News Karnataka Kannada
Tuesday, April 30 2024
ಮಂಗಳೂರು

ಬೆಳ್ತಂಗಡಿ| ಕಲಾವಿದರಿಗೆ ಮನೋಸ್ಥೈರ್ಯ ತುಂಬುವ ಕೆಲಸ ಪಟ್ಲ ಫೌಂಡೇಶನ್ ಮಾಡುತ್ತಿದೆ: ಸತೀಶ್ ಶೆಟ್ಟಿ

Patla Foundation is working to instil confidence in artistes: Satish Shetty
Photo Credit :

ಬೆಳ್ತಂಗಡಿ : ‘ಕಲಾವಿದರಿಗೆ ಮನೋಸ್ಥೈರ್ಯ ತುಂಬುವ ಕೆಲಸಕ್ಕಾಗಿ ಪಟ್ಲ ಫೌಂಡೇಶನ್ ಸ್ಥಾಪಿಸಲಾಗಿದೆ. ಜಾತಿ ಧರ್ಮ ವ್ಯಕ್ತಿಯನ್ನು ಮೀರಿ ಕಲಾವಿದರಿಗೆ ಪ್ರೋತ್ಸಾಹ ನೀಡುವ ಕೆಲಸವಾಗಬೇಕು’ ಎಂದು ಯಕ್ಷಧ್ರುವ ಪಟ್ಲ ಫೌಂಡೇಶನ್ ಸ್ಥಾಪಕ ಅಧ್ಯಕ್ಷ ಸತೀಶ್ ಶೆಟ್ಟಿ ಪಟ್ಲ ಹೇಳಿದರು.

ಅವರು ಗುರುವಾಯನಕೆರೆ ಬಂಟರ ಭವನದಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ ಬೆಳ್ತಂಗಡಿ ಘಟಕದ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

‘ಪಟ್ಲ ಫೌಂಡೇಶನ್ ಘಟಕ ಸಂಘಟನಾತ್ಮಕವಾಗಿ ಚೆನ್ನಾಗಿ ಹೋದಾಗ ಕೆಲಸ ಕಾರ್ಯಗಳು ಚೆನ್ನಾಗಿ ಆಗಲು ಸಾಧ್ಯ. ಕಲಾವಿದರ ಮೇಲಿನ ಪ್ರೀತಿ ಮತ್ತು ಅಭಿಮಾನದಿಂದ ಘಟಕ ಬೆಳೆಯಬೇಕು. ಕಲಾವಿದರನ್ನು ಹೆಚ್ಚು ಹೆಚ್ಚು ತೊಡಗಿಸಿಕೊಳ್ಳುವ ಕೆಲಸ ಆಗಬೇಕು. ತಾಲ್ಲೂಕಿನಲ್ಲಿ ಕಲಾವಿದರಿಗಾಗಿ ಒಂದು ತರಬೇತಿ ಕೇಂದ್ರ ಆರಂಭವಾಗಬೇಕು’ ಎಂದರು.

ಹಿರಿಯ ಕಲಾವಿದ ಸರಪಾಡಿ ಅಶೋಕ ಶೆಟ್ಟಿ ಮಾತನಾಡಿ, ‘ಕಲೆ ಮತ್ತು ಸಾಹಿತ್ಯದ ಬಗ್ಗೆ ಜನ ಜಾಗೃತಿ ಆಗುತ್ತಿದ್ದಾರೆ. ಕಲಾವಿದರ ಬದುಕು ಯಾರದೂ ಕೂಡ ಸುಖಕರವಾಗಿಲ್ಲ.
ಈ ಬಗ್ಗೆ ನ್ಯಾಯ ಒದಗಿಸಬೇಕಾದ ಜನ ಪ್ರತಿನಿಧಿಗಳು ಮಾತನಾಡುತ್ತಿಲ್ಲ. ಕಲಾವಿದರ ಸಂಕಷ್ಟ ನಿವಾರಣೆಗೆ ಯಕ್ಷಧ್ರುವ ಪಟ್ಲ ಫೌಂಡೇಶನ್ ಸ್ಥಾಪನೆಯಾಗಿ ಸಾವಿರಾರು ಜನರ ಕಣ್ಣೀರು ಒರೆಸುವ ಕೆಲಸವಾಗಿದೆ. ಇವತ್ತು ಪಟ್ಲ ಫೌಂಡೇಶನ್ ವತಿಯಿಂದ ಕಲಾವಿದರಲ್ಲಿ ಆತ್ಮವಿಶ್ವಾಸದ ಬದುಕು ನಿರ್ಮಾಣವಾಗುತ್ತಿದೆ. ಬೆಳ್ತಂಗಡಿ ತಾಲ್ಲೂಕಿನಲ್ಲಿಯೂ ಮಾದರಿ ಘಟಕ ನಿರ್ಮಾಣವಾಗಿ ಕಲಾವಿದರ ಬದುಕನ್ನು ಬೆಳಗಬೇಕು’ ಎಂದರು.

ಉಜಿರೆ ಎಸ್ ಡಿ ಎಂ ಕಾಲೇಜಿನ ಪ್ರಾಧ್ಯಾಪಕ ಕುಮಾರ ಹೆಗ್ಡೆ ಮಾತನಾಡಿ, ‘ಬೆಳ್ತಂಗಡಿ ಘಟಕ ವಾರ್ಷಿಕವಾಗಿ ಮಾಡಬೇಕಾದ ಕಾರ್ಯಕ್ರಮಗಳ ಕ್ರಿಯಾ ಯೋಜನೆಯನ್ನು ಹಾಕಿಕೊಳ್ಳಬೇಕು. ತಾಲ್ಲೂಕಿನ ಎಲ್ಲ ಯಕ್ಷಗಾನ ಕಲಾವಿದರ ದಾಖಲೀಕರಣ ಆಗಬೇಕು. ವರ್ಷದಲ್ಲಿ ಒಮ್ಮೆ ಯಕ್ಷಗಾನ ಕಲಾವಿದರ ಸಮಾವೇಶ ತಾಲ್ಲೂಕಿನಲ್ಲಿ ಆಗಬೇಕು. ಯಕ್ಷಗಾನದಲ್ಲಿ ಉದಯೋನ್ಮುಖ ಕಲಾವಿದರನ್ನು ಗುರುತಿಸಿ ತಜ್ಞರಿಂದ ಮಾರ್ಗದರ್ಶನ ಕೊಡಿಸುವ ಕೆಲಸ ಆಗಬೇಕು’ ಎಂದರು.

ಇದೇ ಸಂದರ್ಭದಲ್ಲಿ ಘಟಕದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ದಯಾನಂದ ಯಳಚಿತ್ತಾಯ, ಮಹೇಶ್ ಶೆಟ್ಟಿ ಸಲಹೆ ಸೂಚನೆ ಗಳನ್ನು ನೀಡಿದರು.

ಬೆಳ್ತಂಗಡಿ ಘಟಕದ ಅಧ್ಯಕ್ಷ ಭುಜಬಲಿ ಧರ್ಮಸ್ಥಳ, ನೂತನ ಅಧ್ಯಕ್ಷ ಸುರೇಶ್ ಶೆಟ್ಟಿ ಲಾಯಿಲ, ನೂತನ ಸಮಿತಿಯ ಕಾರ್ಯದರ್ಶಿ ಶಿತಿಕಂಠ ಭಟ್, ಸಂಚಾಲಕ ಕಿರಣ್ ಕುಮಾರ್ ಶೆಟ್ಟಿ, ಕೋಶಾಧಿಕಾರಿ ಆದರ್ಶ್ ಜೈನ್ ಇದ್ದರು.
ಘಟಕದ ಸಂಚಾಲಕರಾಗಿದ್ದ ರಘುರಾಮ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
154
Deepak Atavale

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು