ಮಂಗಳೂರು : ಕಲಿಕಾ ಚಾಲನಾ, ಚಾಲನಾ ಪತ್ರ ನವೀಕರಣ, ನಕಲು ಚಾಲನಾ ಪತ್ರ, ಚಾಲನಾ ಪತ್ರದಲ್ಲಿ ಹೆಸರು ಹಾಗೂ ವಿಳಾಸ ಬದಲಾವಣೆಯಂತಹ ಸೇವೆಗಳನ್ನು ಸಂಪರ್ಕ ರಹಿತವಾಗಿ ಪಡೆಯಲು ಸಾರಿಗೆ ಇಲಾಖೆಯಿಂದ ಅವಕಾಶ ಕಲ್ಪಿಸಲಾಗಿದೆ.
ವೆಬ್ಸೈಟ್ www.parivahan.gov.in ನಲ್ಲಿ ಆಧಾರ್ ದೃಢೀಕರಣದ ಮೂಲಕ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಿ ಸಂಪರ್ಕ ರಹಿತ ಸೇವೆಗಳನ್ನು ಪಡೆಯಬಹುದು.
ಸೂಕ್ತ ದಾಖಲೆಗಳನ್ನು ಅಪ್ಲೋಡ್ ಮಾಡಿ, ಆನ್ಲೈನ್ ಮೂಲಕ ಶುಲ್ಕ ಪಾವತಿಸಿ ಪ್ರಾದೇಶಿಕ ಸಾರಿಗೆ ಕಚೇರಿಗೆ ಭೇಟಿ ನೀಡದೆ ಸೇವೆಗಳನ್ನು ಪಡೆಯಬಹುದಾಗಿರುತ್ತದೆ ಎಂದು ಪುತ್ತೂರು ಪ್ರಾದೇಶಿಕ ಸಾರಿಗೆ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.