News Karnataka Kannada
Sunday, May 05 2024
ಮಂಗಳೂರು

ಸ್ಪಿಯರ್‌ಹೆಡ್ ಮೀಡಿಯಾ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಕೆನ್ಯುಟ್ ಪಿಂಟೊ ನೇಮಕ

Canute Pinto
Photo Credit : News Kannada

ಮಂಗಳೂರು: ಮಾಧ್ಯಮ ಮತ್ತು ಮಾರುಕಟ್ಟೆ ತಜ್ಙ ಮತ್ತು ಸ್ಪಿಯರ್‌ಹೆಡ್ ಮೀಡಿಯಾ ಗ್ರೂಪ್ನ ನಿರ್ದೇಶಕರಾದ ಕೆನ್ಯುಟ್ ಜೀವನ್ ಪಿಂಟೊರವರು ಮೇ 1ರಿಂದ ಕಂಪನಿಯ ಕಾರ್ಯನಿರ್ವಾಹಕ ನಿರ್ದೇಶಕರಾಗಿ ನೇಮಕಗೊಂಡಿದ್ದಾರೆ.

ಕೆನ್ಯುಟ್‌ರವರು ಸ್ಪಿಯರ್‌ಹೆಡ್ ಮೀಡಿಯಾ ಗ್ರೂಪ್‌ನೊಂದಿಗೆ ಬಿಸ್‌ನೆಸ್ ಡೆವಲಪ್‌ಮೆಂಟ್ ಆಫೀಸರ್ ಆಗಿ, ಮಾಧ್ಯಮ ಸಮೂಹಗಳಾದ ನ್ಯೂಸ್ ಕರ್ನಾಟಕ, ನ್ಯೂಸ್ ಕನ್ನಡ, ಕರ್ನಾಟಕ ಟುಡೆ ಮ್ಯಾಗಜೀನ್, ಎನ್‌ಕೆ ಪ್ಲಸ್ ಇ-ಮ್ಯಾಗಝಿನ್ ಮತ್ತು ಅದರ ಸಕ್ರಿಯ ಸಾಮಾಜಿಕ ಮಾಧ್ಯಮ ಪುಟಗಳನ್ನು ಹೊಂದಿದೆ.

ಮಂಗಳೂರಿನ ಕಚೇರಿಗೆ ಸೇರುವ ಮೊದಲು ಮಧ್ಯಪ್ರಾಚ್ಯದಲ್ಲಿ ಕಂಪೆನಿಯ ಮಾರ್ಕೆಟಿಂಗ್ ಮತ್ತು ಪಿಆರ್ ಚಟುವಟಿಕೆಯಲ್ಲಿ ಕಾರ್ಯನಿರ್ವಹಿಸಿರುತ್ತಾರೆ. ಕಳೆದ 5 ವರ್ಷಗಳಿಂದ ಕಂಪೆನಿಯ ಪಿಆರ್ ಮತ್ತು ಮಾರುಕಟ್ಟೆ ಚಟುವಟಿಕೆಕೆಗಳನ್ನು ನಿರ್ವಹಿಸುವುದರ ಜತೆಗೆ ನವಯುಗ ಮಾಧ್ಯಮ ಕಂಪನಿಗೆ ಉತ್ತಮ ಬೆಂಬಲವನ್ನು ನೀಡುತ್ತಿದಾರೆ.

ಮೆಕ್ಯಾನಿಕಲ್ ಡಿಪ್ಲೊಮಾ ಪದವೀಧರರಾದ ಇವರು ಮಾಧ್ಯಮದಿಂದ ಆಟೋಮೊಬೈಲ್ ಗಳವರೆಗೆ ವಿವಿಧ ಉಧ್ಯಮಗಳ ವಿಭಾಗದಲ್ಲಿ ಕಾರ್ಯನಿರ್ವಹಿಸುವಲ್ಲಿ 15 ವರ್ಷಗಳ ಸ್ಥಳೀಯ ಮತ್ತು ಅಂತರಾಷ್ಟ್ರೀಯ ಅನುಭವವನ್ನು ಹೊಂದಿರುತ್ತಾರೆ. ದಕ್ಷ ಸಂಯೋಜನೆಯಲ್ಲಿ, ಸ್ಪಿಯರ್‌ಹೆಡ್ ಗ್ರೂಪ್ ಕಾರ್ಯಚಟುವಟಿಕೆಯ ನಿರ್ವಹಣೆ, ಸಂಪನ್ಮೂಲಗಳ ಸರಿಯಾದ ರೀತಿಯ ಬಳಕೆಯಿಂದ ಸಮೂಹ ಸಂಸ್ಥೆಯಾಗಿ ಬೆಳೆಯಲು ಸಹಾಕಾರಿಯಾಗಿದ್ದಾರೆ.

ಇವರು ಮಾಧ್ಯಮದಲ್ಲಿ ಆಸಕ್ತಿಯನ್ನು ಹೊಂದಿದ್ದು, ಕೆಲವು ಸ್ಥಳೀಯ ಪತ್ರಿಕೆಗಳಲ್ಲಿ ಸೇವೆಸಲ್ಲಿಸಿದ ಉತ್ತಮ ಅನುಭವಹೊಂದಿದ್ದಾರೆ. ಇವರ ಮಾರ್ಕೆಟಿಂಗ್ ಕೌಶಲ್ಯಗಳು ಬಿ2ಬಿ ಮತ್ತು ಬಿ2ಸಿ ಎರಡೂ ಸಂದರ್ಭಗಳಲ್ಲಿ ಹೊರಹೊಮ್ಮುತ್ತವೆ.

ಪ್ರಸ್ತುತ ರೋಟರಿ ಕ್ಲಬ್ ಆಫ್ ಮಂಗಳೂರು ಸಿಟಿಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಕರ್ನಾಟಕ ಸರ್ಕಾರವು ಎರಡು ವರ್ಷಗಳ ಅವಧಿಗೆ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಗೆ ನೇಮಿಸಲಾಗಿತ್ತು.

ನ್ಯೂಸ್ ಕರ್ನಾಟಕದೊಂದಿಗೆ ಮಾತನಾಡಿದ ಪಿಂಟೋ “ಸ್ಪಿಯರ್‌ಹೆಡ್ ಮೀಡಿಯಾದಲ್ಲಿ ಜನರಿಗೆ ಸರಿಯಾದ ಮಾಹಿತಿಯನ್ನು ನೀಡುವ ಗುರಿಯನ್ನು ಹೊಂದಿದ್ದೇವೆ ಮತ್ತು ಸರಿಯಾದ ಮಾಹಿತಿಯನ್ನು ಪಡೆಯುವುದು ಪ್ರತಿಯೊಬ್ಬ ನಾಗರಿಕನ ಹಕ್ಕು. ನಾವು ಇದನ್ನು ಎಲ್ಲಾ ಸಮಯದಲ್ಲೂ ಮುಂದುವರಿಸುತ್ತೇವೆ. ಶೀಘ್ರದಲ್ಲೇ ಕಂಪನಿಯ ಪ್ರಮುಖ ಬ್ರಾಂಡ್ ನ್ಯೂಸ್ ಕರ್ನಾಟಕದ ದಶವಾರ್ಷಿಕ ವರ್ಷವನ್ನು ಆಚರಿಸಿ, ಈ ಹಂತದಲ್ಲಿ ನಾವು ನಮ್ಮ ಸಿದ್ದಾಂತಗಳ ಮೇಲೆ ನಿಂತಿದ್ದೇವೆ ಮತ್ತು ಅದಕ್ಕಾಗಿ ಸ್ಥಾಪಿತ ಓದುಗರ ನೆಲೆಯನ್ನು ರಚಿಸಿದ್ದೇವೆ ಎಂದು ಹೆಮ್ಮಯಿಂದ ಹೇಳಬಹುದು.

ಸ್ಪಿಯರ್‌ಹೆಡ್ ಮೀಡಿಯಾ ಮೊದಲ ದಿನದಿಂದ ಯುವಕರಿಗೆ ಹೆಚ್ಚಿನ ಉದೋಗಾವಕಾಶಗಳನ್ನು ಸೃಷ್ಟಿಸುವ ಉದ್ದೇಶವನ್ನು ಹೊಂದಿದ್ದು ಮತ್ತು ನಾವು ಅದನ್ನು ಕಟ್ಟುನಿಟ್ಟಾಗಿ ಮಾಡುತ್ತಿದ್ದೇವೆ. ಮುಂಬರುವ ವರ್ಷಗಳಲ್ಲಿ ನಮ್ಮ ಗಮನವು ನಮ್ಮೊಂದಿಗೆ ಸೇರಲು ಹಾಗೂ ಬೆಳೆಯಲು ಹೆಚ್ಚು ಹೆಚ್ಚು ಜನರನ್ನು ತೊಡಗಿಸಿಕೊಳ್ಳಲಾಗುವುದು. ಸ್ಪಿಯರ್ ಹೆಡ್ ಅಕಾಡೆಮಿ ಶೀಘ್ರದಲ್ಲೇ ಪ್ರಾರಂಭವಾಗಲಿದೆ ಮತ್ತು ಇಂದಿನ ವ್ಯವಸ್ಥೆಯಲ್ಲಿ ಕಾಣೆಯಾಗಿರುವ ಪ್ರಾಯೋಗಿಕ ಪತ್ರಿಕೋದ್ಯಮವನ್ನು ಕಲಿಯುವ ಸಂಸ್ಥೆಯ ಅಗತ್ಯವನ್ನು ಶೀಘ್ರದಲ್ಲಿ ಪೂರೈಸಲಿದೆ. ಸ್ಪಿಯರ್ ಹೆಡ್ ಮಾಧ್ಯಮವು ಕಾರ್ನಾಟಕದ ಎಲ್ಲಾ ನಗರಗಳಿಗೆ ಕಾಲಿಡಲಿದೆ ಮತ್ತು ಪ್ರಪಂಚದಾದ್ಯಂತ ಇರುವ ಕನ್ನಡಿಗರಿಗೆ ನಿಜವಾದ ಮತ್ತು ಸಕಾರಾತ್ಮಕ ಸುದ್ದಿಗಳನ್ನು ಬಿತ್ತರಿಸುವ ಸಂಸ್ಥೆಯಾಗಿಸುವುದು ನನ್ನ ಗುರಿಯಾಗಿದೆ ಎಂದು ಕೆನ್ಯುಟ್ ಪಿಂಟೊ ಹೇಳಿದರು.

ಸ್ಪಿಯರ್‌ಹೆಡ್ ಮೀಡಿಯಾ
ಸಿಯರ್‌ಹೆಡ್ ಮೀಡಿಯಾ ಪ್ರೈ ಲಿಮಿಟೆಡ್ ಗರಿಷ್ಟ ಉದ್ಯೋಗವಾಕಾಶದ ಧ್ಯೇಯವಾಕ್ಯದೊಂದಿಗೆ ಜನಿಸಿದ ಸಂಸ್ಥೆಯನ್ನು 2013 ರಲ್ಲಿ ಮಂಗಳೂರಿನಲ್ಲಿ ಸ್ಥಾಪಿಸಲಾಯಿತು. ಇಲ್ಲಿ ಕನ್ನಡ ಪತ್ರಿಕೊದ್ಯಮವು ಶತಮಾನಗಳ ಹಿಂದೆ ಪ್ರಾರಂಭವಾಯಿತು. ಸಿಯರ್‌ಹೆಡ್ ಮೀಡಿಯಾ ಪ್ರೈ ಲಿಮಿಟೆಡ್ ಗುಂಪುನಿಧಿ ಮೂಲಕ ಸ್ಥಾಪಿತವಾದ ಜನರಿಗಾಗಿ, ಜನರ ಮತ್ತು ಜನರಿಂದ ಆರಂಭವಾದ ಸಂಸ್ಥೆ.

ಇಂದು ಸ್ಪಿಯರ್‌ಹೆಡ್ ಮೀಡಿಯಾವನ್ನು ಪೀಪಲ್ಸ್ ಕಾರ್ಪೊರೇಟ್ ಎಂದು ಕರೆಯಲಾಗುತ್ತದೆ. ಇದರಲ್ಲಿ 45+ ಷೇರುದಾರರು, 100+ ಕೊಡುಗೆದಾರರು, ಜಾಹೀರಾತು ಪಾಲುದಾರರು, ವೈಯಕ್ತಿಕ ಫಲಾನುಭವಿಗಳು ಮತ್ತು ಯುವ ಕ್ರಿಯಾತ್ಮಕ ಪತ್ರಕರ್ತರ ಅಂತರಿಕ ತಂಡ ಮತ್ತು ನಿಯತಕಾಲಿಕವಾಗಿ ತನ್ನನು ತಾನು ಬದಾಲಾಯಿಸುವ ಸಾಧ್ಯತೆ ಇದೆ.

ಸ್ಪಿಯರ್ ಹೆಡ್ ಮೀಡಿಯಾ ಪ್ರೈ ಲಿಮಿಟೆಡ್, ಮಂಗಳೂರಿನ ಚಾಣಕ್ಯ ಮೀಡಿಯಾ ಹೌಸ್ ಆಫ್ ದಿ ಇಯರ್ ಪ್ರಶಸ್ತಿಯನ್ನು ಘಟಿಕೋತ್ಸವದಲ್ಲಿ ಪಡೆದುಕೊಂಡಿತು. ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರಿಂದ ಸಂಸ್ಥೆಯ ನಿರ್ದೇಶಕ ಕೆನ್ಯುಟ್ ಜೆ . ಪಿಂಟೋ, ಸಂಪಾದಕ ಶ್ರೀನಿವಾಸ ಪೇಜಾತ್ತಾಯ ಮತ್ತು ಸಲಹಾ ಮಂಡಳಿ ಸದಸ್ಯೆ ಸಮೀರ ಫರ್ನಾಂಡಿಸ್ ಪ್ರಶಸ್ತಿ ಸ್ವೀಕರಿಸಿದರು.

ಸ್ಪಿಯರ್ ಹೆಡ್ ಮೀಡಿಯಾ ಗ್ರೂಪ್‌ನ ಇತರ ಅಂಗಸಂಸ್ಥೆಗಳೆಂದರೆ ನ್ಯೂಸ್ ಕನ್ನಡ.ಕಾಮ್, ಕನ್ನಡ ನ್ಯೂಸ್ ಪೋರ್ಟಲ್, ಕರ್ನಾಟಕ ಟುಡೆ, ಮಾಸಿಕ ಎಲ್ಲಾ ಬಣ್ಣದ ಇಂಗ್ಲಿಷ್ ವೈಶಿಷ್ಟ್ಯ ನಿಯತಕಾಲಿಕೆ, ಎನ್‌ಕೆ ಪ್ಲಸ್, ರಾಜ್ಯದ ಯುವಕರಿಗೆ ದ್ವಿಭಾಷಾ ಇ-ಮ್ಯಾಗಝಿನ್, ಎನ್‌ಕೆ ಟಿವಿ ಇನ್ಪೋಟೈನ್‌ಮೆಂಟ್ ಶೋಗಳಿಗೆ ಯು ಟ್ಯೂಬ್ ವೇದಿಕೆ, ಎನ್‌ಕೆ ಲೈವ್ ಈವೆಂಟ್‌ಗಳನ್ನು ಕವರ್ ಮಾಡಲು, ಎನ್‌ಕೆ ಲರ್ನ್, ಇ-ಲರ್ನಿಂಗ್ ಪ್ಲಾಟ್‌ಫಾರ್ಮ್, ವರ್ಡಿವೈಸ್-ವಿನ್ಯಾಸ ಮತ್ತು ಡಿಜಿಟಲ್ ಮೀಡಿಯಾ ಹಬ್, ವಿಲೇಜ್ ಟಿವಿ, ಗ್ರಾಮೀಣ ಯುವಕರಿಗೆ ಸಾಮಾಜಿಕ ಉಪಕ್ರಮ ಮತ್ತು ಉದಯೋನ್ಮುಖ ಸ್ಪಿಯರ್ ಹೆಡ್ ಅಕಾಡೆಮಿ, ಅನಂತ ಸಾಧ್ಯತೆಗಳೊಂದಿಗೆ ಮಾಧ್ಯಮ ಅಧ್ಯಯನ ಕೇಂದ್ರ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು