Categories: ಮಂಗಳೂರು

ಮುಂಡಾಜೆ: ಮುಚ್ಚಲ್ಪಟ್ಟಿದ್ದ ಆನೆ ಕಂದಕ ಮರು ನಿರ್ಮಾಣ

ಬೆಳ್ತಂಗಡಿ: ತಾಲೂಕಿನ ಮುಂಡಾಜೆಯ ಧುಂಬೆಟ್ಟು ಸಮೀಪವಿರುವ ಚಿಬಿದ್ರೆ ಗ್ರಾಮದ ನಳೀಲು ಪ್ರದೇಶದಲ್ಲಿ 2019ರ ಮೃತ್ಯುಂಜಯ ನದಿಯ ಪ್ರವಾಹದಿಂದ ಮುಚ್ಚಲ್ಪಟ್ಟಿದ್ದ ಆನೆ ಕಂದಕ ಮರು ನಿರ್ಮಾಣಗೊಂಡಿದೆ.

ಮುಂಡಾಜೆಯ ಧುಂಬೆಟ್ಟು,ಮಜಲು, ಕಜೆ,ಹಾಲ್ತೋಟ,,ಯಮುಂಡ್ರುಪಾಡಿ, ನಡುಮನೆ ಮೊದಲಾದ ಪ್ರದೇಶಗಳಲ್ಲಿ ಕಾಡಾನೆಗಳ ಹಾವಳಿ ಕಳೆದ ಹಲವು ಸಮಯದಿಂದ ವಿಪರೀತವಾಗಿದೆ.ಆನೆ ಕಂದಕ ಮುಚ್ಚಿ ಹೋಗಿರುವುದು ಇದಕ್ಕೆ ಪ್ರಮುಖ ಕಾರಣ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದರು. ಅರಣ್ಯ ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿಗಳು ಇದರ ಪರಿಶೀಲನೆಯನ್ನು ನಡೆಸಿದ್ದರು.

ಕಳೆದ ಶನಿವಾರ ಶಾಸಕ ಹರೀಶ್ ಪೂಂಜ ಮುಂಡಾಜೆಗೆ ಭೇಟಿ ನೀಡಿದ ಸಂದರ್ಭ ಸ್ಥಳೀಯರು ಈ ಬಗ್ಗೆ ಅವರ ಗಮನಕ್ಕೆ ತಂದಿದ್ದರು. ಮುಚ್ಚಿಹೋಗಿದ್ದ ಆನೆ ಕಂದಕವನ್ನು ಮರು ನಿರ್ಮಿಸಿಕೊಡುವ ಕುರಿತು ಭರವಸೆ ನೀಡಿದ ಶಾಸಕರು, ತಕ್ಷಣ ಸ್ಪಂದಿಸಿ ಸೋಮವಾರದಂದು ಕಂದಕವನ್ನು ನಿರ್ಮಿಸಿಕೊಡುವ ಕಾಮಗಾರಿ ನಡೆದಿದೆ.

ಸುಮಾರು 100 ಮೀ.ನಷ್ಟು ಆನೆ ಕಂದಕ ಮರು ನಿರ್ಮಾಣವಾಗಿದ್ದು ಇನ್ನಾದರೂ ಕಾಡಾನೆಗಳ ಕಾಟಕ್ಕೆ ಸಿಗಬಹುದೆಂಬ ನಿರೀಕ್ಷೆ ಪರಿಸರದ ಕೃಷಿಕರು ವ್ಯಕ್ತಪಡಿಸಿದ್ದಾರೆ. ಶಾಸಕರ ತುರ್ತು ಸ್ಪಂದನೆ ಸ್ಥಳೀಯರ ಶ್ಲಾಘನೆಗೆ ಪಾತ್ರವಾಗಿದೆ

Sneha Gowda

Recent Posts

ಬಂಡೀಪುರ ಹುಲಿ ಸಂರಕ್ಷಿತಾ ಪ್ರದೇಶದಲ್ಲಿ ಕತ್ತೆ ಕಿರುಬ ಪತ್ತೆ

ಬಂಡೀಪುರ ಹುಲಿ ಸಂರಕ್ಷಿತಾ ಪ್ರದೇಶದ ಕಾಡಂಚಿನ ಗ್ರಾಮಗಳಲ್ಲಿ ಕತ್ತೆ ಕಿರುಬ ( ಹೈನಾ ) ಶ್ವಾನ ಕಾಣಿಸಿಕೊಂಡಿದೆ.

3 mins ago

ಲೋಕಸಭಾ ಚುನಾವಣೆ : ಮತದಾರನಿಗೆ ಕಾಂಗ್ರೆಸ್​ ಶಾಸಕನಿಂದ ಕಪಾಳಮೋಕ್ಷ

ಆಂಧ್ರಪ್ರದೇಶದಲ್ಲಿ ನಡೆಯುತ್ತಿರುವ ಲೋಕಸಭಾ ಚುನಾವಣೆಯ ಸಮಯದಲ್ಲಿ ವೈಎಸ್​ಆರ್​ ಕಾಂಗ್ರೆಸ್​ನ ಶಾಸಕ ಎ ಶಿವಕುಮಾರ್ಮ ಮತಗಟ್ಟೆಯಲ್ಲಿ ಮತದಾರರೊಬ್ಬರಿಗೆ ಕಪಾಳಮೋಕ್ಷ ಮಾಡಿರುವ ವಿಡಿಯೋ…

10 mins ago

ಧರ್ಮ ಪಾಲನೆಯ ಅಸಡ್ಡೆಯೇ ಸಂಘರ್ಷಕ್ಕೆ ಕಾರಣ: ಪಿ.ಎ. ಹನೀಫ್

ಆಯಾ ಧರ್ಮಗಳು ಸಾರಿದ ತತ್ವ ಆದರ್ಶಗಳ ಪಾಲನೆ ಬಗೆಗಿನ ಜನರ ಅಸಡ್ಡೆಯೇ ಇಂದಿನ ಮನುಷ್ಯ ಸಂಘರ್ಷಕ್ಕೆ ಪ್ರಮುಖ ಕಾರಣವಾಗಿದೆ. ಸತ್ಯ,…

23 mins ago

ಧ್ರುವ ಸರ್ಜಾ ನಿವಾಸದಲ್ಲಿ ಅಶ್ವಗ್ರೀವ ಚಿತ್ರದ ಶೀರ್ಷಿಕೆ ಅನಾವರಣ

ಧ್ರುವ ಸರ್ಜಾ ನಿವಾಸದಲ್ಲಿ ಅಶ್ವಗ್ರೀವ ಶೀರ್ಷಿಕೆ ಅನಾವರಣ

25 mins ago

ಪುತ್ತೂರು ಶಾಸಕರಿಂದ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಯಿಂದ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ನಡೆದಿದೆ.

45 mins ago

ಪ್ರವಾಸಕ್ಕೆ ಬಂದಿದ್ದ ಮಹಿಳೆ ನೀರಿನಲ್ಲಿ ಮುಳುಗಿ ಮೃತ್ಯು

ನೀರಿನಲ್ಲಿ ಮುಳುಗಿ ಯುವತಿಯೊಬ್ಬಳು ಮೃತಪಟ್ಟ  ಘಟನೆ ಮೈಸೂರಿನ ತಿ.ನರಸೀಪುರ ತಾಲೂಕಿನ ತಲಕಾಡು ಗ್ರಾಮದ ಕಾವೇರಿ ನದಿಯಲ್ಲಿ ನಡೆದಿದೆ.

60 mins ago