News Karnataka Kannada
Tuesday, April 30 2024
ಮಂಗಳೂರು

ಬೆಂಗಳೂರು ಕಂಬಳಕ್ಕೆ ದಿನಾಂಕ ಫಿಕ್ಸ್: 6 ಕೋಟಿ ರೂಪಾಯಿ ವೆಚ್ಚ

Bengaluru Kambala: Buffalo owners don't want mineral water, give them coastal water
Photo Credit : News Kannada

ಮಂಗಳೂರು: ಬೆಂಗಳೂರಿನಲ್ಲಿ ಇದೇ ಮೊದಲ ಬಾರಿಗೆ ಕರಾವಳಿಯ ಜಾನಪದ ಕ್ರೀಡೆ ಕಂಬಳ ಏರ್ಪಡಿಸಲಾಗಿದ್ದು ನವೆಂಬರ್ 25 ಮತ್ತು 26ರಂದು ಕಂಬಳಕ್ಕೆ ದಿನ ನಿಗದಿ ಪಡಿಸಲಾಗಿದೆ ಎಂದು ಬೆಂಗಳೂರು ಕಂಬಳ ಸಮಿತಿ ಸಂಘಟಕ, ಪುತ್ತೂರಿನ ಶಾಸಕ ಅಶೋಕ್‌ ಕುಮಾರ್ ರೈ ತಿಳಿಸಿದ್ದಾರೆ.

ಎರಡು ದಿನಗಳ ಕಂಬಳ ಉತ್ಸವದಲ್ಲಿ ರಾಜ್ಯದ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಸೇರಿದಂತೆ ತಮಿಳು ಸೂಪರ್ ಸ್ಟಾರ್ ರಜನಿಕಾಂತ್‌, ಬಾಲಿವುಡ್ ನಟಿ ಐಶ್ವರ್ಯಾ ರೈ ಸೇರಿದಂತೆ ಸಿನಿಮಾ ಕ್ಷೇತ್ರದ ಘಟಾನುಘಟಿಗಳು ಭಾಗವಹಿಸಲಿದ್ದಾರೆ. ಬೆಂಗಳೂರು ತುಳು ಕೂಟದ ವತಿಯಿಂದ ಕಂಬಳ ಆಯೋಜಿಸಲಾಗಿದೆ. ಬೆಂಗಳೂರಿನಲ್ಲಿ ಮೊದಲ ಬಾರಿಗೆ ನಡೆಯುತ್ತಿರುವ ಈ ಕಂಬಳ ಕೂಟದಲ್ಲಿ ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಜಿಲ್ಲೆಗಳ ಸುಮಾರು 130 ಜೊತೆ ಕೋಣಗಳು ಭಾಗವಹಿಸಲಿವೆ.

ಇದರ ಜೊತೆ 125 ಸ್ಟಾಲ್ ಗಳನ್ನು ಮಾಡಲಾಗುತ್ತಿದ್ದು ತುಳುನಾಡಿನ ತಿಂಡಿ ತಿನಿಸುಗಳು ಗ್ರಾಹಕರಿಗೆ ದೊರೆಯಲಿದೆ. ಎರಡು ದಿನಗಳಲ್ಲಿ ಸುಮಾರು 7ರಿಂದ 8 ಲಕ್ಷ ಜನರು ಕಂಬಳ ವೀಕ್ಷಿಸುವ ನಿರೀಕ್ಷೆ ಇದೆ ಎಂದು ಅಶೋಕ್ ಕುಮಾರ್ ರೈ ತಿಳಿಸಿದ್ದಾರೆ.

ಸುಪ್ರೀಂ ಕೋರ್ಟ್ ಮಾರ್ಗಸೂಚಿಗಳನ್ನು ಉಲ್ಲಂಘಿಸದೆ ಕಾರ್ಯಕ್ರಮವನ್ನು ಆಯೋಜಿಸಲಾಗುವುದು. ನಮ್ಮ ಸಂಸ್ಕೃತಿಯನ್ನು ಪ್ರಪಂಚದಾದ್ಯಂತ ಹರಡುವುದು ಮತ್ತು ಬೆಂಗಳೂರಿನಲ್ಲಿ ತುಳು ಭವನವನ್ನು ನಿರ್ಮಿಸಲು ಸರ್ಕಾರವನ್ನು ಒತ್ತಾಯಿಸುವುದು ನಮ್ಮ ಉದ್ದೇಶವಾಗಿದೆ. ಕಾರ್ಯಕ್ರಮಕ್ಕೆ 6 ಕೋಟಿ ರೂಪಾಯಿ ವೆಚ್ಚವಾಗುತ್ತದೆ ಎಂದು ಅಂದಾಜಿಸಿದ್ದೇವೆ. ನಾವು ಸರ್ಕಾರದ ಬೆಂಬಲವನ್ನು ಸಹ ಕೋರುತ್ತೇವೆ ಎಂದು ಕೆಲವು ವಿಐಪಿಗಳು, ಸಚಿವರು ಒತ್ತಾಯಿಸಿದರು. ಕನ್ನಡ ಮತ್ತು ತುಳುವಿನಲ್ಲಿ ಕಾಮೆಂಟರಿ ಇದ್ದು ಎಲ್ಲಾ ಕೋಣಗಳಿಗೆ ಪದಕ ಹಾಗೂ ಪ್ರಥಮ ಬಹುಮಾನ 2 ಪವನ್ ಚಿನ್ನ ಹಾಗೂ ದ್ವಿತೀಯ ಬಹುಮಾನ ಒಂದು ಪವನ್ ಚಿನ್ನ ಸಿಗಲಿದೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಉಡುಪಿ, ದಕ್ಷಿಣ ಕನ್ನಡ ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ದೇವಿಪ್ರಸಾದ್‌ ಶೆಟ್ಟಿ ರೋಹಿತ್‌ ಹೆಗ್ಡೆ ಬಾರ್ಕೂರು ಶಾಂತರಾಮ ಶೆಟ್ಟಿ, ಲೋಕೇಶ್ ಶೆಟ್ಟಿ, ಚಂದ್ರಹಾಸ ಸನಿಲ್, ಮುರಳೀಧರ ರೈ, ವಿಜಯಕುಮಾರ್ ಜೈನ್ ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 2 / 5. Vote count: 1

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು