ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳಿಂದ ಸಂಸ್ಕಾರಯುತ ವ್ಯಕ್ತಿತ್ವಗಳ ನಿರ್ಮಾಣ: ವೀರೇಂದ್ರ ಹೆಗ್ಗಡೆ

ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಗಳು ಔಪಚಾರಿಕ ಶಿಕ್ಷಣ ನೀಡಿ ವಿದ್ಯಾರ್ಥಿಗಳನ್ನು ಆಯಾಯ ಕ್ಷೇತ್ರಗಳಲ್ಲಿ ಪರಿಣತರನ್ನಾಗಿಸುವ ಜತೆಗೆ ಕೌಶಲವಂತ ಹಾಗೂ ಸಂಸ್ಕಾರಯುತ ನಾಗರಿಕರನ್ನಾಗಿ ರೂಪಿಸುವುದಕ್ಕೂ ಆದ್ಯತೆ ನೀಡುತ್ತಿವೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ, ಎಸ್‌.ಡಿ.ಎಂ. ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರು ಹಾಗೂ ಎಸ್.ಡಿ.ಎಂ. ವಿಶ್ವವಿದ್ಯಾನಿಲಯದ ಕುಲಾಧಿಪತಿಗಳೂ ಆದ ಡಾ. ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.

ಮೈಸೂರಿನ ಎಸ್.ಡಿ.ಎಂ. ಇನ್ಸ್ಟಿಟ್ಯೂಟ್ ಆಫ್‌ಮ್ಯಾನೇಜ್ಮೆಂಟ್ ಡೆವಲಪ್ಮೆಂಟ್ (ಎಸ್.ಡಿ.ಎಂ.ಐಎಂಡಿ) ಸಂಸ್ಥೆಯಲ್ಲಿ ಮೇ 17, 18ರಂದು ನಡೆದ ಅಖಿಲ ಕರ್ನಾಟಕ ಎಸ್.ಡಿ.ಎಂ. ಉನ್ನತ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಶಿಕ್ಷಣವೆಂದರೆ ಕೇವಲ ಪದವೀಧರರನ್ನು ಸೃಷ್ಟಿಸುವುದಲ್ಲ, ವಿದ್ಯಾರ್ಥಿಗಳು ವಿದ್ಯಾವಂತರಾಗುವ ಜತಜತೆಗೆ ಕೌಶಲ, ಸಂಸ್ಕಾರ ಹೊಂದಬೇಕು. ತಮ್ಮ ತಮ್ಮ ಕ್ಷೇತ್ರದಲ್ಲಿ ಪರಿಣತಿ ಹೊಂದಿ, ಉತ್ತಮ ವ್ಯಕ್ತಿತ್ವಗಳಾಗಿ, ಸಮಾಜಕ್ಕೆ ಆಸ್ತಿಯಾಗಿ ಬೆಳೆಯಬೇಕು. ಈ ನಿಟ್ಟಿನಲ್ಲಿ ಮತ್ತಷ್ಟು ವಿಸ್ತೃತ ಪ್ರಯತ್ನಗಳಾಗಲಿ’ ಎಂದು ಅವರು ಅಪೇಕ್ಷೆ ವ್ಯಕ್ತಪಡಿಸಿದರು.

ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳಲ್ಲಿ ಕಲಿತ ವಿದ್ಯಾರ್ಥಿಗಳು ತಾವು ಗಳಿಸಿದ ವೃತ್ತಿಪರ ಪರಿಣತಿ, ಮೌಲ್ಯಯುತ ಶಿಕ್ಷಣದ ಬಗೆಗೆ ಹೆಮ್ಮೆ ಪಡುವಂತಾಗಬೇಕು. ಅವರು ಸೂಕ್ತ ಉದ್ಯೋಗ ಪಡೆದು ಯಶಸ್ವಿಗಳಾಗುವ ನಿಟ್ಟಿನಲ್ಲಿ ಸಂಸ್ಥೆಗಳು ಪ್ರಯತ್ನ ಮುಂದುವರಿಸಬೇಕು ಎಂದು ಅವರು ಕಿವಿಮಾತು ಹೇಳಿದರು.

ಬದಲಾಗುತ್ತಿರುವ ಕಾಲಘಟ್ಟ ಹಾಗೂ ವಿದ್ಯಮಾನಗಳಿಗನುಗುಣವಾಗಿ ಶಿಕ್ಷಕರು ಅಪ್ಡೇಟ್ ಆಗಬೇಕು. ತನ್ಮೂಲಕ ವಿದ್ಯಾರ್ಥಿಗಳಲ್ಲೂ ಈ ಪ್ರವೃತ್ತಿ ಬೆಳೆಯಬೇಕು. ಸ್ಪರ್ಧಾತ್ಮಕ ಜಗತ್ತಿನ ಸವಾಲುಗಳನ್ನು ನಮ್ಮ ವಿದ್ಯಾರ್ಥಿಗಳು ಯಶಸ್ವಿಯಾಗಿ ಎದುರಿಸುವಂತಾಗಬೇಕು” ಎಂದು ಅವರು ಆಶಯ ವ್ಯಕ್ತಪಡಿಸಿದರು.

ಎಸ್.ಡಿ.ಎಂ. ಸ್ವಾಯತ್ತ ಸಂಸ್ಥೆಗಳು ಆಧುನಿಕ ಜಗತ್ತಿಗೆ ಪೂರಕವಾದ ಪಠ್ಯಕ್ರಮ ರೂಪಿಸಿಕೊಂಡು, ಪರಸ್ಪರ ಸಹಕಾರ, ಅಂತರ್ಶಿಸ್ತೀಯ ಚಟುವಟಿಕೆ ಜತೆಗೆ ಸಂಶೋಧನೆಗೂ ಆದ್ಯತೆ ನೀಡಬೇಕು. ಆ ನೆಲೆಯಲ್ಲಿ ಸ್ವಾಯತ್ತತೆ ಅತ್ಯುತ್ತಮ ರೀತಿಯಲ್ಲಿ ಬಳಕೆಯಾಗಬೇಕು ಎಂದು ಅವರು ಕರೆ ನೀಡಿದರು.

ಇದೇ ವೇಳೆ ಅವರು ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಸುದ್ದಿ ಸಮಾಚಾರಗಳಿಗಾಗಿ ರೂಪಿಸಲಾಗಿರುವ ‘ಎಸ್.ಡಿ.ಎಂ. ನ್ಯೂಸ್’ ಆ್ಯಪ್ ಹಾಗೂ ವೆಬ್ಸೈಟ್ ಬಿಡುಗಡೆಗೊಳಿಸಿದರು.

ಎಸ್‌.ಡಿ.ಎಂ. ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷ ಡಿ. ಸುರೇಂದ್ರ ಕುಮಾರ್‌, ಧಾರವಾಡದ ಎಸ್.ಡಿ.ಎಂ. ವಿಶ್ವವಿದ್ಯಾನಿಲಯದ ಉಪಕುಲಪತಿ ಡಾ. ನಿರಂಜನ್‌ಕುಮಾರ್, ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಗಳಾದ ಡಿ. ಹರ್ಷೇಂದ್ರ ಕುಮಾರ್, ಡಾ. ಸತೀಶ್ಚಂದ್ರ ಎಸ್. ಹಾಗೂ ಜೀವಂಧರ್‌(ಧಾರವಾಡ), ಎಸ್.ಡಿ.ಎಂ. ಐಎಂಡಿ ನಿರ್ದೇಶಕರಾದ ಕರ್ನಲ್ ಪ್ರಸಾದ್‌ಹಾಗೂ ಡಾ. ಎನ್.ಆರ್. ಪರಶುರಾಮ್ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

Sneha Gowda

Recent Posts

ಪ್ರಗತಿ ಮೈದಾನದ ಸುರಂಗದಲ್ಲಿ ಅಪಘಾತ : ದೆಹಲಿ ಪೊಲೀಸ್ ಸಿಬ್ಬಂದಿ ಸಾವು

ನಗರದ ಪ್ರಗತಿ ಮೈದಾನದ ಸುಂರಗ ಮಾರ್ಗದಲ್ಲಿ ಅಪಘಾತ ಸಂಭವಿಸಿದ್ದು ದೆಹಲಿ ಪೊಲೀಸ್ ಸಿಬ್ಬಂದಿ ಸಾವನಪ್ಪಿದ್ದಾರೆ. ಅಪಘಾತದ ದೃಶ್ಯ ಕ್ಯಾಮೆರದಲ್ಲಿ ಸೆರೆಯಾಗಿದೆ.…

2 mins ago

ಬೈಂದೂರು ವಿಧಾನಸಭಾ ಕ್ಷೇತ್ರದ ಉಸ್ತುವಾರಿಯಾಗಿ ಪುತ್ತೂರು ಶಾಸಕ ಅಶೋಕ್ ರೈ ನೇಮಕ

ಕರ್ನಾಟಕದಲ್ಲಿ ೨ನೇ ಹಂತದ ಚುನಾವಣಾ ಪ್ರಚಾರಕ್ಕೆ ಉಸ್ತುವಾರಿಗಳ ನೇಮಕವನ್ನು ಡಿಸಿಎಂ ಡಿ.ಕೆ ಶಿವಕುಮಾರ್‌ ಅವರು ಮಾಡಿದ್ದಾರೆ. ಅದರಂತೆ ಚುನಾವಣೆಗೆ ಉಸ್ತುವಾರಿಗಳ…

21 mins ago

ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳ ದಾರುಣ ಸಾವು

ಪ್ರವಾಸಕ್ಕೆಂದು ತೆರಳಿದ್ದ ಐವರು ವಿದ್ಯಾರ್ಥಿಗಳು ನೀರುಪಾಲದ ದಾರುಣ ಘಟನೆ ಕನಕಪುರ ತಾಲೂಕಿನ ಮೇಕೆದಾಟು ಬಳಿಯ ಸಂಗಮದ ಕಾವೇರಿ ನದಿಯಲ್ಲಿ ನಡೆದಿದೆ.…

26 mins ago

ನಿಯಂತ್ರಣ ಕಳೆದುಕೊಂಡ ‘ಅಮಿತ್ ಶಾ’ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್

ಬಿಹಾರದ ಬೇಗುಸರಾಯ್‌ ನಿಂದ ಟೇಕ್ ಆಫ್ ಆಗುವ ಮೊದಲು ಅಮಿತ್ ಶಾ ಅವರ ಹೆಲಿಕಾಪ್ಟರ್ ಸ್ವಲ್ಪ ಸಮಯದವರೆಗೆ ನಿಯಂತ್ರಣ ಕಳೆದುಕೊಂಡ…

33 mins ago

ಮುರುಘಾ ಸ್ವಾಮೀಜಿ ಮತ್ತೆ ಜೈಲಿಗೆ : ಮೇ 27ರವರೆಗೆ ನ್ಯಾಯಾಂಗ ಬಂಧನ

ಮುರುಘಾ ಮಠದ ವಸತಿ ಶಾಲ ವಿದ್ಯಾರ್ಥಿನಿಯರ ಮೇಲಿನ ಅತ್ಯಚಾರ ಪ್ರಕರಣದಲ್ಲಿ ಜಾಮನೀನು ಪಡೆದು ಹೊರ ಬಂದಿದ್ದ ಮುರುಘಾ ಶ್ರೀಗಳಿಗೆ ಪುನಃ…

44 mins ago

ಅಮಿತ್ ಶಾ ನಕಲಿ ವಿಡಿಯೋ ಹಂಚಿಕೆ : ತೆಲಂಗಾಣ ಸಿಎಂ ರೇವಂತ್‌ಗೆ ಸಮನ್ಸ್

ಕೇಂದ್ರ ಸಚಿವ ಅಮಿತ್‌ ಶಾ ಕುರಿತಾದ ನಕಲಿ ವಿಡಿಯೋವನ್ನು ʻಎಕ್ಸ್‌ʼನಲ್ಲಿ ಹಂಚಿಕೊಂಡ ಆರೋಪದ ಮೇರೆಗೆ ಮೇ 1ರಂದು ವಿಚಾರಣೆಗೆ ಹಾಜರಾಗುವಂತೆ…

1 hour ago