News Karnataka Kannada
Monday, May 06 2024
ಮಂಗಳೂರು

ಮಹಿಳಾ ದಿನಾಚರಣೆಯ ಪ್ರಯುಕ್ತ “ಬೀಚ್ ಕ್ಲೀನಪ್ ” ಅಭಿಯಾನ

Beach
Photo Credit :

ಮಂಗಳೂರು : ಇಂದು ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ Moms of Mangalore, Decathlon ಹಾಗೂ ಪಣಂಬೂರು ಬೀಚ್ ಅಸೋಸಿಯೇಷನ್ ಸಹಭಾಗಿತ್ವದಲ್ಲಿ “ಬೀಚ್ ಕ್ಲೀನಪ್ ” ಅಭಿಯಾನ ಮಂಗಳೂರಿನ ಪಣಂಬೂರು ಬೀಚ್ ಅಲ್ಲಿ ನಡೆಯಿತು.

 

ಪಣಂಬೂರು ಬೀಚನಲ್ಲಿ ಹಮ್ಮಿಕೊಂಡಿದ್ದ ಸ್ವಚ್ಛತಾ ಅಭಿಯಾನದಲ್ಲಿ ಸುಮಾರು 60 ಮಂದಿ ಪಾಲ್ಗೊಂಡಿದ್ದರು.ಬೆಳಿಗ್ಗೆ 7.15 ಕ್ಕೆ ಆರಂಭವಾದ ಅಭಿಯಾನ ಸತತ 2 ತಾಸು ನಡೆದು ಹೆಚ್ಚಿನ ಪ್ರಮಾಣದಲ್ಲಿ ಗುಟ್ಕಾ ಪ್ಯಾಕೆಟ್, ಪ್ಲಾಸ್ಟಿಕ್ ಬಾಟಲಿ, ಬಿಯರ್ ಬಾಟಲಿ, ಐಸ್ ಕ್ರೀಮ್ ಕಪ್, ಸಿಗರೇಟ್, ಚಿಪ್ಸ್ ಪ್ಯಾಕೇಟ್ ಅಂತಹ ಸುಮಾರು 600 kgಗಳಷ್ಟು ತ್ಯಾಜ್ಯ ಸಂಗ್ರಹ ಮಾಡಲಾಯಿತು.

ಮಂಗಳೂರು ನಗರ ಪಾಲಿಕೆಯವರು ತ್ಯಾಜ್ಯ ವಿಲೇವಾರಿ ಮಾಡಿದರು. ಸದಸ್ಯರಿಗೆ ಗ್ಲೌಸ್, ಸ್ವಚ್ಛತಾ ಪರಿಕರ, ಸ್ಯಾನಿಟೈಸರ್ ಗಳನ್ನು ವಿವರಿಸಲಾಗಿತ್ತು.ನಂತರ Laughter yoga, quiz ಕಾಂಟೆಸ್ಟ್, ಲಕ್ಕಿ ಡ್ರಾ ಹಾಗೂ ಸ್ಟುಡಿಯೋ 6 ವತಿಯಿಂದ Zumba ಡಾನ್ಸ್ ಕೂಡ ಆಯೋಜಿಸಲಾಗಿತ್ತು.

 

Decathlon ನ ಪ್ರೀತಿಕಾ ಹಾಗೂ ಇತರ ಸಿಬ್ಬಂದಿಗಳು ಹಾಗೂ MOM ನ  Dr. ಶಿಲ್ಪ ಶ್ರೇಯಸ್ ಉಪ್ಪಸ್ಥಿತರಿದ್ದರು. ಕಾರ್ಯಕ್ರಮವನ್ನು ಶ್ವೇತಾ ಕಾಮತ್ ನಿರೂಪಿಸಿದರು.

ಕಡಲತೀರದ ಬಳಕೆದಾರರು , ಸಾಗರಗಳು , ಸಮುದ್ರ ದಿಕ್ಚ್ಯುತಿಗಳು ಮತ್ತು ನದಿ ಹರಿವಿನಂತಹ ಕಡಲತೀರದ ಅವಶೇಷಗಳ ಕೆಲವು ಪ್ರಮುಖ ಮೂಲಗಳಿವೆ . ಅನೇಕ ಬೀಚ್ ಬಳಕೆದಾರರು ಚಟುವಟಿಕೆಗಳ ನಂತರ ಬೀಚ್‌ಗಳಲ್ಲಿ ತಮ್ಮ ಕಸವನ್ನು ಬಿಡುತ್ತಾರೆ.

ಅಲ್ಲದೆ, ಸಮುದ್ರದ ಅವಶೇಷಗಳು ಅಥವಾ ಕಚ್ಚಾ ತೈಲದಂತಹ ರಾಸಾಯನಿಕಗಳು ಸಾಗರಗಳು ಅಥವಾ ಸಮುದ್ರಗಳಿಂದ ತೇಲುತ್ತವೆ ಮತ್ತು ಕಡಲತೀರಗಳಲ್ಲಿ ಸಂಗ್ರಹಗೊಳ್ಳುತ್ತವೆ. ಹೆಚ್ಚುವರಿಯಾಗಿ, ಅನೇಕ ನದಿಗಳು ಕೆಲವು ನಗರಗಳ ಕಸವನ್ನು ಕಡಲತೀರಗಳಿಗೆ ತರುತ್ತವೆ. ಈ ಮಾಲಿನ್ಯಕಾರಕಗಳು ಸಮುದ್ರ ಜೀವನ ಮತ್ತು ಪರಿಸರ ವಿಜ್ಞಾನ , ಮಾನವ ಆರೋಗ್ಯ ಮತ್ತು ಕರಾವಳಿ ಪ್ರವಾಸೋದ್ಯಮಕ್ಕೆ ಹಾನಿ ಮಾಡುತ್ತವೆ. ಹೀಗಾಗಿ ಬೀಚ್ ಅನ್ನು ಸ್ವಚ್ಛವಾಗಿ ಇಡುವುದು ನಮ್ಮ ಕರ್ತವ್ಯ.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು