Categories: ಮಂಗಳೂರು

ಹನ್ನೆರಡು ವರ್ಷಗಳಿಂದ ಉಚಿತ ಮದುವೆ ಆಯೋಜನೆ: ಮೋಹನ್ ದಾಸ್ ಅವರಿಂದ ಸಾಮಾಜಿಕ ಕಾರ್ಯ

ಮಂಗಳೂರು: ಅಲ್ಲಿ ಒಂದು ಕಡೆ ಸಾಮೂಹಿಕ ವಿವಾಹಕ್ಕೆ ಸಿದ್ಧರಾಗಿರೋ ಜೋಡಿ, ಅರ್ಚಕರಿಂದ ಶಾಸ್ತ್ರೋಕ್ತವಾಗಿ ನಡೆಯುತ್ತಿರೋ ಸಂಪ್ರದಾಯ. ಹೀಗೆ ಪರಿಶಿಷ್ಟ ಜಾತಿ ಜೋಡಿಗಳಿಗೆ ಹಸೆಮಣೆ ಭಾಗ್ಯ ಕಲ್ಪಿಸಿದ್ರು ನೋಡಿ ದೇಗುಲವೊಂದರ ಧರ್ಮಾಧಿಕಾರಿ. ಹೌದು ಈ ಎಲ್ಲ ದೃಶ್ಯ ಕಂಡು ಬಂದಿದ್ದು ಮಂಗಳೂರು ನಗರದಿಂದ ದೂರದಲ್ಲಿರುವ ಕಟೀಲು ಉಳೆಪಾಡಿ ಶ್ರೀ ದುರ್ಗಾಪರಮೇಶ್ವರಿ ಮಹಮ್ಮಾಯಿ ದೇವಸ್ಥಾನದಲ್ಲಿ. ಹೌದು ಕಳೆದ ಹನ್ನೆರಡಕ್ಕೂ ಅಧಿಕ ವರ್ಷಗಳಿಂದ ಕಟೀಲು ಉಳೆಪಾಡಿ ಶ್ರೀ ದುರ್ಗಾಪರಮೇಶ್ವರಿ ಮಹಮ್ಮಾಯಿ ದೇವಸ್ಥಾನದ ಧರ್ಮಧಿಕಾರಿ ಮೋಹನ್ ದಾಸ್ ಈ ರೀತಿಯಾಗಿ ತೆರೆಮರೆಯಲ್ಲಿ ಪರಿಶಿಷ್ಟ ಜಾತಿ ಪಂಗಡ ಸಮುದಾಯದ ಜೋಡಿಗಳಿಗೆ ಶಾಸ್ತ್ರೋಕ್ತ ರೀತಿಯಲ್ಲಿ ಉಚಿತ ವಿವಾಹ ಕಾರ್ಯಾ ಮಾಡುತ್ತಾ ಬಂದಿದ್ದಾರೆ.

ಈ ದೇವಾಲಯವು ಶ್ರೀಮಂತಿಕೆಯಲ್ಲಿ ಕೆಳಗಿದ್ದರೂ ಜನ ಪರ ಯೋಜನೆಯಲ್ಲಿ ಮಾದರಿ ದೇವಾಲಯವಾಗುವಂತೆ ಮಾಡಿದ್ದಾರೆ. ಈ ದೇವಾಲಯಕ್ಕೆ ಬರುವ ಹರಕೆ ಬಂಗಾರ, ಹಣದಿಂದ ಪರಿಶಿಷ್ಟ ಜಾತಿ ಪಂಗಡಗಳ ಹನ್ನಂದು ವಧು ವರರಿಗೆ ಮದುವೆ ಕಾರ್ಯ ಮಾಡುತ್ತಾ ಬಂದಿದ್ದಾರೆ. ಈ ಪೈಕಿ ಈ ವರ್ಷ ಏಳು ಜೋಡಿಗಳ ಮದುವೆ ಕಾರ್ಯವನ್ನು ಅದ್ದೂರಿಯಾಗಿ ನೆರವೇರಿಸಿದ್ದಾರೆ.

ನಮಗೆ ಸ್ವತಃ ಖರ್ಚಿನಿಂದ ಮದ್ವೆ ಕಾರ್ಯ ನೆರವೇರಿಸಲು ಸಾಧ್ಯವಿಲ್ಲ ಆದರೆ ಎಷ್ಟೋ ಶ್ರೀಮಂತ ದೇವಾಲಯದಲ್ಲಿ ಸಾಮೂಹಿಕ ವಿವಾಹಕ್ಕೆ ಅರ್ಜಿ ಹಾಕಿದ್ದೇವೆ. ಅಲ್ಲಿನ ಕೆಲವೊಂದು ನಿಯಮಗಳು ದಾಖಲೆಗಳು ನಮ್ಮ ಸಮುದಾಯದಲ್ಲಿ ಇಲ್ಲ. ಈ ಸಮಯದಲ್ಲಿ ನಮಗೆ ಬೆಳಕಾಗಿ ನಿಂತಿದ್ದೇ ಮೋಹನ್ ದಾಸ್. ಅವರ ಈ ದೇವಾಲಯದಲ್ಲಿ ನಮ್ಮ ಸಮುದಾಯದ ಜನರಿಗೆ ಉಚಿತ ಮತ್ತು ಶಾಸ್ತ್ರೋಕ್ತ ಮದುವೆ ಭಾಗ್ಯ ಒದಗಿಸಿದ್ದಾರೆ. ಅವರ ಈ ಸೇವೆಗೆ ನಾವು ಚಿರಋಣಿ. ಯಾವುದೇ ಖರ್ಚು ವೆಚ್ಚ ಇಲ್ಲದೆ ತಮ್ಮ ಸಣ್ಣ ದೇವಾಲಯದಲ್ಲಿ ಆದಾಯ ಇಲ್ಲದಿದ್ದರೂ ನಮ್ಮಂತವರ ಮದುವೆ ಕಾರ್ಯಕ್ರಮ ಶಾಸ್ತ್ರೋಕ್ತವಾಗಿ ಮಾಡಿಕೊಟ್ಟಿದ್ದಾರೆ ಎಂದು ನವದಂಪತಿಗಳು ತಮ್ಮ ಅನಿಸಿಕೆ ವ್ಯಕ್ತಪಡಿಸಿದ್ದಾರೆ.

Gayathri SG

Recent Posts

ಎಸ್‌ಇಪಿಸಿ ಉನ್ನತ ಶಿಕ್ಷಣದ ಕಾರ್ಯಪಡೆಗೆ ಫಾದರ್ ಫ್ರಾನ್ಸಿಸ್ ಡಿ ಅಲ್ಮೇಡಾ ನಾಮನಿರ್ದೇಶನ

ಕರ್ನಾಟಕದಲ್ಲಿ ಉನ್ನತ ಶಿಕ್ಷಣದ ಭೂದೃಶ್ಯವನ್ನು ಸುಧಾರಿಸುವ ಉದ್ದೇಶದಿಂದ ಪೂರ್ವಭಾವಿ ಕ್ರಮದಲ್ಲಿ, ರಾಜ್ಯ ಶಿಕ್ಷಣ ನೀತಿ ಆಯೋಗವು (ಎಸ್‌ಇಪಿಸಿ) ವಿಷಯಾಧಾರಿತ ಕಾರ್ಯಪಡೆಗಳ…

5 mins ago

ಕೇಂದ್ರ ಸರಕಾರದ ವಿರುದ್ಧ ರಣಕಹಳೆ ಮೊಳಗಿಸಿದ ಕಾಂಗ್ರೆಸ್ ನಾಯಕರು

ಕೇಂದ್ರದ ನರೇಂದ್ರ ಮೋದಿ ಸರಕಾರ ಕರುನಾಡಿಗೆ ಕೊಟ್ಟಿದ್ದು ಚೊಂಬು, ಜಿಎಸ್ ಟಿ ಹಣದಲ್ಲೂ ಮಲತಾಯಿ ಧೋರಣೆ ಅನುಸರಿಸುವ ಮತ್ತು ಬರ…

21 mins ago

ಹಕ್ಕಿ ಜ್ವರ ಭೀತಿ: ಗಡಿಭಾಗ ದ.ಕದಲ್ಲಿ ಮುಂಜಾಗ್ರತಾ ಕ್ರಮ, ಚೆಕ್ ಪೋಸ್ಟ್ ನಿರ್ಮಾಣ

ಕೇರಳ ರಾಜ್ಯದಲ್ಲಿ ಹಕ್ಕಿ ಜ್ವರ ಭೀತಿ ಹಿನ್ನೆಲೆಯಲ್ಲಿ ಕೇರಳದ ಗಡಿಭಾಗ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಂಜಾಗ್ರತಾ ಕ್ರಮ ವಹಿಸಲಾಗಿದೆ.

35 mins ago

ಗುಟ್ಕಾ ಹಾಕಿ ಬುಲೆಟ್ ಓಡಿಸೋ ಮಡದಿಗೆ ಡಿವೋರ್ಸ್ ಕೊಡಲು ಮುಂದಾದ ಪತಿರಾಯ

ಕುಡಿದು ಬರುವ ಗಂಡ ಹಣವನ್ನೆಲ್ಲ ಖಾಲಿ ಮಾಡಿ ಪತ್ನಿಯನ್ನು ಬೀದಿಗೆ ಹಾಕಿದ ಉದಾಹರಣೆ ಇದೆ. ಅದೇ ರೀತಿ ಕುಡಿತ ಸೇರಿದಂತೆ…

41 mins ago

ಲೋಕಸಭೆ ಚುನಾವಣೆ ಮಹತ್ವ ಈಗ ಅರ್ಥವಾಗಿದೆ: ಸುನೀಲಗೌಡ

ಲೋಕಸಭೆ ಚುನಾವಣೆಯ ಮಹತ್ವವನ್ನು ನಮ್ಮ ಜನ ಅರಿಯುತ್ತಿದ್ದಾರೆ. ಇದು ಒಳ್ಳೆಯ ಬೆಳವಣಿಗೆ ಎಂದು ಶಾಸಕ ಸುನೀಲಗೌಡ ಪಾಟೀಲ ಹೇಳಿದರು.

49 mins ago

ಸರಕು ತುಂಬಿದ ಲಾರಿ ಮತ್ತು ಕಾರಿನ ನಡುವೆ ಭೀಕರ ಅಪಘಾತ: 6 ಮಂದಿ ಮೃತ್ಯು

ಸರಕು ತುಂಬಿದ ಲಾರಿಯೊಂದು ಕಾರಿನ ಮೇಲೆ ಬಿದ್ದ ಪರಿಣಾಮ ಆರು ಮಂದಿ ಸಾವನ್ನಪ್ಪಿದ ಘಟನೆ ಬಿಹಾರದ ಭಾಗಲ್​ಪುರ್​​ದಲ್ಲಿ ನಡೆದಿದೆ.

1 hour ago