ಮಂಗಳೂರು: ಬೈಂದೂರು ಮೂಲದ ಬೆಂಗಳೂರು ಉದ್ಯಮಿಗೆ ಕೋಟಿ ಕೋಟಿ ರೂ. ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿ ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ಪೊಲೀಸರು ಗುರುಪುರ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿಗೆ ನೋಟಿಸ್ ನೀಡಿದ್ದಾರೆ.
ಚೈತ್ರ ಕುಂದಾಪುರ ಬಂಧನದ ನಂತರ ಚೈತ್ರ ಇಡಿ ಗೆ ಬರೆದ ಪತ್ರದಲ್ಲಿ ವಜ್ರಾದೇಹಿ ಶ್ರೀ ಚಕ್ರವರ್ತಿ ಸೂಲಿಬೆಲೆ, ಹಾಗೂ ಸಿಟಿ ರವಿ ಹೆಸರು ಉಲ್ಲೇಖವಾಗಿತ್ತು. ಇದೀಗ ಸಿಸಿಬಿ ಮಂಗಳೂರು ಗುರುಪುರ ವಜ್ರಾದೇಹಿ ಮಠದ ರಾಜಶೇಖರಾನಂದ `ಸ್ವಾಮಿಜಿಗೆ ನೋಟಿಸ್ ಜಾರಿ ಮಾಡಿದೆ.