ಬಂಟ್ವಾಳ: ಚಲಿಸುತ್ತಿದ್ದ ಮಾರುತಿ ಓಮ್ನಿ ಕಾರಿನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ಕಾರು ಬೆಂಕಿಗಾಹುತಿಯಾದ ಘಟನೆ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ನಡೆದಿದೆ.
ದೇರಳಕಟ್ಟೆ ಮೂಲದ ಕುಟುಂಬ ಮಾಣಿ ಕಡೆಗೆ ಬರುತ್ತಿದ್ದಾಗ ಈ ಘಟನೆ ನಡೆದಿದೆ. ಕೂಡಲೇ ಸ್ಥಳೀಯರು ಆಗಮಿಸಿ ಬೆಂಕಿ ನಂದಿಸಲು ಯತ್ನಿಸಿದ್ದಾರೆ. ಘಟನೆ ಕುರಿತು ಮುನ್ಸೂಚನೆ ಅರಿತ ಪ್ರಯಾಣಿಕರು ಕೂಡಲೇ ವಾಹನ ನಿಲ್ಲಿಸಿ ಹೊರಕ್ಕೆ ಬಂದಿದ್ದಾರೆ.
ಸ್ಥಳೀಯ ಸರ್ವೀಸ್ ಸ್ಟೇಷನ್ ನಿಂದ ನೀರು ಹರಿಸಲಾಯಿತು. ಘಟನೆಯಲ್ಲಿ ವಾಹನ ಸಂಪೂರ್ಣವಾಗಿ ಬೆಂಕಿಗಾಹುತಿಯಾಗಿದೆ.