News Karnataka Kannada
Thursday, May 02 2024
ಮಂಗಳೂರು

ಬೆಳ್ತಂಗಡಿ: ಭಕ್ತಿಯಿಂದ ಪ್ರತಿ ದಿನ ಭಜನೆ ಹಾಡಿದರೆ ಭಗವಂತನ ಅನುಗ್ರಹ ಪ್ರಾಪ್ತಿಯಾಗುತ್ತದೆ

Belthangady: If you sing bhajans every day with devotion, you will get the blessings of god.
Photo Credit : Facebook

ಬೆಳ್ತಂಗಡಿ: ಸರ್ವ ಶಾಸ್ತ್ರಗಳ ಸಾರ ಭಜನೆಯಲ್ಲಿದ್ದು, ಅರ್ಥವನ್ನು ಅರಿತು ಪರಿಶುದ್ಧ ಮನಸ್ಸಿನಿಂದ ದೃಢ ಭಕ್ತಿಯೊಂದಿಗೆ ಪ್ರತಿ ದಿನ ಭಜನೆ ಹಾಡಿದರೆ ಭಗವಂತನ ಅನುಗ್ರಹ ಪ್ರಾಪ್ತಿಯಾಗುತ್ತದೆ. ತನ್ಮೂಲಕ ಸುಖ-ಶಾಂತಿ, ನೆಮ್ಮದಿಯ ಜೀವನ ನಡೆಸಬಹುದು ಎಂದು ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.

ಅವರು ಶುಕ್ರವಾರ ಧರ್ಮಸ್ಥಳದಲ್ಲಿ 24ನೆ ವರ್ಷದ ಭಜನಾ ತರಬೇತಿ ಕಮ್ಮಟದ ಸಮಾರೋಪ ಸಮಾರಂಭದಲ್ಲಿ ಆಶೀರ್ವಚನ ನೀಡಿದರು. ಭಗವಂತ ಮತ್ತು ಭಕ್ತರ ನಡುವಿನ ಸಂಪರ್ಕ ಸೇತು ಭಜನೆ. ಭಗವಂತನ ಅನುಗ್ರಹ ಪ್ರಾಪ್ತಿಗೆ ಭಜನೆ ಅತ್ಯಂತ ಸರಳ ಮಾಧ್ಯಮವಾಗಿದೆ. ದೇವರು ಭಕ್ತಿಯ ಭಾವವನ್ನು ಗಮನಿಸುತ್ತಾರೆ. ಭಕ್ತಿಯಿಂದ ಮಾಡಿದ ಸಾರ್ಥಕ ಸೇವೆ ಮೂಲಕ ಸಕಲ ದೋಷಗಳಿಂದ ಮುಕ್ತಿ ಪಡೆಯಬಹುದು.

ಕೆಲವು ವರ್ಷಗಳ ಹಿಂದೆ ಮುಸ್ಸಂಜೆಯಲ್ಲಿ ಪ್ರತಿ ಮನೆಯಲ್ಲಿಯೂ ಭಜನೆ ಮಾಡುವ ಸಂಪ್ರದಾಯವಿತ್ತು. ಈಗ ರೇಡಿಯೊ, ಟಿ.ವಿ. ಬಂದ ಮೇಲೆ ಭಜನೆ ಹಾಡುವ ಸಂಸ್ಕøತಿ ಮಾಯವಾಗಿ ಮನೆಯೇ ಚಲನಚಿತ್ರ ಮಂದಿರವಾಗಿದೆ. ನಮ್ಮ ಸನಾತನ ಧರ್ಮ ಮತ್ತು ಸಂಸ್ಕøತಿಯನ್ನು ಉಳಿಸಿ, ಬೆಳೆಸುವುದು ನಮ್ಮೆಲ್ಲರ ಹೊಣೆಗಾರಿಕೆಯಾಗಿದೆ. ಪ್ರತಿ ಮನೆಯಲ್ಲಿಯೂ ನಿತ್ಯವೂ ಸಂಜೆ ಒಂದು ಗಂಟೆಯಾದರೂ ಭಜನೆ ಮಾಡಬೇಕು. ಭಜನಾ ಸಂಸ್ಕøತಿಯನ್ನು ಮಕ್ಕಳಿಗೂ ಕಲಿಸಿ ಸಭ್ಯ, ಸುಸಂಸ್ಕøತ ನಾಗರಿಕರನ್ನಾಗಿ ರೂಪಿಸಬೇಕು. ಭಜನಾ ತರಬೇತಿ ಕಮ್ಮಟದ ಮೂಲಕ ಡಿ. ವೀರೇಂದ್ರ ಹೆಗ್ಗಡೆಯವರು ಪ್ರತಿ ಮನೆಯಲ್ಲಿಯೂ ಭಜನಾ ಸಂಸ್ಕøತಿಯನ್ನು ಉಳಿಸಿ, ಬೆಳೆಸಿದ್ದಾರೆ ಎಂದು ಹೇಳಿ ಅಭಿನಂದಿಸಿದರು.

ರಾಜ್ಯಸಭಾ ಸದಸ್ಯರಾಗಿ ನಾಮನಿರ್ದೇಶನಗೊಂಡಿರುವ ಹೆಗ್ಗಡೆಯವರನ್ನು ಸ್ವಾಮೀಜಿಯವರು ಶ್ರೀ ಕೃಷ್ಣ ದೇವರ ಪ್ರಸಾದ ನೀಡಿ, ಶಾಲು ಹೊದಿಸಿ ಗೌರವಿಸಿದರು. ತುಳು ಭಜನೆಯೊಂದನ್ನು ಸ್ವಾಮೀಜಿ ಸುಶ್ರಾವ್ಯವಾಗಿ ಹಾಡಿದರು.

ಚಲನಚಿತ್ರ ಸಂಗೀತ ನಿರ್ದೇಶಕ ಶ್ರೀಧರ್ ಸಂಭ್ರಮ್ ಮುಸ್ಸಂಜೆ ಮಾತು ಸಿನಿಮಾದ ಏನಾಗಲೀ ಮುಂದೆ ಸಾಗಲಿ ಎಂಬ ಗೀತೆಯೊಂದನ್ನು ಹಾಡಿ ಶ್ರೋತೃಗಳನ್ನು ರಂಜಿಸಿದರು. ಸಾಂಸ್ಕøತಿಕ ಹಿನ್ನೆಲೆಯ ಸಂಗೀತ ನಮ್ಮ ಬದುಕಿನಲ್ಲಿ ಧನಾತ್ಮಕ ಪರಿವರ್ತನೆ ಮಾಡಿ ಮಾನಸಿಕ ಶಾಂತಿ, ನೆಮ್ಮದಿ ನೀಡುತ್ತದೆ ಎಂದು ಅವರು ಹೇಳಿದರು.

ಬೆಂಗಳೂರಿನ ವಾಸುದೇವ ರೆಡ್ಡಿ ಮತ್ತು ಮನೆಯವರು ಡಿ. ವೀರೇಂದ್ರ ಹೆಗ್ಗಡೆಯವರಿಗೆ ರಜತ ಕಿರೀಟ ಮತ್ತು ರಜತ ಗದೆ ಅರ್ಪಿಸಿ ಗೌರವಿಸಿದರು.ಗೌರವ ಡಾಕ್ಟರೇಟ್ ಪಡೆದ ಹೇಮಾವತಿ ಹೆಗ್ಗಡೆಯವರನ್ನೂ ಅವರು ಗೌರವಿಸಿದರು.

ವರದಿ ಸಾದರಪಡಿಸಿದ ಭಜನಾ ಕಮ್ಮಟದ ಕಾರ್ಯದರ್ಶಿ ಸುರೇಶ್ ಮೊೈಲಿ, 174 ಭಜನಾ ಮಂಡಳಿಗಳಿಂದ 184 ಮಂದಿ ಪುರುಷರು ಹಾಗೂ 138 ಮಹಿಳೆಯರು ಸೇರಿದಂತೆ ಒಟ್ಟು 322 ಶಿಬಿರಾರ್ಥಿಗಳು ಕಮ್ಮಟದಲ್ಲಿ ಭಾಗವಹಿಸಿದ್ದಾರೆ ಎಂದು ತಿಳಿಸಿದರು.

ಧರ್ಮೋ ರಕ್ಷತಿ ರಕ್ಷಿತ: ಅಧ್ಯಕ್ಷತೆ ವಹಿಸಿದ ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ, ಧರ್ಮವನ್ನು ನಾವು ಕಾಪಾಡಿದರೆ, ಧರ್ಮ ನಮ್ಮನ್ನು ಸದಾ ರಕ್ಷಣೆ ಮಾಡುತ್ತದೆ. ಧರ್ಮೋ ರಕ್ಷತಿ ರಕ್ಷಿತ: ಅಂದರೆ ಧರ್ಮ ಸದಾ ನಾವು ಧರಿಸಿ ಆಚರಿಸಿದರೆ, ಧರ್ಮ ನಮ್ಮನ್ನು ಕಾಪಾಡುತ್ತದೆ. ಧಾರ್ಮಿಕ ಮತ್ತು ಆಧ್ಯಾತ್ಮಿಕ ಹಿನ್ನೆಲೆಯಲ್ಲಿ ಸಂಸ್ಕøತಿಯನ್ನು ಉಳಿಸುವುದು ಕೂಡಾ ಅತ್ಯಂತ ಶ್ರೇಷ್ಠವಾದ ಧರ್ಮವಾಗಿದೆ.

ಧರ್ಮಸ್ಥಳದಲ್ಲಿ ಪ್ರತಿ ವರ್ಷ ಶಿಸ್ತು ಮತ್ತು ವ್ಯವಸ್ಥಿತವಾಗಿ ಭಜನಾ ಕಮ್ಮಟ ಆಯೋಜಿಸಿ ಭಜನಾ ಸಂಸ್ಕøತಿ ಉಳಿಸಿ ಬೆಳೆಸಿದ ಧನ್ಯತಾ ಭಾವ ಮೂಡಿ ಬಂದಿದೆ. ಮುಂದಿನ ಪೀಳಿಗೆಯೂ ಭಜನಾ ಸಂಸ್ಕೃತಿಯನ್ನು ಬೆಳೆಸಬೇಕು ಎಂದು ಅವರು ಸಲಹೆ ನೀಡಿದರು. ರಾಗ, ತಾಳ, ಲಯ ಬದ್ಧವಾಗಿ ಭಜನೆ ಹಾಡುವುದರ ಮೂಲಕ ದೇವರನ್ನು ಆತ್ಮೀಯರನ್ನಾಗಿ ಮಾಡಬಹುದು. ಭಜನೆಯಲ್ಲಿ ಪಾಶ್ಚಾತ್ಯ ಸಂಗೀತ ಹಾಗೂ ಡಿ.ಜೆ. ಬಳಸಬಾರದು ಎಂದು ಅವರು ಸಲಹೆ ನೀಡಿದರು.

ಭಜನೆ ಮೂಲಕ ಉತ್ತಮ ಸಂಸ್ಕಾರ ಮೂಡಿ ಬರಬೇಕು ಎಂದು ಹೆಗ್ಗಡೆಯವರು ಹಾರೈಸಿದರು. ಹೇಮಾವತಿ ವೀ. ಹೆಗ್ಗಡೆ ಮತ್ತು ಮಾಣಿಲದ ಮೋಹನದಾಸ ಸ್ವಾಮೀಜಿ, ಇಸ್ಕಾನ್‌ನ ರಾಮಚರಣದಾಸ್ ಸ್ವಾಮೀಜಿ, ಭಜನಾ ಪರಿಷತ್ ಅಧ್ಯಕ್ಷ ಬಾಲಕೃಷ್ಣ ಪಂಜ, ಕಾರ್ಯದರ್ಶಿ ಪುರುಷೋತ್ತಮ ಪಿ.ಕೆ. ಉಪಸ್ಥಿತರಿದ್ದರು.

ಭಜನಾ ಕಮ್ಮಟದ ಸಂಚಾಲಕ ಸುಬ್ರಹ್ಮಣ್ಯ ಪ್ರಸಾದ್ ಸ್ವಾಗತಿಸಿದರು. ನಿವೃತ್ತ ಶಿಕ್ಷಕ ಧರ್ಣಪ್ಪ ಧನ್ಯವಾದವಿತ್ತರು.ಭಜನಾ ಪರಿಷತ್ ಸಾಧಕರನ್ನು ಸಮ್ಮಾನಿಸಲಾಯಿತು. ಶ್ರೀನಿವಾಸರಾವ್ ಧರ್ಮಸ್ಥಳ ಮತ್ತು ದಿನರಾಜ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
154
Deepak Atavale

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು