News Karnataka Kannada
Sunday, April 28 2024
ಮಂಗಳೂರು

ಬೆಳ್ತಂಗಡಿ: ಪ.ರಾ.ಶಾಸ್ತ್ರಿ‌ ಅಭಿನಂದನೆ, ಡಾ. ಹೆಗ್ಗಡೆ ಅವರಿಗೆ ಆಹ್ವಾನ

Dr. P.R. Sastry congratulated dr. Heggade invited
Photo Credit : News Kannada

ಬೆಳ್ತಂಗಡಿ: ತಾಲೂಕಿನ ಸಾಹಿತಿ ಪ. ರಾಮಕೃಷ್ಣ ಶಾಸ್ತ್ರಿ ಅವರಿಗೆ ಮುಂಬೈ ಜುಲೈಗೆ 70ನೆ ವರ್ಷದ ಹುಟ್ಟುಹಬ್ಬ ಸಂಭ್ರಮ. ತನ್ನ ಹನ್ನೊಂದನೆ ವರ್ಷದಿಂದ ಬರವಣಿಗೆ ಕ್ಷೇತ್ರದಲ್ಲಿ ತೊಡಸಿಗಿಕೊಂಡವರು. ಈವರೆಗೆ ಅವರು ಬರೆದ ಲೇಖನಗಳ ಸಂಖ್ಯೆ 12000 ಕ್ಕೂ  ಹೆಚ್ಚು. 101 ಪುಸ್ತಕಗಳು ಪ್ರಕಟಗೊಂಡಿವೆ.

ಲೇಖನಗಳು,‌ ಕತೆಗಳು ತುಳು, ಇಂಗ್ಲಿಷ್, ಮಲಯಾಳ, ಹಿಂದಿ ಭಾಷೆಗೆ ಅನುವಾದಗೊಂಡಿವೆ. ಮಹಾರಾಷ್ಟ್ರ ಸರಕಾರದ ಕನ್ನಡ ಪಠ್ಯದಲ್ಲಿ, ಮಂಗಳೂರು ವಿವಿ ಪಠ್ಯದಲ್ಲಿ ಲೇಖನ, ಕತೆಗಳು ಅಡಕವಾಗಿದೆ. ಬೆಳ್ತಂಗಡಿ ತಾಲೂಕಿನಲ್ಲಿ ಇಷ್ಟು ಬರಹ ಬರೆದವರು ಇಲ್ಲ ಎನ್ನುವುದು ಉಲ್ಲೇಖನೀಯ. ಈ ನಿಟ್ಟಿನಲ್ಲಿ ಅವರ ಅಭಿನಂದನ ಸಮಾರಂಭ ಹಾಗೂ ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ಜು.8 ರಂದು ಬೆಳ್ತಂಗಡಿಯಲ್ಲಿ ನಡೆಸಲು ನಿರ್ಧರಿಸಲಾಯಿತು. ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾಗಿ ಕಾರ್ಯಕ್ರಮದಲ್ಲಿ ಭಾಗಿಯಾಗುವಂತೆ ಮನವಿ ಮಾಡಲಾಯಿತು.

ಸಮಿತಿ ಸಂಚಾಲಕ ಸಂಪತ್ ಸುವರ್ಣ, ಅಶೋಕ್ ಭಟ್ ಉಜಿರೆ, ಭುಜಬಲಿ ಧರ್ಮಸ್ಥಳ, ಡಾ. ಭಾಸ್ಕರ ಹೆಗಡೆ, ಡಾ. ಶ್ರೀನಾಥ್ ಎಂ.ಪಿ. ಎನ್. ಜಯಶಂಕರ ಶರ್ಮ, ಡಿ. ಪ್ರಶಾಂತ್ ಬಳಂಜ, ದಯಾನಂದ ಬೆಳಾಲು, ಲಕ್ಷ್ಮೀ ಮಚ್ಚಿನ ಉಪಸ್ಥಿತರಿದ್ದರು.

ಅದಕ್ಕೂ ಮುನ್ನ ನಡೆದ ಸಮಾಲೋಚನಾ ಸಭೆಯಲ್ಲಿ ಪ. ರಾ. ಶಾಸ್ತ್ರಿಯವರಿಗೆ ಎಪ್ಪತ್ತರ ಜನ್ಮದಿನದಂದು ಅಭಿನಂದನೆಯನ್ನು ನಡೆಸಲು ರೂಪುಗೊಂಡ ಸಮಿತಿಯನ್ನು ‘ ಪ.‌ರಾ. ಶಾಸ್ತ್ರಿ’ ಅಭಿನಂದನಾ ಸಮಿತಿ ಎಂದು ಹೆಸರಿಸಲಾಯಿತು. ಚಿಂತಕ ಅರವಿಂದ ಚೊಕ್ಕಾಡಿ ಕಾರ್ಯಕ್ರಮದ ರೂಪರೇಖೆ ಕುರಿತು ಮಾತನಾಡಿದರು.

ಸಭೆಯಲ್ಲಿ ಜಿಲ್ಲಾ ಕಸಾಪ ಅಧ್ಯಕ್ಷ ಡಾ.‌ಎಂ.ಪಿ. ಶ್ರೀನಾಥ್, ತಾಲೂಕು ಕಸಾಪ ಅಧ್ಯಕ್ಷ ಯದುಪತಿ ಗೌಡ, ಎಸ್‌ಡಿಎಂ ಕಾಲೇಜು ನಿವೃತ್ತ ಪ್ರಾಚಾರ್ಯ ಡಾ. ಎನ್. ಪಿ. ಉದಯಚಂದ್ರ, ಸೇಕ್ರೆಡ್ ಹಾರ್ಟ್ ಕಾಲೇಜು ಪ್ರಾಂಶುಪಾಲ ಡಾ. ಎನ್.ಎಂ. ಜೋಸೆಫ್, ಕುರಿಯ ಪ್ರತಿಷ್ಠಾನ ಸಂಚಾಲಕ ಉಜಿರೆ ಅಶೋಕ ಭಟ್, ಪತ್ರಿಕೋದ್ಯಮ ವಿಭಾಗ ಮುಖ್ಯಸ್ಥ ಡಾ. ಭಾಸ್ಕರ ಹೆಗಡೆ, ಸಂಘಟಕ ಭುಜಬಲಿ ಧರ್ಮಸ್ಥಳ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಾದೇಶಿಕ ನಿರ್ದೇಶಕ ಎನ್. ಜಯಶಂಕರ ಶರ್ಮ, ಉಪನ್ಯಾಸಕಿ ರಾಜೇಶ್ವರಿ ಚೇತನ್, ತಾಲೂಕು ಪಂಚಾಯತ್ ಅಧಿಕಾರಿ ಪ್ರಶಾಂತ್ ಬಳಂಜ, ದಂತ ವೈದ್ಯ ಡಾ. ಶಶಿಧರ ಡೋಂಗ್ರೆ, ಉದ್ಯಮಿ ಪುಷ್ಪರಾಜ ಶೆಟ್ಟಿ, ಜೈನ್‌ಮಿಲನ್ ಮಾಜಿ ಅಧ್ಯಕ್ಷ ಧನಕೀರ್ತಿ ಆರಿಗ, ಮಾಜಿ ಸೈನಿಕ ಕಾಂಚೋಡು ಗೋಪಾಲಕೃಷ್ಣ ಭಟ್, ಶಿಕ್ಷಕರ ಸಂಘದ ಮಾಜಿ ಅಧ್ಯಕ್ಷ ಧರಣೇಂದ್ರ ಜೈನ್, ಪತ್ರಕರ್ತ ಬಿ.ಎಸ್.‌ಕುಲಾಲ್ ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು