News Karnataka Kannada
Wednesday, May 08 2024
ಮಂಗಳೂರು

ಬಂಟ್ವಾಳ: ಬಂಟ್ವಾಳ ಬೈಪಾಸ್ ಮುಖ್ಯವೃತ್ತಕ್ಕೆ ಡಾ.ಅಮ್ಮೆಂಬಳ ಬಾಳಪ್ಪ ಅವರ ಹೆಸರು ನಾಮಕರಣ

Bantwal bypass main circle to be named after Dr. Ammambala Balappa
Photo Credit : By Author

ಬಂಟ್ವಾಳ: ಇತ್ತೀಚೆಗಷ್ಟೇ ಉದ್ಘಾಟನೆಗೊಂಡಿರುವ ಬಿ.ಸಿ.ರೋಡು ಪುಂಜಾಲಕಟ್ಟೆ ಚತುಷ್ಪಥ ರಾಷ್ಟ್ರೀಯ ಹೆದ್ದಾರಿಯ ಬಂಟ್ವಾಳ ಬೈಪಾಸ್‍ನ ಮುಖ್ಯ ವೃತ್ತಕ್ಕೆ ಹಿರಿಯ ಸ್ವಾತಂತ್ಯ್ರ ಹೋರಾಟಗಾರ ಡಾ. ಅಮ್ಮೆಂಬಳ ಬಾಳಪ್ಪ ಅವರ ಹೆಸರು ದಿಢೀರ್ ನಾಮಕರಣಗೊಂಡಿದೆ.

ದೇಶ ಸ್ವಾತಂತ್ರ್ಯ ಅಮೃತ ಮಹೋತ್ಸವದ ಸಂಭ್ರಮದಲ್ಲಿದ್ದರೆ, ದಿ. ಡಾ. ಅಮ್ಮೆಂಬಳ ಬಾಳಪ್ಪರಪ್ಪರಿಗೆ ಜನ್ಮ ಶತಾಬ್ದಿಯ ಸಂಭ್ರಮ. ಈ ಸವಿನೆನೆಪಿಗಾಗಿ ಕರಾವಳಿ ಕುಲಾಲ ಕುಂಬಾರ ಯುವ ವೇದಿಕೆ ಹಾಗೂ ಡಾ. ಅಮ್ಮೆಂಬಳ ಬಾಳಪ್ಪ ಅವರ ಅಭಿಮಾನಿಗಳು ಬೈಪಾಸ್ ವೃತ್ತಕ್ಕೆ ಬಾಳಪ್ಪರ ಹೆಸರು ನಾಮಕರಣಗೊಳಿಸಿದ್ದಾರೆ.

ದ.ಕ. ಜಿಲ್ಲೆಯ ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ಅಮ್ಮೆಂಬಳ ಬಾಳಪ್ಪನವರು ತಮ್ಮ ಇಡೀ ಜೀವನವನ್ನು ದೇಶದ ಸ್ವತಂತ್ರ್ಯಕ್ಕಾಗಿ ಮುಡಿಪಿಟ್ಟು ಆದರ್ಶಮಯ ಜೀವನ ಸವೆಸಿದವರು. ಪ್ರತಿ ವರ್ಷ ಸ್ವಾತಂತ್ಯೋತ್ಸವ ಹಾಗೂ ಬಾಳಪ್ಪರ ಜನ್ಮದಿನೋತ್ಸವದ ಸಂದರ್ಭದಲ್ಲಿ ಮಾತ್ರ ಬಾಳಪ್ಪರನ್ನು ನೆನೆಪಿಸಿಕೊಳ್ಳಲಾಗುತ್ತಿದೆಯೇ ವಿನಃ ಈ ವರ್ಷ ಬಾಳಪ್ಪರ ಜನ್ಮ ಶತಾಬ್ದಿ ವರ್ಷ ಆಚರಿಸುತ್ತಿರುವ ಸಂದರ್ಭದಲ್ಲೂ ಬಾಳಪ್ಪರ ಸ್ಮರಣಾರ್ಥ ಯಾವುದೇ ಶಾಶ್ವತ ಯೋಜನೆಗಳನ್ನು ಜಿಲ್ಲಾಡಳಿತ ಮಾಡಿಲ್ಲ ಎನ್ನುವ ಆರೋಪ ಇದೆ. ಬಂಟ್ವಾಳ ತಾಲೂಕು ಬಾಳಪ್ಪರ ಹುಟ್ಟೂರು ಆಗಿರುವ ಕಾರಣ ಕನಿಷ್ಟ ಒಂದು ವೃತ್ತಕ್ಕಾದರೂ ಬಾಳಪ್ಪರ ಹೆಸರು ಇಡಬೇಕೆನ್ನುವ ಆಶಯ ಅವರ ಅಭಿಮಾನಿಗಳದ್ದಾಗಿತ್ತು. ಆ ನಿಟ್ಟಿನಲ್ಲಿ ಅಭಿವೃದ್ದಿಯ ಪಥದಲ್ಲಿರುವ ಮೆಲ್ಕಾರ್ ವೃತ್ತಕ್ಕೆ ಬಾಳಪ್ಪರ ಹೆಸರನ್ನು ನಾಮಕರಣ ಮಾಡಬೇಕೆನ್ನುವ ಪ್ರಸ್ತಾಪವನ್ನು ಮುಂದಿಡಲಾಗಿತ್ತು. ಕರಾವಳಿ ಕುಲಾಲ ಕುಂಬಾರ ಯುವ ವೇದಿಕೆಯ ಮೂಲಕ ಇದಕ್ಕೆ ಬೇಕಾದ ಎಲ್ಲಾ ಪ್ರಯತ್ನಗಳನ್ನು ಮಾಡಲಾಗಿತ್ತು.

ಈ ವಿಚಾರವಾಗಿ ಜನಪ್ರತಿನಿಧಿಗಳ ಗಮನವನ್ನು ಸೆಳೆಯಲಾಗಿತ್ತು. ಬಿ.ಸಿ.ರೋಡು ಅಡ್ಡಹೊಳೆ ರಾ.ಹೆದ್ದಾರಿ ನಿರ್ಮಾಣಗೊಂಡ ಬಳಿಕ ಸುಂದರವಾದ ವೃತ್ತ ನಿರ್ಮಾಣಗೊಳ್ಳುತ್ತದೆ, ಆಗ ಬಾಳಪ್ಪರ ಹೆಸರು ನಾಮಕರಣ ಮಾಡೋಣ ಎನ್ನುವ ಭರವಸೆಯೂ ಸಿಕ್ಕಿತ್ತು. ಅದಕ್ಕಾಗಿ ಇಷ್ಟು ವರ್ಷ ಕಾಯಲಾಗಿತ್ತು.

ಪ್ರಸ್ತುತ ಮೆಲ್ಕಾರ್ ಬಳಿ ಅಂಡರ್ ಪಾಸ್ ನಿರ್ಮಾಣಗೊಂಡು ಇದ್ದ ಸಣ್ಣ ವೃತ್ತವೂ ತೆರವುಗೊಂಡಿದೆ. ಇನ್ನು ಮೆಲ್ಕಾರ್ ನಲ್ಲಿ ಬಾಳಪ್ಪ ವೃತ್ತದ ಕನಸು ಈಡೇರುವುದು ದೂರದ ಮಾತು ಎಂದರಿತುಕೊಂಡಿರುವ ಅವರ ಅಭಿಮಾನಿ ಬಳಗ ಕರಾವಳಿ ಕುಲಾಲ ಕುಂಬಾರ ಯುವ ವೇದಿಕೆಯ ಮುಂದಾಳತ್ವದಲ್ಲಿ ಸ್ವಾತಂತ್ರ್ಯ ಅಮೃತ ಮಹೋತ್ಸವ ಹಾಗೂ ಬಾಳಪ್ಪರ ಜನ್ಮಶತಮಾನೋತ್ಸವದ ಪ್ರಯುಕ್ತ ಬಂಟ್ವಾಳ ಬೈಪಾಸ್ ರಸ್ತೆಗೆ ಸ್ವಾತಂತ್ರ್ಯ ಹೋರಾಟಗಾರ ಡಾ. ಅಮ್ಮೆಂಬಳ ಬಾಳಪ್ಪ ಎಂದು ನಾಮಕರಣಗೊಳಿಸಿ ಸ್ವಾತಂತ್ರ್ಯ ಸೇನಾನಿಗೆ ಗೌರವ ಸಲ್ಲಿಸಿದೆ.

ಸ್ವಾತಂತ್ರ್ಯ ಅಮೃತ ಮಹೋತ್ಸವದ ಪ್ರಯುಕ್ತ ವೃತ್ತದಲ್ಲಿ ತ್ರಿವರ್ಣ ಬಾವುಟ ಹಾರಿಸಲಾಯಿತು. ಈ ಸಂದರ್ಭ ಬಂಟ್ವಾಳ ಛಾಯಾಗ್ರಹಕಾರ ಸಂಘದ ಅಧ್ಯಕ್ಷ ಹರೀಶ್ ಕುಂದರ್, ಯುವ ವೇದಿಕೆಯ ಹಿರಿಯ ಸ್ಥಾಪಕ ಸದಸ್ಯ ದೇವಪ್ಪ ಪಂಜಿಕಲ್ಲು, ಸ್ಥಳೀಯರಾದ ವೆಂಕಪ್ಪ ಪೂಜಾರಿ, ಉದ್ಯಮಿ ಕೇಶವ ಬಾಳೆಹಿತ್ಲು, ರಮೇಶ್ ಬಾಳೆಹಿತ್ಲು, ಹಿರಿಯರಾದ ಸುಂದರ ಕುಲಾಲ್, ಯುವ ವೇದಿಕೆ ಜಿಲ್ಲಾಧ್ಯಕ್ಷ ಸುಕುಮಾರ್ ಬಂಟ್ವಾಳ, ಯುವ ವೇದಿಕೆ ಬಂಟ್ವಾಳ ಅಧ್ಯಕ್ಷ ಸಂತೋಷ್ ಮರ್ತಾಜೆ, ವಿಭಾಗಿಯ ಕೋಶಾಧಿಕಾರಿ ವಿಠಲ ಪಲ್ಲಿಕಂಡ, ಯುವ ವೇದಿಕೆ ಕಾರ್ಯದರ್ಶಿ ನಿತೀಶ್ ಪಲ್ಲಿಕಂಡ ಸದಸ್ಯರಾದ ನಾರಾಯಣ ಹೊಸ್ಮಾರ್, ರಾಮ, ರವಿ ನೆರಂಬೋಳು, ಸಚಿನ್ ನೆರಂಬೋಳು, ಉಮೇಶ್ ಮೂಲ್ಯ, ಸೋಮನಾಥ ಸಾಲ್ಯಾನ್, ಮಾಧವ ಬಿ.ಸಿ ರೋಡ್, ಎಚ್ಕೆ ನಯನಡು, ವಿತೇಷ್ ಕಾಮಾಜೆ, ಅಶೋಕ್ ಟೈಲರ್, ಗಣೇಶ್ ಕಾಮಾಜೆ, ನಾಗೇಶ್ ಬಾಳೆಹಿತ್ಲು ಉಪಸ್ಥಿತರಿದ್ದರು

ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಕೀರ್ತಿಶೇಷ ದ. ಡಾ. ಅಮ್ಮೆಂಬಳ ಬಾಳಪ್ಪ ಅವರು ಜನ್ಮಶತಮನೋತ್ಸವದ ಸಂಭ್ರಮದಲ್ಲಿರುವ ಈ ಕಾಲಘಟ್ಟದಲ್ಲಿ ಅವರ ಹೆಸರು ಚಿರಸ್ಥಾಯಿಯಾಗಬೇಕು ಎನ್ನುವುದು ನಮ್ಮ ಆಶಯ. ಐದು ವರ್ಷಗಳ ನಮ್ಮ ಕನಸು ಈಗ ನನಸಾಗಿದೆ. – ಸುಕುಮಾರ್ ಬಂಟ್ವಾಳ್, ಜಿಲ್ಲಾಧ್ಯಕ್ಷರು ಕುಲಾಲ ಕುಂಬಾರರ ಯುವ ವೇದಿಕೆ

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
153
Mounesh V

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು