ಶ್ರೀ ಕ್ಷೇತ್ರ ಮಂಗಳಾದೇವಿ ದೇವಸ್ಥಾನದ ಶಮೀ ಕಟ್ಟೆಯಲ್ಲಿ ವರ್ಷಂಪ್ರತಿಯಂತೆ ಲೋಕ ಕಲ್ಯಾಣಾರ್ಥವಾಗಿ ಸಾರ್ವಜನಿಕ ಶನಿ ಪೂಜೆಯು ಶ್ರೀ ದೇವರ ಪ್ರೀತ್ಯರ್ಥವಾಗಿ ಸಮಸ್ತ ಭಕ್ತಾದಿಗಳ ಉಪಸ್ಥಿತಿಯಲ್ಲಿ ನೆರವೇರಿತು.
ಸ್ವಸ್ತಿ ಶ್ರೀ ಪ್ಲವ ನಾಮ ಸಂ|ರದ ಕಾರ್ತೀಕ ಮಾಸದ ಇಂದಿನ ಶನಿವಾರದ ಸಂಧ್ಯಾಕಾಲದಲ್ಲಿ ಶ್ರೀ ಕ್ಷೇತ್ರದ ಸಮೀಪದಲ್ಲಿರುವ ಮಹಾನವಮಿ ಕಟ್ಟೆ ವೃತ್ತದ ಬಳಿಯಿರುವ ಶಮೀ ಕಟ್ಟೆಯಲ್ಲಿ ಶನಿ ಪೂಜೆಯ ಅನುಷ್ಠಾನ, ಪೂಜೋಪಚಾರಗಳು ನಡೆದು ಸಾಯಂಕಾಲ ೬’ಗಂಟೆಗೆ ಸರಿಯಾಗಿ ಮಹಾಪೂಜೆಯೊಂದಿಗೆ ವಿಜೃಂಭಣೆಯಿಂದ ಶನಿಪೂಜೆಯು ಜರುಗಿತು.