News Karnataka Kannada
Friday, May 17 2024
ಮಂಗಳೂರು

ಶ್ರೀ ಲಕ್ಷ್ಮೀ ವಿಷ್ಣುಮೂರ್ತಿ ದೇವಸ್ಥಾನದ ಬ್ರಹ್ಮಕಲಶಾಭಿಷೇಕ ಮತ್ತು ವಾರ್ಷಿಕ ಜಾತ್ರಾ ಮಹೋತ್ಸವ

Photo Credit :

ಬಂಟ್ವಾಳ: ತಾಲೂಕಿನ ತುಂಬೆ,ಕಳ್ಳಿಗೆ ಬಿ.ಮೂಡ ಮತ್ತು ನಡು ಈ ನಾಲ್ಕು ಗ್ರಾಮಗಳ ಮಾಗಣೆಯ ಅರಾಧ್ಯ ದೇವರಾದ ದೇವಂದಬೆಟ್ಟು ಶ್ರೀ ಲಕ್ಷ್ಮೀ ವಿಷ್ಣುಮೂರ್ತಿ ದೇವಸ್ಥಾನದ ಬ್ರಹ್ಮಕಲಶಾಭಿಷೇಕ ಮತ್ತು ವಾರ್ಷಿಕ ಜಾತ್ರಾ ಮಹೋತ್ಸವವು ಫೆ.15 ರಿಂದ 24 ರವರೆಗೆ ನಡೆಯಲಿದೆ ಎಂದು ಬ್ರಹ್ಮಕಲಶೋತ್ಸವ ಸಮಿತಿ ಸಂಚಾಲಕ ತಾರನಾಥ ಕೊಟ್ಟಾರಿ ತಿಳಿಸಿದ್ದಾರೆ.

ದೇವಸ್ಥಾನದ ಅವರಣದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು ಫೆ.15 ರಿಂದ 20 ರವರೆಗೆ ಅಷ್ಟಬಂಧ ಬ್ರಹ್ಮಕಲಶೋತ್ಸವ ಹಾಗೂ ಬಳಿಕ 24 ರವರೆಗೆ ವಾರ್ಷಿಕ ಜಾತ್ರಾಮಹೋತ್ಸವವು ಬ್ರಹ್ಮಶ್ರೀ ನೀಲೇಶ್ವರ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ನಡೆಯಲಿದೆ ಎಂದರು. ಪ್ರತಿದಿನವು ವಿವಿಧ ವೈಧಿಕ,ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು,ಫೆ.15 ರಂದು ಬಿ.ಸಿ.ರೋಡಿನಿಂದ ಕ್ಷೇತ್ರಕ್ಕೆ ಭವ್ಯವಾದ ಹಸಿರು ಹೊರೆಕಾಣಿಕೆಯ ಮೆರವಣಿಗೆ ನಡೆಯಲಿದೆ.ಬಳಿಕ ಗೋಪೂಜೆಯ ಮೂಲಕ ನೂತನ ಗೋಶಾಲೆಯ ಉದ್ಘಾಟನೆಗೊಳ್ಳಲಿದೆ ಹಾಗೆಯೇ ಈಗಾಗಲೇ ಆರಂಭವಾಗಿರುವ 48 ದಿನಗಳ ಸಂದ್ಯಾ ಭಜನಾ ಮಂಗಲೋತ್ಸವವು ನೆರವೇರಲಿದೆ ಎಂದು ವಿವರಿಸಿದರು. ಫೆ. 20 ರಂದು ಶ್ರೀಲಕ್ಷ್ಮೀ ವಿಷ್ಣುಮೂರ್ತಿ ದೇವರಿಗೆ ಸಹಸ್ರ ಪರಿಕಲಶ ಸಹಿತ ಬ್ರಹ್ಮಕಲಶಾಭಿಷೇಕ ಮತ್ತು ಪರಿವಾರ ದೇವರಿಗೆ ಕಲಶಾಭಿಷೇಕ ಮಡೆಯಲಿದೆ.ಅಂದು ಸಂಜೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ ಅವರ ಅಧ್ಯಕ್ಷತೆಯಲ್ಲಿ ಬ್ರಹ್ಮಕಲಶ ಸಂಭ್ರಮ ಕಾರ್ಯಕ್ರಮ ನಡೆಯಲಿದೆ.ಆರ್ ಎಸ್ ಎಸ್ ಮುಖಂಡ ಡಾ.ಪ್ರಭಾಕರ ಭಟ್ ಕಲ್ಲಡ್ಕ ಅವರು ಪ್ರಧಾನ ಭಾಷಣ ಮಾಡಲಿದ್ದು,ಮಾಜಿ ಸಚಿವ ರಮಾನಾಥ ರೈ,ಉದ್ಯಮಿ ಸೇಸಪ್ಪ ಕೋಟ್ಯಾನ್ ಮಾದಲಾದವರು ಭಾಗವಹಿಸಲಿದ್ದಾರೆ ಎಂದರು. ಮಡಕೆ ವಿನೋದ ಬೋಜ ಮೂಲ್ಯಅವರು ದೇವಸ್ಥಾನಕ್ಕೆ ಜಮೀನನ್ನು ಉಚಿತವಾಗಿ ದಾನರೂಪದಲ್ಲಿ ನೀಡಿದ್ದಾರೆ.ಕಳೆದ ಒಂದೂವರೆ ತಿಂಗಳಿನಿಂದ 5 ಸಾವಿರಕ್ಕೂ ಅಧಿಕ ಸ್ವಯಂಸೇವಕರು, 40ಕ್ಕೂ ಅಧಿಕ ಸಂಘಟನೆಗಳು, ಸಂಘಸಂಸ್ಥೆಗಳು ನಿರಂತರವಾಗಿ ದೇವಸ್ಥಾನದಲ್ಲಿ ಕರಸೇವೆಯನ್ನು ನಡೆಸಿದ್ದು, ಜೀರ್ಣೋದ್ಧಾರ ಕಾರ್ಯದ ಹೆಚ್ಚಿನ ಕೆಲಸಗಳು ಸೇವಾರೂಪದಲ್ಲೇ ನೆರವೇರಿರುವುದು ವಿಶೇಷವಾಗಿದೆ ಎಂದು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಮೇಶ್ ಉಪಾಧ್ಯಾಯ ಹೇಳಿದರು.
ಶಾಸಕರಿಂದ 1 ಕೋ.ರೂ.ಅನುದಾನ: ದೇವಳದ ಜೀರ್ಣೋದ್ಧಾರ ಕಾರ್ಯಗಳ ಆರಂಭದಲ್ಲಿ ಕ್ಷೇತ್ರಕ್ಕಾಗಮಿಸಿದ ಶಾಸಕ ರಾಜೇಶ್ ನಾಯ್ಕ ಉಳಿಪ್ಪಾಡಿಯವರಲ್ಲಿ ಹಲವಾರು ಬೇಡಿಕೆಗಳನ್ನೊಳಗೊಂಡ ಮನವಿಯನ್ನು ಸಲ್ಲಿಸಲಾಗಿತ್ತು. ಇದಕ್ಕೆ ಸ್ಪಂದಿಸಿದ ಶಾಸಕರು ಒಂದು ತಿಂಗಳಲ್ಲಿ 1 ಕೋಟಿ ರೂ. ಅನುದಾನವನ್ನು ಒದಗಿಸಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಿ ಸಹಕರಿಸಿದ್ದಾರೆ ಎಂದು ದೇವಳದ ವ್ಯವಸ್ಥಾಪನ ಸಮಿತಿ ಪ್ರ.ಕಾರ್ಯದರ್ಶಿ ದಾಮೋದರ ನೆತ್ತರಕೆರೆ ಈ ಸಂದರ್ಭದಲ್ಲಿ ವಿವರಿಸಿದರು.
ದೇವಸ್ಥಾನವನ್ನು ಸಂಪರ್ಕಿಸುವ ಎಲ್ಲಾ ರಸ್ತೆಗಳ ಅಭಿವೃದ್ಧಿ, ದೇವಸ್ಥಾನದ ಎದುರುಭಾಗದಲ್ಲಿ ತಡೆಗೋಡೆ, ಒಂದು ಧಾರ್ಮಿಕ ದತ್ತಿ ಇಲಾಖೆಯಿಂದ ಬ್ರಹ್ಮಕಲಶೋತ್ಸವಕ್ಕೆ 10 ಲಕ್ಷ ರೂ.ಅನುದಾನ, ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲು ಕೊಳವೆಬಾವಿ, ಅಲ್ಲದೆ ಗೋಶಾಲೆ, 5 ಗೃಹ ನಿರ್ಮಾಣಕ್ಕೆ ಸ್ಥಳಾವಕಾಶದ ಕೊರತೆಯನ್ನು ಗಮನಿಸಿದ ಶಾಸಕರು ಖಾಸಗಿ ಜಮೀನಿನ ಮಾಲಕರ ಜತೆ ಮಾತುಕತೆ ನಡೆಸಿ ಆ ಜಮೀನನ್ನು ಶಾಸಕರೇ ಖರೀದಿಸಿ ದೇವಸ್ಥಾನಕ್ಕೆ ಕೊಡುಗೆಯಾಗಿ ಹಸ್ತಾಂತರಿಸಿದ್ದಾರೆ ಎಂದರು. ಜೀರ್ಣೋದ್ದಾರ ಕಾರ್ಯದ ಅಂಗವಾಗಿ ದೇವಸ್ಥಾನದ ಮುಂಭಾಗ ತಡೆಗೋಡೆ ಆವರಣ ಗೋಡೆ ಅಲಂಕಾರ, ಗೋಶಾಲೆ, ಯಾಗಶಾಲೆ, ಉಗ್ರಾಣ ಕೊಠಡಿ, ಒಳಾಂಗಣ ಮತ್ತು ಗೋಪುರಕ್ಕೆ ಗ್ರಾನೈಟ್ ಅಳವಡಿಕೆ ,ಒಳಾಂಗಣಕ್ಕೆ ಮೇಲ್ಬಾವಣಿ, ಹೊರಾಂಗಣ ಚಪ್ಪರ ದುರಸ್ತಿ, ಅಶ್ವತ್ಥಕಟ್ಟೆ, ಇಂಟರ್‌ಲಾಕ್, ಕೈ,ಕಾಲು ತೊಳೆಯುವ ವ್ಯವಸ್ಥೆ ಸೇರಿ ಒಟ್ಟು 75 ಲಕ್ಷ ರೂ.ಅಧಿಕ ವೆಚ್ಚದಲ್ಲಿಕಾಮಗಾರಿ ನಡೆಸಲಾಗಿದೆ ಎಂದು ಬ್ರಹ್ಮಕಲಶ ಸಮಿತಿ ಅಧ್ಯಕ್ಷ ರಂಗೋಲಿ ಸದಾನಂದ ಶೆಟ್ಟಿ ಅವರು ವಿವರಿಸಿದರು.ಸುದ್ದಿಗೋಷ್ಠಿಯಲ್ಲಿ ದೇವಳದ ಅರ್ಚಕರಾದ ರಾಮಕೃಷ್ಣ ಕಡಂಬಳಿತ್ತಾಯ,ಕಳ್ಳಿಗೆ ಗ್ರಾ.ಪಂ.ಅಧ್ಯಕ್ಷೆ ಯಶೋಧ ಜಾರಂದಗುಡ್ಡೆ,ವಿವಿಧ ಸಮಿತಿ ಪದಾಧಿಕಾರಿಗಳಾದ ನವೀನ್ ಚಂದ್ರ ಶೆಟ್ಟಿ ಮುಂಡಾಜೆಗುತ್ತು,, ಗಣೇಶ್ ಸುವರ್ಣ ತುಂಬೆ, ಕವಿರಾಜ ಚಂದ್ರಿಗೆ, ಸೋಮಪ್ಪ ಸುವರ್ಣ ತುಂಬೆ,ಯೋಗೀಶ್ ಕುಮಾರ್ ದರಿಬಾಗಿಲು,ದೇವಿಪ್ರಸಾದ್ ಹಾಗೂ ವ್ಯವಸ್ಥಾಪನ ಸಮಿತಿ ಸದಸ್ಯರು ಮೊದಲಾದವರಿದ್ದರು.
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
153
Mounesh V

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು