ಮಂಗಳೂರು: ಸಂತ ಆಂತೋನಿಯ ಆಶ್ರಮ, ಜೆಪ್ಪು ಇದರ ಪಾಲಕರಾದ ಸಂತ ಆಂತೋನಿಯವರ ವಾರ್ಷಿಕ ಹಬ್ಬಕ್ಕೆ ಮೇ. 31 ಮಂಗಳವಾರದಂದು ಬಲಿಪೂಜೆಯ ಮೂಲಕ ಚಾಲನೆ ನೀಡಲಾಯಿತು.
ವಾರ್ಷಿಕ ಹಬ್ಬಕ್ಕೆ ತಯಾರಿಯಾಗಿ 13 ದಿವಸಗಳ ನೊವೆನ ಪ್ರಾರ್ಥನೆಯನ್ನು ಹಮ್ಮಿಕೊಳ್ಳಲಾಗಿದೆ. ಪ್ರಥಮ ದಿವಸದ ನೊವೆನೆಯ ಪ್ರಾರ್ಥನೆಯ ಬಲಿಪೂಜೆಯನ್ನು ವಂದನೀಯ ಫಾದರ್ ಅನಿಲ್ ಡಿ’ಸೋಜರವರು ಅರ್ಪಿಸಿದರು. ಎಲ್ಲಾ ವಿವಾಹಿತ ಜೋಡಿಗಳಿಗೆ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸಲಾಯಿತು.
ಆಶ್ರಮದ ನಿರ್ದೇಶಕರಾದ ವಂದನೀಯ ಫಾದರ್ ಜೆ. ಬಿ. ಕ್ರಾಸ್ತಾ, ಸಹಾಯಕ ನಿರ್ದೇಶಕರಾದ ಫಾದರ್ ರೂಪೇಶ್ ತಾವ್ರೊ, ಫಾದರ್ ಲ್ಯಾರಿ ಪಿಂಟೊ ಸಹ ಬಲಿಪೂಜೆ ಆರ್ಪಿಸಿದರು. ನೂರಾರು ಭಕ್ತಾಧಿಗಳು ಬಲಿಪೂಜೆಯಲ್ಲಿ ಪಾಲ್ಗೊಂಡರು.