂತ ಸೌಕರ್ಯಗಳನ್ನು ತರುವುದು ಓರ್ವ ದೂರದೃಷ್ಟಿಯುಳ್ಳ ಶಾಸಕನಿಗೆ ಮಾತ್ರ ಮಾಡಲು ಸಾಧ್ಯ.  ಯಾವುದೇ ಜಾತಿ,ಮತ ಬೇಧವಿಲ್ಲದೆ ಎಲ್ಲರಲ್ಲೂ ಬೆರೆತು ಜನಪರ  ಕೆಲಸಗಳನ್ನು ಕಳೆದ ಐದು ವರ್ಷಗಳಲ್ಲಿ  ಮಾಡಿದ್ದಾರೆ. ಬೆಳ್ತಂಗಡಿಯಲ್ಲಿ ಇಂತಹ ಶಾಸಕ ಇನ್ನೊಮ್ಮೆ ಗೆದ್ದು ಬರುವಂತೆ ಮಾಡುವ ಹೊಣೆ ನಮ್ಮೆಲ್ಲರದು ಎಂದರು.

ಖಂಡಿತವಾಗಿ 130 ಕ್ಕಿಂತ ಅಧಿಕ ಸ್ಥಾನದಲ್ಲಿ ಬಿಜೆಪಿ ಗೆದ್ದೇ ಗೆಲ್ಲುತ್ತದೆ ಎಂದು ಹೇಳಿದರು. ದೊಡ್ಡ ಇತಿಹಾಸ ಸೃಷ್ಟಿಯಾಗಲು ಎಲ್ಲರೂ ಕಾತುರಾರಗಿದ್ದಾರೆ. ಕೊನೆಯ ಗಳಿಗೆಯಲ್ಲಿ ರೇಸ್ ನಲ್ಲಿರುವ ಕುದುರೆಯಂತೆ ಸ್ಪೀಡ್ ತೆಗೆದುಕೊಳ್ಳಬೇಕು. ಉಳಿದಿರುವುದು 24 ಗಂಟೆಯಲ್ಲಿ ಸಾಮರ್ಥ್ಯ ಮೀರಿ ಮತದಾರರನ್ನು ಮನವೊಲಿಸಿ ಮತ ಯಾಚಿಸಿ ಎಂದು ಹೇಳಿದರು.

ನಾವು ಎಲ್ಲೂ ತಪ್ಪು ಕೆಲಸ ಮಾಡಿ ಮತ ಕೇಳುತ್ತಿಲ್ಲ, ಬೆಳ್ತಂಗಡಿ ಕ್ಷೇತ್ರದಲ್ಲಿ ನೋಡಿದಾಗ 3500 ಕೋಟಿ ಅನುದಾನ ತಂದಿದ್ದಾರೆ.  ಬೆಳ್ತಂಗಡಿಯಲ್ಲಿ ರಸ್ತೆ ಅಭಿವೃದ್ಧಿಯಾಗಿದೆ. ಹಿನ್ನೀರು ತಡೆಗೆ ಕಿಂಡಿ ಅಣೆಕಟ್ಟು, ಮೆರೈನ್ ಡಿಪ್ಲೋಮಾ ಕಾಲೇಜು ತರುವ ಸಾಧನೆ ಮಾಡಿದ್ದಾರೆ‌.

ಪಕ್ಷಕ್ಕೆ ವಾರೆಂಟಿ ಇದ್ದರಷ್ಟೆ ಅವರ ಉತ್ಪನ್ನಕ್ಕೆ ವಾರೆಂಟಿ. ಇಡಿ ಭಾರತದಲ್ಲಿ ಕಾಂಗ್ರೆಸ್ ನ್ನು ಜನ ಕಸದ ಬುಟ್ಟಿಗೆ ಎಸೆದಿದ್ದಾರೆ. ಕಾಂಗ್ರೆಸ್ ನ ಎಲ್ಲ ಗ್ಯಾರೆಂಟಿಗಳು ಎಸಿಯಲ್ಲಿ ಕುಳಿತು ಮಾಡಿದ ಪೇಪರ್ ಅಷ್ಟೆ. ಕಾಂಗ್ರೆಸ್ ಪಕ್ಷ ಒಂದು ಡ್ರಾಮಾ ಕಂಪೆನಿಯಂತಾಗಿದ. ಕಾಂಗ್ರೆಸ್ ಪಕ್ಷ 80 % ಕಮಿಷನ್ ಪಕ್ಷ. ಅಂದು ರಾಜೀವ್ ಗಾಂಧಿ ಅವರೇ ಹೇಳಿದ್ದರು. ಎಲ್ಲ ಕಡೆ ರಿಜೆಕ್ಟ್ ಆದ ಕಾಂಗ್ರೆಸ್‌ ಬಿಜೆಪಿ ಮೇಲೆ ಆರೋಪ ಮಾಡುತ್ತಿದೆ. ರಾಲಿಗಳನ್ನು ಮಾಡಿ ಒಂದು ಕಡೆ ರಾಮ, ಒಂದು ಕಡೆ ಅಕ್ಬರ್, ಒಂದು ಕಡೆ ಆ್ಯಂಟನಿಯಾಗಿ ವೇಷ ಧರಿಸುತ್ತಾ ಹೋಗಿದೆ.

ಪ್ರಧಾನಿ 2024 ಮುಗಿಯುವಾಗ ಪ್ರತಿ ಮನೆಗೆ ಕುಡಿಯುವ ನೀರು ತಲುಪಬೇಕೆಂಬ ಅಪೇಕ್ಷೆ ಪಟ್ಟಿದ್ದರು.  ಅದಕ್ಕೆ ಡಬಲ್ ಎಂಜಿನ್ ಸರಕಾರ ಬೇಕು. 70 ವರ್ಷದಲ್ಲಿ ಕಾಂಗ್ರೆಸ್ 74 ವಿಮಾನ ನಿಲ್ದಾಣಗಳನ್ನು ಮಾಡಿದ್ದರೆ ಬಿಜೆಪಿ 7 ವರ್ಷದಲ್ಲಿ 70 ವಿಮಾನ ನಿಲ್ದಾಣ ಮಾಡಿದೆ.. ಈಗ ರಾಜ್ಯದಲ್ಲಿ 140 ನಿಲ್ದಾಣಗಳಿವೆ ಎಂದು ಹೇಳಿದರು.

ನೀವು ಬಜರಂಗದಳವನ್ನು ಪಿಎಫ್ ಐ ನ್ನು ಒಂದೇ ರೀತಿ ತಕ್ಕಡಿಯಲ್ಲಿ ತೂಗಿ ಬ್ಯಾನ್ ಮಸಡಲು ಹೊರಟಿದ್ದೀರಿ. ಅವರು ಉಗ್ರವಾದಿಗಳು, ಇಡಿ ಕರಾವಳಿಯಲ್ಲಿ ಒಂದು ಬೂತ್ ನಲ್ಲಿ ಕಾಂಗ್ರೆಸ್ ಗೆ ಲೀಡು ಕೊಡಬಾರದು ಎಂಬ ಸಂಕಲ್ಪ ಮಾಡಿ. ಬಿಜೆಪಿ ಪ್ರಣಾಳಿಕೆಯಲ್ಲಿರುವ ಒಂದೊಂದೂ ಅಂಶವನ್ನೂ ನೂರಕ್ಕೆ ನೂರು ಜಾರಿಗೆ ಮಾಡುತ್ತೇವೆ. ಆದರೆ ನಿಮ್ಮ ಪ್ರಣಾಳಿಕೆ ಈಡೇರಿಸಲು 50 ಸಾವಿರ ಕೋಟಿ ಬೇಕು, ಎಲ್ಲಿಂದ ನಿಮ್ಮ ಡಿಕೆಶಿ ಮನೆಯಲ್ಲಿ, ಸಿದ್ದರಾಮಯ್ಯ ತೋಟದಲ್ಲಿ  ನೋಟು ಪ್ರಿಂಟಿಂಗ್ ಯಂತ್ರ ಇಡುತ್ತೀರಾ ಎಂದು ಪ್ರಶ್ನಿಸಿದ ಅವರು ಚುನಾವಣೆ ಹತ್ತಿರ ಬಂದಾಗ ಆಕಾಶದಿಂದ ತಂದು ಕೊಡುತ್ತೇವೆ ಎಂದು ರಾಹುಲ್ ಹೇಳುತ್ತಾರೆ. ಮೇ 10, ಮೇ 13 ಇತಿಹಾಸ ನಿರ್ಮಾಣವಾಗಲಿದೆ. ಸರಕಾರ 130 ಶಾಸಕರನ್ನು ತಂದು ಯಾವ ರೀತಿ ಸರಕಾರ ಮಾಡುತ್ತೇವೆ ಎಂದು ತೋರಿಸುತ್ತೇವೆ ಎಂದು ಹೇಳಿದರು.

ನಾನು ಅಂದು ನೋಡಿದ ಹರೀಶ್ ಪೂಂಜ ಇಂದೂ ಹಾಗೇ ಇದಾರೆ, ಹಿಂದುತ್ವವನ್ನು ಒಂದಿಂಚು ಬಿಟ್ಟು ಕೊಟ್ಡಿಲ್ಲ. ಅವರು ಈ ಬಾರಿ ಶಾಸಕರು ಮಾತ್ರವಲ್ಲ, ಬಿಟ್ಟು ಉನ್ನತ ಮಟ್ಟಕ್ಕೆ ಹೋಗುತ್ತಾರೆ ಎಂದರು.

ಶಾಸಕ, ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜ ಮಾತನಾಡಿ, ನಾನು ಮಾತಾಡುವುದಕ್ಕಿಂತ ಹೆಚ್ಚು ನೀವು ಮತ ನೀಡಿದ್ದಕ್ಕೆ ನಿಮ್ಮ ಮಗನಾಗಿ ಸೇವೆ ಸಲ್ಲಿಸಿದ್ದೇನೆ. ಅಭಿವೃದ್ಧಿ ರಾಜ್ಯದಲ್ಲೇ ಮೊದಲು ಎಂಬಂತೆ ಕಲ್ಪನೆ ನೀಡಿದ್ದೇನೆ. ನನ್ನ ಬಳಿ ಬಂದಾಗ, ಜಾತಿ, ಧರ್ಮ ನೋಡದೆ ಸೇವೆ ಮಾಡಿದ್ದೇನೆ. ನೆರೆ ಬಂದಾಗ ಚಾರ್ಮಾಡಿ ಘಾಟಿಯಲ್ಲಿ

ಚಿಕ್ಕಮಗಳೂರು ಎಸ್.ಪಿ.ಆಗಿದ್ದಾಗ ನಾನು ಅವರು ಭೇಟಿಯಾಗಿದ್ದೆವು. ಆದರೆ ಇಂದು ಅವರು ನನ್ನ ಸಹೋದರನಂತೆ ನನ್ನ ಬೆಂಬಲಕ್ಕೆ ಬಂದಿದ್ದೇನೆ. ಇನ್ನೈದು ವರ್ಷಕ್ಕೆ ಅವಕಾಶ ನೀಡಿ ಶ್ರಮಿಕನಂತೆ ನಿಮ್ಮ ಮಗನಂತೆ ಸೇವೆ ಮಾಡಲು ಅವಕಾಶ ನೀಡಿ‌. ಕಾಂಗ್ರೆಸ್ ಮುಕ್ತ ಕರ್ನಾಟಕ, ಕಾಂಗ್ರೆಸ್ ಮುಕ್ತ ಬೆಳ್ತಂಗಡಿಯಾಗಿ ಮಾಡೋಣ ಎಂದರು.

ಸಚಿವ ಕೋಟ ಶ್ರೀನಿವಾಸ ಪೂಜಾರಿ, ರಾಜ್ಯದಲ್ಲಿ ಹರೀಶ್ ಪೂಂಜರಂತ ಶ್ರಮಿಕ ಶಾಸಕನನ್ನು ನನ್ನ ಸಾರ್ವಜನಿಕ ಶಾಸಕನನ್ನು ನಾನು ಕಂಡಿಲ್ಲ. ನಾನು ರಾಜ್ಯದೆಲ್ಲೆಡೆ ತಿರುಗಾಡಿದ್ದೇನೆ‌. ಆದರೆ 50 ಸಾವಿರ ಮತಗಳ ಅಂತರದಲ್ಲಿ ಹರೀಶ್ ಪೂಂಜ ಗೆಲ್ಲುತ್ತಾನೆ ಎಂಬುದನ್ನು ಜನ ಹೇಳುತ್ತಾರೆ. ಭಾರತದಲ್ಲಿ ನರೇಂದ್ರ ಮೋದಿ ಆಡಳಿತದಲ್ಲಿ ಭಾರತ ಸಮೃದ್ಧವಾಗಿದೆ  ಎಂದು ಹೇಳಿದರು. ಒಂದು ದಿನ ಜಗತ್ತಿನ ಬಲಾಢ್ಯ ದೇಶ ಎಂದರೆ ಅಮೇರಿಕಾ, ಮುಂದಿನ ವಿಶ್ವದ ನಾಯಕಯ್ವ ಭಾರತದ ನರೇಂದ್ರ ಮೋದಿಗೆ ಎಂತ ಹೇಳುತ್ತಿದೆ. ಭಾರತ ಜೋಡೋ ಎಂದು ಹೊರಟ ಕಾಂಗ್ರೆಸ್ ಭಾರತ ಒಡೆದದ್ದು ಯಾರು ಎಂದು ಪ್ರಶ್ನಿಸಿದರು. ಹತ್ತಾರು ವರ್ಷಗಳಿಂದ ನೆನೆಗಯದಿಗೆ ಬಿದ್ದಿದ್ದ ನಾರಾಯಣ ಗುರು ನಿಗಮ ಸ್ಥಾಪನೆ ಮಾಡಿದ್ದು ಇದ್ದರೆ ಅದು ಬಿಜೆಪಿ ಸರಕಾರ ಎಂದರು. ಒಳ ಮೀಸಲಾತಿಯೆಂದರೆ ಪಂಗಡವಾರು ಜನಸಂಖ್ಯೆ ನೋಡಿ ವಿಂಗಡಣೆ ಮಾಡಿದ್ದರಿಂದ ಕೆಳವರ್ಗದ ಮಕ್ಕಳು ಮುಂದಿನ ದಿನ ಐಎಎಸ್, ಐಪಿಎಸ್ ಮಕ್ಕಳಾಗಲಿದ್ದಾರೆ.

ನರೇಂದ್ರ ಮೋದಿ ಸರಕಾರ 54 ಲಕ್ಷ ರೈತರಿಗೆ ಕಿಸಾನ್ ಸಮ್ಮಾನ್ ಯೋಜನೆಯಡಿ ವರದಾನ ಮಾಡಿದೆ. ಇದಕ್ಕೆ ನಾವು ಗ್ಯಾರೆಂಟಿ ಕಾರ್ಡ್ ಕೊಟ್ಟಿಲ್ಲ, ಆದರೆ ಕಾಂಗ್ರೆಸ್ ಮುಂದೆ ಕೊಡುತ್ತೇವೆಂದು ಹೇಳಿ ಗ್ಯಾರೆಂಟಿ ಕಾರ್ಡ್ ನೀಡುತ್ತಿದೆ. ಈ ಗ್ಯಾರೆಂಟಿ ಶಾಲೆಯಲ್ಲಿರುವ ಮಕ್ಕಳಿಗೆ ನವಿಲು ಗರಿ ಕೊಟ್ಟಂತೆ. ಪುಸ್ತಕದಲ್ಲಿರುವ ನವಿಲು ಗರಿ ಮರಿ ಹಾಕುವುದು, ಕಾಂಗ್ರೆಸ್ ನ ಗ್ಯಾರೆಂಟಿ ಎರಡು ಒಂದೇ. ಕಾಂಗ್ರೆಸ್ ಬಜರಂಗದಳ ನಿಷೇಧ ಘೋಷಣೆ ಮಾತೆತ್ತಿದೆ. ಹಾಗಾಗಿ ಇಂದಿನ ಚುನಾವಣೆ ಹನುಮ ಭಕ್ತರಿಗೂ ಟಿಪ್ಪು ಭಕ್ತರಿಗೂ ಚುನಾವಣೆ ಎಂದು ವಾಗ್ದಾಳಿ ನಡೆಸಿದರು. ರಾಜ್ಯದಲ್ಲಿ ಹರೀಶ್ ಪೂಂಜರನ್ನು ಸರಿಗಟ್ಟುವ ಶಾಸಕನಿಲ್ಲ. ಇನ್ನೆರಡು ದಿನಗಳಿವೆ, ಶಾಸಕ ಹರೀಶ್ ಪೂಂಜಗೆ ಮತ ನೀಡಿ ಎಂದು ಹೇಳಿದರು. ಹಲವಾರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡರು.

ನಾರಾವಿ ಹಿರಿಯ ಬಿಜೆಪಿ ಕಾರ್ಯಕರ್ತ ಡಾಕಯ್ಯ ಪೂಜಾರಿ, ಕೊರಗಪ್ಪ ನಾಯ್ಕ, ವಕೀಲ ಸುಬ್ರಮಣ್ಯ ಕುಮಾರ್ ಅಗರ್ತ, ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಸದಾನಂದ ಪೂಜಾರಿ, ಪಿ.ಎಲ್.ಡಿ. ಬ್ಯಾಂಕ್ ಅಧ್ಯಕ್ಷ ಸೋಮನಾಥ್ ಬಂಗೇರ ವರ್ಪಾಳೆ ಅಭ್ಯರ್ಥಿ ಪ್ರಮುಖ್ ಜಯಾನಂದ ಗೌಡ, ಕಾಮಿಡಿ ಕಿಲಾಡಿ ಕ್ಯಾತಿಯ ಹಿತೇಶ್, ಅನೀಶ್ ಕಾಪಿನಡ್ಕ, ಚುನಾವಣಾ ಪ್ರಭಾರಿ ಯತೀಶ್ ಶ್ರೀನಿವಾಸ್ ಕಿಣಿ, ಜಯಂತ್ ಕೋಟ್ಯಾನ್ ಪ್ರಾಸ್ತಾವಿಸಿ, ಸ್ವಾಗತಿಸಿದರು. ಮಂಡಲ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್ ರಾವ್ ಕಾರ್ಯಕ್ರಮ ನಿರ್ವಹಿಸಿದರು.

ಈ ಬಾರಿಯ ಚುನಾವಣೆ ಹನುಮ ಭಕ್ತರಿಗೆ ಮತ್ತು ಟಿಪ್ಪು ಭಕ್ತರದ್ದು. ಹರೀಶ್‌ ಪೂಂಜ ರಾಜ್ಯದ ಮಾದರಿ ಶಾಸಕ. ಇವರ ನಾಯಕತ್ವ ರಾಜ್ಯಕ್ಕೇ ಅಗತ್ಯವಿದೆ. ಹೀಗಾಗಿ ಐವತ್ತು ಸಹಸ್ರ ಮತಗಳ  ಅಂತರದಿಂದ ಗೆಲ್ಲಿಸುವ ಹೊಣೆ ನಮ್ಮದು– ಕೋಟ ಶ್ರೀನಿವಾಸ ಪೂಜಾರಿ ಸ್ವಸ್ಥ ಸಮಾಜವನ್ನು ಮಾಡುವ ಸಂಕಲ್ಪ ಬಿಜೆಪಿಯದ್ದು, ಅದಕ್ಕಾಗಿ ಪೌಷ್ಟಿಕಾಂಶದ ಹೆಚ್ಚಳಕ್ಕೆ ಹಾಲು, ಸಿರಿ ಧಾನ್ಯಗಳನ್ನು ವಿತರಿಸುವ ಅಂಶವನ್ನು ಪ್ರಣಾಳಿಕೆಯಲ್ಲಿ ಸೇರಿಸಲಾಗಿದೆ – ಅಣ್ಣಾ ಮಲೈ

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
154
Deepak Atavale

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು