ದಕ್ಷಿಣ ಕನ್ನಡ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ವಕೀಲ ಎಸ್.ನಟರಾಜ ಶರ್ಮಾ ಎಂಬುವವರು ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಲಕ್ಷ್ಮೀ ಹೆಬ್ಬಾಳ್ಕರ್ ಅವರು, ಭ್ರಷ್ಟಾಚಾರದ ಆರೋಪ ನಿಜವಾಗಿಯೂ ಬಾಲಿಶ ಎಂದಿದ್ದಾರೆ.
ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು ‘ಬಹಳ ಸೂಕ್ಷ್ಮ ಇಲಾಖೆಯನ್ನು ನಾನು ನಿಬಾಯಿಸುತ್ತಿದ್ದೇನೆ. ಯಾವುದೇ ಟೆಂಡರ್ ಆಗಿಲ್ಲ. ಸುಪ್ರೀಂ ಕೋರ್ಟ್, ಹೈಕೋರ್ಟ್ ನಿರ್ದೇಶನ ಉಲ್ಲಂಘನೆಯಾಗಿತ್ತು.
2021 ರಲ್ಲಿ ಬಿಜೆಪಿ ಸರ್ಕಾರ ಇದ್ದಾಗಲೇ ಜಿಯೋ ಮಾಡಿತ್ತು. ಸುಪ್ರೀಂಕೋರ್ಟ್, ಹೈಕೋರ್ಟ್ ನಿರ್ದೇಶನದಂತೆ ಎ.ಜಿಯವರ ಅಭಿಪ್ರಾಯ ಪಡೆದು, ಅದನ್ನು ನಾವು ಮಾಡಿದ್ದೆವು. ನ್ಯಾಯಾಂಗದ ಸೂಚನೆ ಉಲ್ಲಂಘನೆ ಆಗಿರುವುದನ್ನು ಅನುಷ್ಠಾನ ಮಾಡಿದ್ದೇವೆ. ಇದರಲ್ಲಿ ಯಾವ ಭ್ರಷ್ಟಾಚಾರವೂ ಇಲ್ಲ ಎಂದರು.