ಮಂಗಳೂರು : ಬುರ್ಕಾ ಬಟನ್ ಒಳಗಡೆ ನೂರು ಗ್ರಾಂ ಚಿನ್ನ ಸಾಗಾಟ ಮಂಗಳೂರು ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕ ವಶಕ್ಕೆ. ಲೇಡಿಸ್ ಬುರ್ಖಾ ಪ್ರೆಸ್ ಬಟನ್ ಗಳಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ವಾಷರ್ ಮಾದರಿಯ ಪದಾರ್ಥಗಳನ್ನು ಪ್ರಯಾಣಿಕರೊಬ್ಬರಿಂದ ಅಧಿಕಾರಿಗಳು ವಶಪಡಿಸಿಕೊಂಡ ಘಟನೆ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ.
ಈ ಬಗ್ಗೆ ಖಚಿತ ಮಾಹಿತಿ ಕಲೆಹಾಕಿದ ಕಸ್ಟಮ್ಸ್ ಇಲಾಖೆ ಅಧಿಕಾರಿಗಳು ದುಬೈನಿಂದ ಮಂಗಳೂರಿಗೆ ಆಗಮಿಸಿದ್ದ ಆರೋಪಿ ಪ್ರಯಾಣಿಕರಿಂದ ಒಟ್ಟು 5ಲಕ್ಷ ಮೂವತ್4ಸಾವಿರದ ಮೌಲ್ಯದ ಚಿನ್ನವನ್ನು ವಶ ಪಡೆದಿದ್ದಾರೆ .ವಿದೇಶದಿಂದ ಭಾರತಕ್ಕೆ ಬರುವ ಅಕ್ರಮ ಚಿನ್ನ ಸಾಗಾಟಕ್ಕೆ ಕಳ್ಳ ದಾರಿಗಳು ಹಲವು ಕಳ್ಳರು ಹಲವು ರೂಪಗಳಲ್ಲಿ ಚಿನ್ನವನ್ನು ಸಾಗಿಸಲು ಯತ್ನಿಸಿದರೂ ಹದ್ದಿನ ಕಣ್ಣುಗಳಿಂದ ಬಚಾವಾಗುವುದು ಕಡಿಮೆ ಎಂಬುದು ಈ ಪ್ರಕರಣದಿಂದ ಮತ್ತೆ ಸಾಬೀತಾಗಿದೆ.