ಮಂಗಳೂರು: ಜೋಡಿ ಕಾಡುಕೋಣವೊಂದು ನಗರದ ಹೊರವಲಯದ ಪಡೀಲ್ ನ ಮರೋಳಿಯಲ್ಲಿ ಲಾಲ್ ಬಹಾದುರ್ ಶಾಸ್ತ್ರಿ ಬಡಾವಣೆ ಕೆನರಾ ಸ್ಟ್ರಿಂಗ್ ಬಳಿ ಪತ್ತೆಯಾಗಿದೆ . ರಸ್ತೆ ಪಕ್ಕದ ಒಂದು ಪೊದೆಯಲ್ಲಿ ಜೋಡಿ ಕೋಣಗಳು ಅತ್ತಿಂದಿತ್ತ ಓಡಾಡುತ್ತಿರುವುದು ಕಂಡು ಬಂದಿದೆ.
ಇದನ್ನು ನೋಡಿ ಅಲ್ಲಿನ ಸ್ಥಳೀಯರು ದಂಗಾಗಿದ್ದಾರೆ. ಇದೀಗ ಇದರ ವಿಡಿಯೋವನ್ನು ಸ್ಥಳೀಯರೇ ಸೆರೆಹಿಡಿದಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗ್ತಾ ಇದೆ.