ಮಂಗಳೂರು: ಮಾರ್ಚ್ 25ರಂದು ಆಸ್ಟ್ರೇಲಿಯದ ನ್ಯೂ ಸೌತ್ ವೇಲ್ಸ್ ರಾಜ್ಯದ ಅಸೆಂಬ್ಲಿ ಚುನಾವಣೆಯಲ್ಲಿ ಕೊಡಗಿನ ಚರಿಶ್ಮಾ ಅವರು ಭಾರೀ ಅಂತರದಲ್ಲಿ ಜಯಗಳಿಸಿ ಇತಿಹಾಸ ನಿರ್ಮಿಸಿದ್ದಾರೆ.
ಈಕೆ ಕೊಳಕೇರಿಯವರಾದ ಕಲಿಯಂಡ ಮಾದಪ್ಪ ಮತ್ತು ಭಾನುಮತಿ ಅವರ ಪುತ್ರಿ. 35 ವರ್ಷದ ಚರಿಶ್ಮಾ ಅವರು ಲೇಬರ್ ಪಕ್ಷದ ಸದಸ್ಯರಾಗಿದ್ದು, ಈ ಹಿಂದೆ ಎರಡು ಬಾರಿ ಹೋಲ್ಸ್ ವರ್ತಿ ಸ್ಥಾನದಿಂದ ಸ್ಪರ್ಧಿಸಿದ್ದರು.