News Karnataka Kannada
Friday, May 03 2024
ಮಂಗಳೂರು

ಮೂಡಂಬೈಲು ಸರ್ಕಾರಿ ಶಾಲೆಯ ಮಕ್ಕಳಿಗೆ ಗದ್ದೆಗಿಳಿದು ನೇಜಿ‌ನೆಡುವ ಸಂಭ್ರಮ

Children of Moodambailu Government School to take to the fields to plant a sapling
Photo Credit : By Author

ಬಂಟ್ವಾಳ: ತಾಲೂಕಿನ ಪುಣಚ ಗ್ರಾಮದ ಮೂಡಂಬೈಲು ಸರ್ಕಾರಿ ಶಾಲೆಯ ಮಕ್ಕಳಿಗೆ ಗುರುವಾರ ಗದ್ದೆಗಿಳಿದು ನೇಜಿ‌ನೆಡುವ ಸಂಭ್ರಮ. ಶಾಲೆಯ 1 ನೇ ತರಗತಿಯಿಂದ 8 ನೇವತರಗತಿ ವರೆಗಿನ 37 ವಿದ್ಯಾರ್ಥಿಗಳೂ ಗದ್ದೆಗಿಳಿದು, ನೇಜಿನೆಟ್ಟು ಅನ್ನಬೆಳೆಯುವ ಶ್ರಮದ ಪಾಠವನ್ನು ಮಕ್ಕಳು ತಿಳಿದುಕೊಂಡದ್ದು ವಿಶೇಷವಾಗಿತ್ತು.

ಮೂಡಂಬೈಲು ಪಾವಲುಮೂಲೆಯ ಶಿವರಾಮ ನಾಯ್ಕ ಮತ್ತು ಮನೆಯವರ ಕುಟುಂಬದ ಸದಸ್ಯರೇ ಸೇರಿ ನೇಜಿ ನೆಟ್ಟು ಗದ್ದೆ ಕೃಷಿ‌ಮಾಡುವ ಶಿವರಾಮ ನಾಯ್ಕರ ಕುಟುಂಬದವರೊಡನೆ ಸೇರಿ ನೇಜಿನೆಡುವುದನ್ನು ಶಾಲಾ ಮಕ್ಕಳು ಕಲಿತರು. ಅಪರಾಹ್ನದ ಬಳಿಕ ಮೂಡಂಬೈಲು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಲಸಿನ ಸೊಳೆ ಉಪ್ಪಿನಲ್ಲಿ ಹಾಕುವ ಕಾರ್ಯದಲ್ಲೂ ಮಕ್ಕಳು ಉತ್ಸಾಹದಲ್ಲಿ ತೊಡಗಿಸಿಕೊಂಡಿದ್ದು, ಸುಮಾರು 23 ಹಲಸಿನ ಕಾಯಿ ಬಿಡಿಸಿ ಉಪ್ಪಿನಲ್ಲಿ ಹಾಕಿ ಇಡಲಾಯಿತು. ಶಾಲಾಮುಖ್ಯಶಿಕ್ಷಕ ಅರವಿಂದ ಕುಡ್ಲ‌ಅವರ ವಿಶೇಷ ಮುತುವರ್ಜಿಯಲ್ಲಿ ನಡೆದ ಈ ಕಾರ್ಯಕ್ರಮಕ್ಕೆ ಸಹಶಿಕ್ಷಕರು, ಮಕ್ಕಳ ಪೋಷಕರು ಸಹಕಾರ ನೀಡಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
153
Mounesh V

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು