News Karnataka Kannada
Tuesday, April 30 2024
ಮಂಗಳೂರು

ಮಂಗಳೂರಿನಲ್ಲಿ ಮಾದಕ ವಸ್ತು ಮಿಶ್ರಿತ 100 ಕೆ.ಜಿ ಚಾಕೊಲೆಟ್‌ ವಶಕ್ಕೆ

100 kg of narcotic chocolate seized in Mangaluru
Photo Credit : News Kannada

ಮಂಗಳೂರು: ಪಾಂಡೇಶ್ವರ ಪೊಲೀಸರು ಕಾರ್ಯಾಚರಣೆ ನಡೆಸಿ ನಗರದ ಎರಡು ಕಡೆ ಮಾರಾಟ ಮಾಡಲಾಗುತ್ತಿದ್ದ ಸುಮಾರು100 ಕೆ.ಜಿಯಷ್ಟು ಮಾದಕ ವಸ್ತು ಮಿಶ್ರಿತ ಚಾಕೊಲೆಟ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ನಗರದ ರಥಬೀದಿಯಲ್ಲಿ ಮನೋಹರ್ ಶೇಟ್ ಮತ್ತು ನಗರದ ಫಳ್ನೀರ್ ನ ಗೂಡಂಗಡಿಯಲ್ಲಿ ಉತ್ತರ ಪ್ರದೇಶ ಮೂಲದ ಬೆಚನ್ ಸೋನ್ಕರ್ ಎಂಬಾತ ಮಾದಕ ವಸ್ತು ಮಿಶ್ರಿತ ಬಾಂಗ್ ಎಂಬ ಚಾಕೊಲೆಟ್ ಗಳನ್ನು ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿ ಒಟ್ಟು ಸುಮಾರು 100ಕೆಜಿ ಚಾಕೊಲೆಟ್ ಗಳನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.

ಈ ಚಾಕೊಲೆಟ್ ನ ಮಾದರಿಗಳನ್ನು ಹೆಚ್ಚಿನ ಪರೀಕ್ಷೆಗಾಗಿ ವಿಧಿವಿಜ್ಞಾನ ಪ್ರಯೋಗಲಯಕ್ಕೆ ಕಳುಹಿಸಿದ್ದು, ಅದರ ವರದಿ ಆಧಾರದಲ್ಲಿ ಪೊಲೀಸರು ಮುಂದಿನ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು