News Karnataka Kannada
Saturday, April 27 2024
ಮಂಗಳೂರು

ಕಟ್ಟಡದ ಮೇಲಿನಿಂದ ಬಿದ್ದ ಮಗು: ಪ್ರಾಣಪಾಯದಿಂದ ಪಾರು

Child falls from building, escapes unhurt
Photo Credit : News Kannada

ಮಂಗಳೂರು: ಉಳ್ಳಾಲ ತಾಲೂಕಿನ ಮಂಜನಾಡಿ ಎಂಬಲ್ಲಿ ಆಟವಾಡುತ್ತಿದ್ದ ಮಗು ಕಟ್ಟಡದ ಮೇಲಿನಿಂದ ಬಿದ್ದ  ಘಟನೆ ಆ.25 ರಂದು ನಡೆದಿದೆ.

ತಾಯಿ ಜೊತೆ ಬ್ಯಾಂಕ್ ಗೆ ಬಂದಿದ್ದ ಮೂರು ವರ್ಷದ ಗಂಡು ಮಗು, ತಾಯಿ ಬ್ಯಾಂಕ್ ನ ಒಳಗಿರುವಾಗ ಆಟವಾಡುತ್ತಾ ಹೊರಗೆ ಬಂದು ಕಟ್ಟಡದ ಹೊರಗೆ ಹಾಕಿದ್ದ ಕಬ್ಬಿಣದ ಗ್ರಿಲ್ ಹತ್ತಲು ಪ್ರಯತ್ನಿಸಿ ಗ್ರಿಲ್ ಹತ್ತುವಾಗ ಆಯತಪ್ಪಿ ಮೊದಲ ಮಹಡಿಯಿಂದ ಗ್ರೌಂಡ್ ಫ್ಲೋರ್ ಗೆ ಬಿದ್ದಿದೆ.

ಮಗು ಬಿದ್ದ ರಭಸಕ್ಕೆ ತಲೆ, ಕೈಗೆ ಗಾಯವಾಗಿದೆ. ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ಮಗುವಿಗೆ ಚಿಕಿತ್ಸೆ ನೀಡಲಾಗುತಿದ್ದು ಸಧ್ಯ ಮಗು ಪ್ರಾಣಪಾಯದಿಂದ ಪಾರಾಗಿದೆ. ಮಗು ಬಿದ್ದ ದೃಶ್ಯ ಕಟ್ಟಡದಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು