News Karnataka Kannada
Friday, May 17 2024
ಮಂಗಳೂರು

ಕಣ್ಮನ ಸೆಳೆದ ನ್ಯೂಸ್‌ ಕರ್ನಾಟಕದ ವತಿಯಿಂದ ನಡೆದ “ದಾಂಡಿಯಾ ನೈಟ್‌”

Photo Credit : News Kannada

ಮಂಗಳೂರು:  ನ್ಯೂಸ್‌ ಕರ್ನಾಟಕದ ವತಿಯಿಂದ ಆಯೋಜನೆಗೊಂಡ, ಬ್ಯಾಂಕ್‌ ಆಫ್‌ ಬರೋಡ ಪ್ರಸ್ತುತ ಪಡಿಸಿದ, ಕ್ವಿಕ್‌ ವತಿಯಿಂದ ನಡೆಸಲ್ಪಟ್ಟ ದಾಂಡಿಯಾ ನೈಟ್‌ ಕಾರ್ಯಕ್ರಮ ಅದ್ದೂರಿಯಾಗಿ ನೆರವೇರಿತು. ಮೊದಲಿಗೆ ದೀಪ ಪ್ರಜ್ವಲಿಸುವ ಮೂಲಕ ಈ ಕಾರ್ಯಕ್ರವನ್ನು ಮಂಗಳೂರು ನಗರ ಸಂಚಾರಿ ಪೊಲೀಸ್‌ ವಿಭಾಗದ ಎಸಿಪಿಯಾಗಿ ಗೀತಾ ಕುಲಕರ್ಣಿ, ಕ್ವಿಕ್‌ ಅಂಡ್‌ ಅಡ್ವೈಸರಿ ಡಿಜಿಟಲ್ ಇದರ ಮಾಲೀಕರು, ಮಾರ್ಗದರ್ಶಕರಾದ ವಲೇರಿಯನ್ ದಾಲ್ಮೈಡಾ , ನ್ಯೂಸ್‌ ಕರ್ನಾಟದಕ ಎಕ್ಸಿಗಿಟಿವ್‌ ಡೈರೆಕ್ಟರ್‌ ಬ್ರಿಜೇಶ್‌ ಗೋಖಲೆ ಅವರು ಉದ್ಘಾಟಿಸಿದರು.

ನಗರದ ಮಿನಿ ಟೌನ್‌ ಹಾಲ್‌ ನಲ್ಲಿ ಆಯೋಜನೆಗೊಂಡಿದ ಈ ಇವೆಂಟ್‌ ನಲ್ಲಿ 500ಕ್ಕೂ ಅಧಿಕ ಮಂದಿ ಭಾಗಿಯಾಗಿ ದಾಂಡಿಯಾ ನೈಟ್‌ ಗೆ ಮತ್ತಷ್ಟು ಮೆರಗು ತಂದರು. ಇನ್ನು ಬೆಸ್ಟ್‌ ಸ್ಟೋಟ್‌ ಪ್ರೈಸ್‌, ಬೆಸ್ಟ್‌ ಡಾನ್ಸ್‌, ಬೆಸ್ಟ್‌ ಡ್ರೆಸ್ಸ್‌ ಪ್ರೈಸ್‌ ಕೂಡ ನೀಡಲಾಯಿತು.


ಇನ್ನು ದಾಂಡಿಯಾ ನೈಟ್ಸ್ ನಲ್ಲಿ ನಗರದ ನಿವಾಸಿಗಳು ಸಾಂಪ್ರದಾಯಿಕ ಬಟ್ಟೆಗಳನ್ನು ಧರಿಸಿ, ತಮ್ಮ ನೃತ್ಯ ಪ್ರತಿಭೆಯನ್ನು ಪ್ರದರ್ಶಿಸಿದರು.  ನವರಾತ್ರಿಯ ಈ ಸಂದರ್ಭದಲ್ಲಿ ಹಮ್ಮಿಕೊಳ್ಳಲಾಗುವ ಗುಜರಾತ್‌ನ ಟ್ರಡಿಷನಲ್‌ ಡಾನ್ಸ್‌ ದಾಂಡಿಯಾ ಮಂಗಳೂರಿನಲ್ಲಿ ಸಕತ್‌ ಸದ್ದು ಮಾಡಿದೆ. ಗುಂಪುಗಳಲ್ಲಿಈ ನೃತ್ಯವನ್ನು ಮಾಡುವ ಮೂಲಕ, ನೂರಾರು ಮಂದಿ ಒಟ್ಟಾಗಿ ಹೆಜ್ಜೆ ಹಾಕಿದಾಗ ವರ್ಣಮಯ ನೃತ್ಯಲೋಕ ಇಲ್ಲಿ ತೆರೆದುಕೊಂಡಿದೆ.
 

ಇನ್ನು ಕಾರ್ಯಕ್ರಮದ ವೇದಿಕೆಯಲ್ಲಿ ಬ್ಯಾಂಕ್ ಆಫ್ ಬರೋಡಾ ಪ್ರಾದೇಶಿಕ ಕಚೇರಿ ವ್ಯವಸ್ಥಾಪಕರಾದ ಎಡ್ರಿಚ್ ಡಿಸೌಜಾ, ಕೋ-ಸ್ಪೊಂಸರ್‌ ಆಗಿ ಅಲ್‌ ಆಮೇರಿಕ ತುಳು ಅಸೋಸಿಯೇಶನ್‌ ಯುಎಸ್‌ಎ ಮತ್ತು ಐಭಾ ಅಸೋಸಿಯೇಷನ್ ಮಂಗಳೂರಿನ ಅಧ್ಯಕ್ಷೆ ಮರ್ಸಿ ವೀಣಾ ಡಿಸೋಜಾ, ಪಾಥ್ವೆ ಎಂಟರ್ ಪ್ರೈಸಸ್ ನ ದೀಪಕ್‌ ಗಂಗೂಲಿ, ಮಿಸೆಸ್ ಇಂಡಿಯಾ ಫಿನ್ಸೆ ಕಿರೀಟ ವಿಜೇತರಾದ ಶ್ರೀಮತಿ ಪ್ರತಿಭಾ ಸಾಲ್ಯಾನ್, ಉಪಾಸನಾದ ಕೊರಿಗ್ರಾಫರ್ ಪ್ರತೀಕ್ಷಾ ಪ್ರಭು ಅವರು ತಮ್ಮ ಅದ್ಬುತವಾದ ನಿರೂಪಣೆಯ ಮೂಲಕ ದಾಂಡಿಯಾ ನೈಟ್‌ ಕಾರ್ಯಕ್ರಮದ ಮೆರಗನ್ನು ಮತ್ತಷ್ಟು ಹೆಚ್ಚಿಸಿದರು. ಜತೆಗೆ ತಮ್ಮ ನೃತ್ಯದ ಮೂಲಕ ನೆರೆದವರನ್ನು ರಂಜಿಸಿದರು.

 

ಡೆಕೊರ್‌ ಪಾಟ್ನರ್‌ ಆಗಿ ವಿಕಾಸ್‌ ಕುಂಪಲ ಶ್ರೀ ದುರ್ಗ ಡೆಕೊರೆಟರ್., ಸೌಂಡ್‌ & ಲೈಟ್ಸ್‌ ಪಾಟ್ನರ್‌ ಚರಣ್‌ ಪವಾರ್ ಸನ್‌ಝೊನ್‌ ಪವರಿಂಗ್ ಇನ್ಫಿನಿಟಿ ‌ಅವರು ಸಹಕರಿಸಿದ್ದಾರೆ.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು