News Karnataka Kannada
Monday, April 29 2024
ಮಂಗಳೂರು

ಉಳ್ಳಾಲ: ಬೆಂಗಳೂರಿನಿಂದ ಕೇರಳಕ್ಕೆ ಲಕ್ಷಾಂತರ ಮೌಲ್ಯದ ಗಾಂಜಾ ಸಾಗಾಟ, ನಾಲ್ವರ ಬಂಧನ

Ganja worth lakhs of rupees smuggled from Bengaluru to Kerala, four arrested
Photo Credit : News Kannada

ಉಳ್ಳಾಲ: ಬೆಂಗಳೂರಿನಿಂದ ಕೇರಳಕ್ಕೆ ರೂ.೩ ಲಕ್ಷ ವೆಚ್ಚದ ಗಾಂಜಾ ಸಾಗಾಟ ನಡೆಸುತ್ತಿದ್ದ ನಾಲ್ವರನ್ನು ಕೊಣಾಜೆ ಠಾಣಾ ಪೊಲೀಸರು ಚೇಳೂರು ಚೆಕ್ ಪೋಸ್ಟ್ ನಲ್ಲಿ ಅಡ್ಡಗಟ್ಟಿ ಬಂಧಿಸಿದ್ದಾರೆ.

ಕಾಸರಗೋಡು ಬಂದ್ಯೋಡಿನ ಮಹಮ್ಮದ್ ನೌಫಾಲ್ (೨೪), ಮಲಪುರಂ ಪೊನ್ನಾಣಿಯ ಜಂಶೀರ್ ಎಂ.(೨೪) , ಮಂಜೇಶ್ವರ ಮಂಗಲ್ಪಾಡಿಯ ಮಹಮ್ಮದ್ ಬಾತೀಶ್ (೩೭) , ಕಾಸರಗೋಡು ಮುಟ್ಟತೋಡಿ ಮಹಮ್ಮದ್ ಅಶ್ರಫ್ (೪೨) ಬಂಧಿತರು. ಆರೋಪಿಗಳು ಬೆಂಗಳೂರಿನಿಂದ ಉಪ್ಪಿನಂಗಡಿ, ಮೆಲ್ಕಾರ್ , ಬೋಳಿಯಾರು ಮಾರ್ಗವಾಗಿ ಕೇರಳ ಕಡೆಗೆ ಆಲ್ಟೋ ಕಾರಿನಲ್ಲಿ ಮಾದಕ ವಸ್ತು ಮತ್ತು ಮಾದಕ ದ್ರವ್ಯವನ್ನು ಸಾಗಾಟ ನಡೆಸುತ್ತಿರುವ ಖಚಿತ ಮಾಹಿತಿ ಪಡೆದುಕೊಂಡು ಚೇಳೂರು ಪೊಲೀಸ್ ಚೆಕ್ ಪೋಸ್ಟ್ ಬಳಿ ಬಂಧಿಸಲಾಗಿದೆ.

ರೂ.೩,೧೯,೦೦೦ ಬೆಲೆಬಾಳುವ ೩೨,೧೯೫ ಕೆ.ಜಿ ಗಾಂಜಾ, ನಿಷೇಧಿತ ಮಾದಕ ವಸ್ತು ಮಾರಾಟ ಮಾಡಲು ಮತ್ತು ಖರೀದಿಸಲು ಉಪಯೋಗಿಸಿದ ರೂ.೧೩,೦೦೦ ಮೌಲ್ಯದ ೪ ಮೊಬೈಲ್ ಫೋನನ್ನು ಹಾಗೂ ಗಾಂಜಾ ತುಂಬಿಕೊಂಡು ಬರಲು ಬಳಸಿದ ಎರಡು ಟ್ರಾವೆಲ್ ಬ್ಯಾಗ್ ಸೇರಿದಂತೆ ರೂ.೩ ಲಕ್ಷ ಮೌಲ್ಯದ ಆಲ್ಟೋ ಕಾರು ಒಟ್ಟು ರೂ.೬,೩೨,೦೦೦ ಬೆಲೆಯ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಕರ‍್ಯಾಚರಣೆಯನ್ನು ಸಹಾಯಕ ಪೊಲೀಸ್ ಆಯುಕ್ತ ದಿನಕರ್ ಶೆಟ್ಟಿ ಮಾರ್ಗದರ್ಶನದಲ್ಲಿ ಕೊಣಾಜೆ ಪೊಲೀಸ್ ನಿರೀಕ್ಷಕ ಪ್ರಕಾಶ್ ದೇವಾಡಿಗ ನೇತೃತ್ವದಲ್ಲಿ ಪಿ.ಎಸ್ ಐ ಶರಣಪ್ಪ ಭಂಡಾರಿ, ಸಿಬ್ಬಂದಿ ಶೈಲೇಂದ್ರ, ಮಹಮ್ಮದ್ ಶರೀಫ್, ಮಹಮ್ಮದ್ ಶರೀಫ್, ಮಹೇಶ್, ಪುರುಷೋತ್ತಮ, ದೀಪಕ್, ಅಶ್ವಿನ್, ಸುರೇಶ್, ಅಂಬರೀಶ್, ಬರಮ ಬಡಿಗೇರ್, ರೇಷ್ಮಾ, ಸುನಿತಾ ಭಾಗಿಯಾಗಿದ್ದರು. ಆರೋಪಿಗಳೆಲ್ಲರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು