News Karnataka Kannada
Monday, April 29 2024
ಮಂಗಳೂರು

ಬಂಟ್ವಾಳ: ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ ನಳಿನ್ ಕುಮಾರ್ ಕಟೀಲ್

Bantwal: Nalin Kumar Kateel inaugurates road development works
Photo Credit :

ಬಂಟ್ವಾಳ: ಗ್ರಾಮೀಣಾಭಿವೃದ್ಧಿ ಇಲಾಖೆ ಮತ್ತು ಲೋಕೋಪಯೋಗಿ ಇಲಾಖೆಯ ಒಟ್ಟು102.5 ಕೋಟಿ ರೂ.ವೆಚ್ಚದಲ್ಲಿ ಬಂಟ್ವಾಳ ಕ್ಷೇತ್ರದ 56 ಗ್ರಾಮಗಳ 253 ಗ್ರಾಮೀಣ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರ ಉಪಸ್ಥಿತಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ , ಸಂಸದ ನಳಿನ್ ಕುಮಾರ್ ಕಟೀಲ್ ಅವರು ಮಂಗಳವಾರ ಪೊಳಲಿಯಲ್ಲಿ ಚಾಲನೆ ನೀಡಿದರು.

ಪೊಳಲಿ ಶ್ರೀ ರಾಜರಾಜೇಶ್ವರಿ ದೇವಿಯ ಪೂಜೆಯ ಬಳಿಕ ಪ್ರಾರ್ಥನೆ ಸಲ್ಲಿಸಿ, ನಂತರ 40 ಲ.ರೂ.ವೆಚ್ಚದಲ್ಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಹಿಂಬದಿ ಚರಂಡಿ ನಿರ್ಮಾಣ,10 ಲ.ರೂ.ವೆಚ್ಚದಲ್ಲಿ ಶ್ರೀ ರಾಮಕೃಷ್ಣ ತಪೋವನ ಸಂಪರ್ಕ ರಸ್ತೆ ಹಾಗೂ ಗ್ರಾಮೀಣಾಭಿವೃದ್ದಿ ಇಲಾಖೆಯ 28 ಕೋ.ರೂ.ಗಳಲ್ಲಿ ಅನುಷ್ಠಾನಗೊಳ್ಳಲಿರುವ ವಿವಿಧ ಅಭಿವೃದ್ದಿ ಕಾಮಗಾರಿಗೆ ಅವರು ಶಿಲಾನ್ಯಾಸ ನೆರವೇರಿಸಿದರು.

ಅಭೂತಪೂರ್ವವಾದ ಅಭಿವೃದ್ದಿ ಕೆಲಸ:
ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಬಂಟ್ವಾಳ ಕ್ಷೇತ್ರದಲ್ಲಿ ಕಳೆದ ನಾಲ್ಕು ದಶಕಗಳಲ್ಲಿ ಆಗದಂತ ಅಭಿವೃದ್ಧಿ ಕೆಲಸಗಳು, ಶಾಸಕ ರಾಜೇಶ್ ನಾಯ್ಕ್ ಅವರ ಶಾಸಕತ್ವದ ನಾಲ್ಕು ವರ್ಷಗಳಲ್ಲಿ ಅಭೂತಪೂರ್ವವಾಗಿ ಕಾರ್ಯಗತಗೊಂಡಿದೆ ಎಂದು ಹೇಳಿದರು.

ಮುಖ್ಯಮಂತ್ರಿಗಳು ಹಾಗೂ ಅಧಿಕಾರಿಗಳ ಗಮನಸೆಳೆದು ಕೇಂದ್ರ ಮತ್ತು ರಾಜ್ಯ ಸರಕಾರದ ವಿವಿಧ ಯೋಜನೆಯಡಿ ಸುಮಾರು ಮೂರು ಸಾ. ಕೋ.ರೂ.ವಿನಲ್ಲಿ ಅಭಿವೃದ್ದಿ ಕಾರ್ಯಗಳನ್ನು ಬಂಟ್ವಾಳ ಕ್ಷೇತ್ರದಲ್ಲಿ ಸದ್ದುಗದ್ದಲವಿಲ್ಲದೆ ಕಾರ್ಯರೂಪಕ್ಕೆ ತಂದಿರುವ ಶಾಸಕ ರಾಜೇಶ್ ನಾಯ್ಕ್ ಅವರು ಚುನಾವಣಾ ಸಂದರ್ಭ ಜನರಿಗೆ ನೀಡಿರುವ ಆಶ್ವಾಸನೆಯನ್ನು ಈಡೇರಿಸಿರುವ ಜನನಾಯಕರಾಗಿದ್ದಾರೆ ಎಂದರು.

ಭ್ರಷ್ಟಾಚಾರಕ್ಕೆ ಅವಕಾಶವಿಲ್ಲ: ನಾಯ್ಕ್
ಇದೇ ವೇಳೆ ಶಾಸಕ ರಾಜೇಶ್ ನಾಯ್ಕ್ ಮಾತನಾಡಿ, ಕ್ಷೇತ್ರ ವ್ಯಾಪ್ತಿಯಲ್ಲಿ 1400 ರಸ್ತೆ ಗಳನ್ನು ಅಭಿವೃದ್ಧಿ ಪಡಿಸಲಾಗಿದ್ದು, ಯಾವುದೇ ಯೋಜನೆ ಅನುಷ್ಠಾನ ಗೊಳ್ಳುವ ಸಂದರ್ಭದಲ್ಲಿ ಜ‌ನರ ಸಹಭಾಗಿತ್ವವು ಅತ್ಯಗತ್ಯವಾಗಿದ್ದು, ಕಾಮಗಾರಿ ಅನುಷ್ಠಾನದ ವೇಳೆ ಉತ್ತಮ‌ಗುಣಮಟ್ಟಕ್ಕಾಗಿ ಜನರ ಸಲಹೆ ಸೂಚನೆಗಳು ಅತೀ ಅಗತ್ಯ. ಯಾವುದೇ ಭಷ್ಟಾಚಾರಕ್ಕೆ ಅವಕಾಶ ನೀಡದೆ ಕಾಮಗಾರಿ ಅನುಷ್ಠಾನಗೊಳಿಸುವುದಾಗಿ ಅವರು ಹೇಳಿದರು.

ಈ ಸಂದರ್ಭದಲ್ಲಿ ಮಾಜಿ ಶಾಸಕ ರುಕ್ಮಯ ಪೂಜಾರಿ, ಕ್ಷೇತ್ರ ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ, ಬೂಡಾ ಅಧ್ಯಕ್ಷ ದೇವದಾಸ ಶೆಟ್ಟಿ, ಪ್ರಮುಖರಾದ ಹರಿಕೃಷ್ಣ ಬಂಟ್ವಾಳ,ಮಾಜಿ ಜಿಪಂ ಸದಸ್ಯರಾದ ಸುಲೋಚನಾ ಜಿ.ಕೆ.ಭಟ್, ರವೀಂದ್ರ ಕಂಬಳಿ, ಕಮಲಾಕ್ಷಿ ಪೂಜಾರಿ,ತುಂಗಪ್ಪ ಬಂಗೇರ, ಮಾಜಿ ತಾಪಂ.ಸದಸ್ಯರಾದ ವೆಂಕಟೇಶ್ ನಾವುಡ ಪೊಳಲಿ,ಯಶವಂತ ಪೂಜಾರಿ ಪೊಳಲಿ,ಸೋಮಪ್ಪ ಕೋಟ್ಯಾನ್, ಮಾಧವ ಮಾವೆ,ಪ್ರಭಾಕರ ಪ್ರಭು ಕರ್ಪೆ,ಗಣೇಶ್ ಸುವರ್ಣ ತುಂಬೆ, ರತ್ನಕುಮಾರ್ ಚೌಟ,ಪ್ರಮುಖರಾದ ರಾಮದಾಸ್ ಬಂಟ್ವಾಳ, ಡೊಂಬಯ ಅರಳ, ರವೀಶ್ ಶೆಟ್ಟಿ, ನಂದರಾಮ ರೈ, ಪುಷ್ಪರಾಜ್ ಚೌಟ, ರಮಾನಾಥ ರಾಯಿ, ಉದಯಕುಮಾರ್ ರಾವ್ ಬಂಟ್ವಾಳ, ಸುದರ್ಶನ್ ಬಜ, ಅಭಿಷೇಕ್ ಶೆಟ್ಟಿ, ಪುರುಷೋತ್ತಮ ಶೆಟ್ಟಿ ವಾಮದಪದವು, ಗಣೇಶ್ ರೈ ಮಾಣಿ, ಸಚಿನ್ ಅಡಪ, ಮೋನಪ್ಪ ದೇವಸ್ಯ, ದಿನೇಶ್ ಅಮ್ಟೂರು, ಪ್ರಕಾಶ್ ಅಂಚನ್,ಚರಣ್ ಜುಮಾದಿಗುಡ್ಡೆ, ಯಶೋಧರ ಚೌಟ, ಸುಕೇಶ್ ಚೌಟ, ಕಿಶೋರ್ ಪಲ್ಲಿಪಾಡಿ, ಬಾಲಕೃಷ್ಣ ಸೆರ್ಕಳ, ಸಾಂತಪ್ಪ ಪೂಜಾರಿ, ಶರ್ಮಿತ್ ಜೈನ್, ಕಾರ್ತಿಕ್ ಬಳ್ಳಾಲ್, ಪ್ರೇಮನಾಥ ಶೆಟ್ಟಿ, ಪುರುಷೋತ್ತಮ ಸಾಲ್ಯಾನ್, ಕಿಶೋರ್ ಶೆಟ್ಟಿ, ಮಾಧವ ಕರ್ಬೆಟ್ಟು, ಧನಂಜಯ್ ಶೆಟ್ಟಿ ಸರಪಾಡಿ, ಯಶವಂತ ನಾಯ್ಕ್, ಸುಪ್ರೀತ್ ಆಳ್ವ,ಧಾರ್ಮಿಕ ಪರಿಷತ್ ಸದಸ್ಯ ಗಿರಿಪ್ರಕಾಶ್ ತಂತ್ರಿ, ದೇವಳದ ಅರ್ಚಕರಾದ ಮಾಧವ ಭಟ್ , ನಾರಾಯಣ ಭಟ್, ಪರಮೇಶ್ವರ ಭಟ್, ಕೆ. ರಾಮ್ ಭಟ್, ರಾಧಕೃಷ್ಣ ತಂತ್ರಿ ಪೊಳಲಿ,ಕಾರ್ತಿಕ್ ಬಳ್ಳಾಲ್, ಲೋಕೇಶ್ ಭರಣೆ, ಚಂದ್ರಾವತಿ ದೇವಾಡಿಗ,ಆನಂದ ಎ.ಶಂಭೂರು,ಯಶೋಧರ ಕರ್ಬೆಟ್ಟು, ವಜ್ರನಾಥ ಕಲ್ಲಡ್ಕ, ಸುರೇಶ್ ಕೋಟ್ಯಾನ್, ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗದ ಎಇಇ ತಾರಾನಾಥ ಸಾಲ್ಯಾನ್,ಗುತ್ತಿಗೆದಾರರಾದ ಎ.ಎಚ್.ಖಾದರ್, ಧೀರಜ್ ನಾಯ್ಕ್ ಲೋಕೋಪಯೋಗಿ ಎಇಇ ಜಯಪ್ರಕಾಶ್, ಇಂಜಿನಿಯರ್ ಗಳಾದ ಅರುಣ್ ಪ್ರಕಾಶ್ ,ಪ್ರೀತಂ,ಅಮೃತ್ ಕುಮಾರ್ ಮೊದಲಾದವರಿದ್ದರು.

ಸೆ.೨ ಕ್ಕೆ ಮೋದಿ ಮಂಗಳೂರಿಗೆ
ಸೆ.2 ರಂದು ಸಂಜೆ 4 ಗಂಟೆಗೆ ದೇಶದ ಪ್ರಧಾನಿ ನರೇಂದ್ರ ಮೋದಿಯವರು ಮಂಗಳೂರಿಗೆ ಅಗಮಿಸಲಿದ್ದು, ನವಮಂಗಳೂರು ಬಂದರಿನಲ್ಲಿ ನಡೆಯುವ ಸಾಗರಮಾಲಾ ಯೋಜನೆಯ ವಿವಿಧ ಯೋಜನೆಯ ಅಭಿವೃದ್ದಿ ಕಾಮಗಾರಿಗಳಿಗೆ ಶಿಲಾನ್ಯಾಸ ನೆರವೇರಿಸಲಿದ್ದು, ಕಾರ್ಯಕರ್ತರು,ಅಭಿಮಾನಿಗಳು ಸೇರಿದಂತೆ ಸಾರ್ವಜನಿಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಸಂಸದ ನಳಿನ್ ಕುಮಾರ್ ಕಟೀಲ್ ಈ ಸಂದರ್ಭ ಮನವಿ ಮಾಡಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
153
Mounesh V

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು