Categories: ಮಂಗಳೂರು

ಪೆರ್ಲ-ಮುಂಡತ್ತೋಡಿ ರಸ್ತೆಯಲ್ಲಿ ವಾಹನ, ಜನಸಂಚಾರಕ್ಕೆ ತೀವ್ರ ಅಡಚಣೆ

ಬೆಳ್ತಂಗಡಿ: ಉಜಿರೆಯ ಪೆರ್ಲ-ಮುಂಡತ್ತೋಡಿ ರಸ್ತೆ ಹೊಂಡ , ಗುಂಡಿಗಳಿಂದ ತುಂಬಿದ್ದು ವಾಹನ, ಜನಸಂಚಾರಕ್ಕೆ ತೀವ್ರ ಅಡಚಣೆಯಾಗುತ್ತಿದ್ದುಸಾರ್ವಜನಿಕರು ಶಾಸಕರು, ಗ್ರಾಮ ಪಂಚಾಯತ್ ಗೆ ಅನೇಕ ಬಾರಿ ಮನವಿ ನೀಡಿದ್ದರೂ ಯಾವುದೇ ದುರುಸ್ತಿಯಾಗದಿರುವುದರಿಂದ ಅನಿವಾರ್ಯವಾಗಿ ಗ್ರಾಮಸ್ಥರು ಮೇ 23ರ ಬೆಳಿಗ್ಗೆ 9.30 ಕ್ಕೆ ಕಾಲೇಜು ರಸ್ತೆ ಮುಂಭಾಗದಲ್ಲಿ ರಸ್ತೆ ತಡೆ ಪ್ರತಿಭಟನೆ ನಡೆಸಿದರು.

ಸುಮಾರು 200 ರಷ್ಟು ನಾಗರಿಕರು ಶಾಸಕರು ಸ್ಥಳಕ್ಕೆ ಬರಬೇಕೆಂದು ಆಗ್ರಹಿಸಿ ರಸ್ತೆ ತಡೆಯಲ್ಲಿ ಭಾಗವಹಿಸಿದ್ದರು. ಈ ಹಿಂದೆ ರಸ್ತೆ ಡಾಮರೀಕರಣಕ್ಕೆ ಸರಕಾರದ ಅನುದಾನ ಮಂಜೂರಾಗಿದ್ದರೂ ಯಾವುದೇ ಕಾಮಗಾರಿ ನಡೆಯದೆ ರಸ್ತೆಯಲ್ಲಿ ವಾಹನ ನಡೆಸುವುದೇ ಅಸಾಧ್ಯವಾಗುತ್ತಿದೆಯೆಂದು ನಾಗರಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದರು .

ಉಜಿರೆ ಗ್ರಾಮ ಪಂಚಾಯತ್ ಪರವಾಗಿ ಸ್ಥಳಕ್ಕಾಗಮಿಸಿದ ಉಪಾಧ್ಯಕ್ಷ ರವಿಕುಮಾರ್ ಬರಮೇಲು ಅವರು ಸದ್ರಿ ರಸ್ತೆ ಡಾಮರೀಕರಣ ಹಾಗು ಭಾಗಶಃ ಕಾಂಕ್ರೀಟೀಕರಣಕ್ಕೆ ಶಾಸಕರ ನೇತೃತ್ವದಲ್ಲಿ ರೂ 2.50 ಕೋಟಿ ಮಂಜೂರಾಗಿದ್ದು ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ ಕಾಮಗಾರಿ ಬೇಗನೆ ಪ್ರಾರಂಭಗೊಳ್ಳಲಿದೆ ಎಂದು ಸಮಾಧಾನ ಪಡಿಸಿದರೂ ನಾಗರಿಕರು ಪಟ್ಟು ಹಿಡಿದು ಈಗಿಂದೀಗಲೇ ಕಾಮಗಾರಿ ಪ್ರಾರಂಭಿಸಬೇಕೆಂದು ಆಗ್ರಹಿಸಿದರು.

ಪಂಚಾಯತ್ ಸದಸ್ಯೆ ಉಷಾಕಿರಣ ಕಾರಂತ್ ಅವರು ಉಪಸ್ಥಿತರಿದ್ದು ಸದ್ಯಕ್ಕೆ ತುರ್ತಾಗಿ ಪಂಚಾಯತ್ ವತಿಯಿಂದ ಗುಂಡಿ ಮುಚ್ಚುವ ಕಾರ್ಯ ಮಾಡಬಹುದು.ಮುಂದೆ ಡಾಮರೀಕರಣಕ್ಕೆ ಒತ್ತಾಯಿಸಲಾಗುವುದೆಂದು ತಿಳಿಸಿದರು. ಭಾಗದ ಪಂಚಾಯತ್ ಸದಸ್ಯರೂ ಉಪಸ್ಥಿತರಿದ್ದು ತಾಂತ್ರಿಕ ತೊಡಕಿನಿಂದ ಡಾಮರೀಕರಣದಲ್ಲಿ ವಿಳಂಬವಾಗಿದ್ದು ಪ್ರಕ್ರಿಯೆ ನಡೆಯುತ್ತಿದೆ ಎಂದರು.

ಗ್ರಾಮಸ್ಥರು ಹಾಗು ಪಂಚಾಯತ್ ಸದಸ್ಯರ ನಡುವೆ ಮಾತಿನ ಚಕಮಕಿ ತಾರಕಕ್ಕೇರಿತ್ತು .ಪೊಲೀಸ್ ಸಿಬ್ಬಂದಿಗಳು ಶಾಂತಿ ಸುವ್ಯವಸ್ಥೆ ನೋಡಿಕೊಂಡರು. ಶಾಸಕರ ಮೂಲಕ ಶೀಘ್ರ ರಸ್ತೆ ದುರುಸ್ತಿಪಡಿಸುವ ಗ್ರಾ.ಪಂ. ಸದಸ್ಯರ ಭರವಸೆ ಹಿನ್ನೆಲೆಯಲ್ಲಿ 11 ಗಂಟೆ ಸುಮಾರಿಗೆ ನಾಗರಿಕರು ರಸ್ತೆ ತಡೆಯನ್ನು ಕೊನೆಗೊಳಿಸಿದರು.

Sneha Gowda

Recent Posts

ಮೊಬೈಲ್‌ ಕಳ್ಳತನಕ್ಕೆ ಯತ್ನಿಸಿದ ಕಳ್ಳಿಗೆ ಬಿತ್ತು ಧರ್ಮದೇಟು

ಮೊಬೈಲ್‌ ಕಳ್ಳತನಕ್ಕೆ ಯತ್ನಿಸಿದ ಕಳ್ಳಿಗೆ ಸಾರ್ವಜನಿಕರೇ ಧರ್ಮದೇಟು ನೀಡಿದ ಘಟನೆ ಉಡುಪಿ ಸಿಟಿ ಬಸ್‌ ನಿಲ್ದಾಣದಲ್ಲಿ ಇಂದು ಸಂಭವಿಸಿದೆ

5 mins ago

ಪೆನ್‌ಡ್ರೈವ್‌ ಕೇಸ್‌ : ವಕೀಲ ದೇವರಾಜೇಗೌಡಗೆ 14 ದಿನ ನ್ಯಾಯಾಂಗ ಬಂಧನ

ಪ್ರಜ್ವಲ್‌ ರೇವಣ್ಣ ಪೆನ್‌ಡ್ರೈವ್‌ ಕೇಸ್‌, ಮಹಿಳೆ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಂಧಿತರಾಗಿರುವ ಬಿಜೆಪಿ ಮುಖಂಡ, ವಕೀಲರೂ ಆಗಿರುವ ದೇವರಾಜೇಗೌಡರನ್ನು 14…

16 mins ago

ರೈತನ ಆರು ತಿಂಗಳ ಶ್ರಮ ಅರ್ಧಗಂಟೆಯಲ್ಲೇ ಹೋಮ

ಇಂದು ಸಂಜೆ ಸುರಿದ ಬಾರಿ ಮಳೆಗೆ ರೈತ ಬೆಳೆದಿದ್ದ ಬಾಳೆ ಫಸಲು ಸಂಪೂರ್ಣವಾಗಿ ನಾಶವಾಗಿರುವ ಘಟನೆ ಚಾಮರಾಜನಗರ ತಾಲೂಕಿನ ಉತ್ತುವಳ್ಳಿಯಲ್ಲಿ…

49 mins ago

ಬಾರ್ ಗೆ ನುಗ್ಗಿದ ಕಳ್ಳರು: 60 ಲೀಟರ್ ಮದ್ಯ ಕಳ್ಳತನ

ಜಿಲ್ಲೆಯ ಹನೂರು ಪಟ್ಟಣದ ಬಂಡಳ್ಳಿ ಮುಖ್ಯ ರಸ್ತೆಯಲ್ಲಿರುವ ಅಮೃತ್ ಬಾರ್ ಅಂಡ್ ರೆಸ್ಟೋರೆಂಟ್ ನಲ್ಲಿ ತಡ ರಾತ್ರಿ ಕಳ್ಳರ ತಂಡ…

1 hour ago

ಬಾಳೆ ಬೆಳೆಗಾರರಿಗೆ ವಿಶೇಷ ಪ್ಯಾಕೇಜ್ ಕೋರಿ ರಾಷ್ಟ್ರೀಯ ಹೆದ್ದಾರಿ ಬಂದ್ ಚಳುವಳಿ

ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರ ರಾಜ್ಯಾಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್ ನೇತೃತ್ವದಲ್ಲಿ ಚಾಮರಾಜನಗರದ ಸತ್ಯಮಂಗಲಂ ಮುಖ್ಯ ರಸ್ತೆಯಲ್ಲಿ ಜಮಾಯಿಸಿದ ಸಂಘದ ಪದಾಧಿಕಾರಿಗಳು…

1 hour ago

ಗಾಳಿ ಸಮೇತ ಭಾರಿ ಮಳೆ : ನೆಲಕಚ್ಚಿದ ಮರಗಳು

ಧಾರವಾಡದಲ್ಲಿ ಶನಿವಾರ ಗಾಳಿ ಸಮೇತ ಮಳೆಯಾಗಿದ್ದು, ಅಲ್ಲಲ್ಲಿ ಮರಗಳು ನೆಲಕಚ್ಚಿದ ಬಗ್ಗೆ ವರದಿಯಾಗಿದೆ. ಬೆಳಿಗ್ಗೆಯಿಂದ ವಿಪರೀತ ಬಿಸಿಲಿನ ವಾತಾವರಣವಿತ್ತು

2 hours ago