News Karnataka Kannada
Monday, April 29 2024
ಮಂಗಳೂರು

ಮಂಗಳೂರು: ಲಾಡ್ಜ್ ನಲ್ಲಿ ಸ್ನೇಹಿತನ ಹತ್ಯೆ ಪ್ರಕರಣ, ಐವರು ಆರೋಪಿಗಳ ಬಂಧನ

New Project (23)
Photo Credit :

ಮಂಗಳೂರು: ಲಾಡ್ಜ್ ನಲ್ಲಿ ಪಾರ್ಟಿ ನಡೆಸುತ್ತಿದ್ದ ಸಂದರ್ಭ ಮಾತಿಗೆ ಮಾತು ಬೆಳೆದು ಓರ್ವನ ಹತ್ಯೆಯೊಂದಿಗೆ ಅಂತ್ಯಗೊಂಡ ಪ್ರಕರಣಕ್ಕೆ ಸಂಬಂಧಿಸಿ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಸುರತ್ಕಲ್ ನಿವಾಸಿ ಜೋಯ್ಸನ್(21), ನಂದಿಗುಡ್ಡ ನಿವಾಸಿ ಪ್ರಮೀತ್(24), ವಾಮಂಜೂರು ನಿವಾಸಿ ಕಾರ್ತಿಕ್(21), ಪಚ್ಚನಾಡಿ ನಿವಾಸಿಗಳಾದ ಪ್ರಜ್ವಲ್(22), ದುರ್ಗೇಶ್(22) ಬಂಧಿತರು. ಮೃತ ಧನುಷ್ ಗೆ ಮಹಿಳೆಯರ ಬಗ್ಗೆ ಅವಾಚ್ಯ ಶಬ್ದಗಳಿಂದ ಮಾತನಾಡುವ ಚಾಳಿಯಿದ್ದು, ಈ ಬಗ್ಗೆ ಆತನಿಗೆ ತಿಳಿ ಹೇಳಬೇಕೆಂದು ಸ್ನೇಹಿತರು ಸೇರಿ ಪಾರ್ಟಿ ಆಯೋಜಿಸಿದ್ದರು.

ಈ ಹಿನ್ನೆಲೆಯಲ್ಲಿ ಅ.15 ರಂದು ಮಂಗಳೂರಿನ ಪಂಪ್ ವೆಲ್ ಬಳಿಯ ಸಾಯಿ ಪ್ಯಾಲೇಸ್ ಲಾಡ್ಜ್ ನಲ್ಲಿ ರೂಂ ಮಾಡಿ ಪಾರ್ಟಿ ಆಯೋಜಿಸಿದ್ದರು.ಪಾರ್ಟಿಯ ವೇಳೆ ಈ ವಿಚಾರವನ್ನು ಸ್ನೇಹಿತರು ಧನುಷ್ ಗೆ ತಿಳಿಸಿದ್ದಾರೆ. ಆದರೆ, ಆತ ಉಡಾಫೆಯಿಂದ ಮಾತನಾಡಿದ್ದಾನೆ. ಈ ಸಂದರ್ಭ ಸ್ನೇಹಿತರ ಮಧ್ಯೆ ವಾಗ್ವಾದ ನಡೆದು ಹೊಡೆದಾಟ ನಡೆದಿದೆ.

ಆಗ ಜೋಯ್ಸನ್ ತನ್ನ ಬಳಿಯಿದ್ದ ಬಟನ್ ಚಾಕುವಿನಿಂದ ಧನುಷ್ ಎದೆಗೆ ಇರಿದಿದ್ದಾನೆ. ತಕ್ಷಣ ಆತನನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ಬಂಧಿಸಿದ್ದು, ಮತ್ತೋರ್ವನ ಬಂಧನ ಆಗಬೇಕಿದೆ ಎಂದು ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ತಿಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು