ಮಂಗಳೂರು

ಧ್ವನಿವರ್ಧಕ ಬಳಕೆ ನಿರ್ಭಂದ ಬಗ್ಗೆ ಪಾರ್ಥನಾ ಮಂದಿರಗಳ ಪದಾಧಿಕಾರಿಗಳ ಜೊತೆ ಮಾಹಿತಿ ಸಭೆ

ಬೆಳ್ತಂಗಡಿ: ಪ್ರಾರ್ಥನಾ ಮಂದಿರಗಳಲ್ಲಿ ಧ್ವನಿವರ್ಧಕ ಬಳಕೆ ಬಗ್ಗೆ ಸರ್ವೋಚ್ಚ ನ್ಯಾಯಾಲಯದ ಆದೇಶ ಜಾರಿ ಹಿನ್ನೆಲೆಯಲ್ಲಿ ಬೆಳ್ತಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ 22 ಗ್ರಾಮಗಳ ಸರ್ವಧರ್ಮೀಯರ ಪ್ರಾರ್ಥನಾ ಮಂದಿರಗಳ ಮುಖ್ಯಸ್ಥರ ಸಭೆಯು ಮೇ.23 ರಂದು ಬೆಳ್ತಂಗಡಿ ಠಾಣೆಯಲ್ಲಿ ನಡೆಯಿತು.‌

ಸಭೆಯ ಅಧ್ಯಕ್ಷತೆಯನ್ನು ಬೆಳ್ತಂಗಡಿ ವೃತ್ತ ನಿರೀಕ್ಷಕ ಶಿವಕುಮಾರ್ ಬಿ ವಹಿಸಿದ್ದರು. ಕಾನೂನು ಸುವ್ಯವಸ್ಥೆ ವಿಭಾಗದ ಸಬ್ ಇನ್ಸ್‌ಪೆಕ್ಟರ್ ನಂದಕುಮಾರ್ ಎಮ್.ಎಮ್, ತನಿಖೆ ವಿಭಾಗದ ಸಬ್ ಇನ್ಸ್‌ಪೆಕ್ಟರ್ ರಾಮಕೃಷ್ಣ, ಪ್ರೊಬೆಷರಿ ಎಸ್.ಐ ಮುರಳೀಧರ ನಾಯ್ಕ್ ಪೂರಕ ಮಾಹಿತಿ ನೀಡಿದರು.

ಕಾನೂನಿಂತೆ ತಾಲೂಕಿನಲ್ಲಿ ಧ್ವನಿವರ್ಧಕ ಬಳಕೆ ಮಾಡುವ ಯಾವುದೇ ಪ್ರಾರ್ಥನಾ ಮಂದಿರ ಮತ್ತು ಸಂಸ್ಥೆಗಳು ಶಾಶ್ವತ ಬಳಕೆಗೆ ಡಿ.ವೈ.ಎಸ್‌.ಪಿ. ಅವರಿಂದ ಅನುಮತಿ ಪಡೆಯಬೇಕಿದೆ. ಯಾವುದೇ ಕಾರಣಕ್ಕೂ ರಾತ್ರಿ 10.00 ರಿಂದ ಬೆಳಿಗ್ಗೆ 6.00 ರ‌ವರೆಗೆ ಧ್ವನಿವರ್ಧಕ ಬಳಕೆ ಮಾಡುವಂತಿಲ್ಲ.

ಈ ಗಿನ ಕಾಯ್ದೆಯಂತೆ ಇದು ಕಡ್ಡಾಯವಾಗಿದ್ದು, ಮುಂದಿನ ತಿದ್ದುಪಡಿಗಳು ಬರುವಲ್ಲಿವರೆಗೆ ಇದನ್ನು ಪಾಲಿಸಬೇಕಿದೆ.
ವಿಶೇಷ ಕಾರ್ಯಕ್ರಮವಿದ್ದಲ್ಲಿ ಈ‌ ಹಿಂದಿನಂತೆಯೇ ಸರ್ಕಲ್ ಇನ್ಸ್‌ಪೆಕ್ಟರ್ ಅವರಿಂದ ಲಿಖಿತ ಮನವಿ ಸಲ್ಲಿಸಿ ನಿಯಮಾನುಸಾರ ಅನುಮತಿ ಪಡೆಯಬಹುದು ಎಂದು ಪೊಲೀಸ್ ಇಲಾಖೆಯಿಂದ ಮಾಹಿತಿ‌ ನೀಡಲಾಯಿತು. ಸಭೆಯಲ್ಲಿದ್ದ ಪದಾಧಿಕಾರಿಗಳು ಸಂದೇಹಗಳ ಬಗ್ಗೆ ಪ್ರಶ್ನೆ ಕೇಳಿದರು.

ಸಭೆಯಲ್ಲಿ ಮಸೀದಿ,‌ ಚರ್ಚ್, ದೇವಸ್ಥಾನ,‌ ಭಜನಾ ಮಂದಿರದ ಪದಾಧಿಕಾರಿಗಳು ಭಾಗವಹಿಸಿದ್ದರು.

ಪ್ರತ್ಯೇಕ ಠಾಣೆಗಳಲ್ಲಿ ಸಭೆ;
ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಮೇ.23 ರಂದು ಬೆಳಿಗ್ಗೆ, ವೇಣೂರು ಮತ್ತು ಉಪ್ಪಿನಂಗಡಿ ಠಾಣೆಯಲ್ಲಿ ಮೇ.22 ರಂದು ಸಂಜೆ ಆಯಾಯಾ ವ್ಯಾಪ್ತಿಯ ಗ್ರಾಮಗಳ ಮುಖ್ಯಸ್ಥರುಗಳ ಪ್ರತ್ಯೇಕ ಸಭೆಗಳು ನಡೆಯಿತು.

Sneha Gowda

Recent Posts

ಚಲಿಸುತ್ತಿದ್ದ ಬಸ್‌ನಲ್ಲಿ ಬೆಂಕಿ: 10 ಮಂದಿ ಸಜೀವ ದಹನ

ಬಸ್‌ಗೆ ಬೆಂಕಿ ಹತ್ತಿಕೊಂಡು 10 ಮಂದಿ ಮೃತಪಟ್ಟು, 10ಕ್ಕೂ ಹೆಚ್ಚು ಮಂದಿ ಗಾಯಗೊಂಡ ಘಟನೆ  ಹರಿಯಾಣದ ಕುಂಡಲಿ-ಮನೇಸರ್-ಪಲ್ವಾಲ್ ಎಕ್ಸ್‌ಪ್ರೆಸ್‌ ವೇಯಲ್ಲಿ…

4 mins ago

11 ತಿಂಗಳಿನಲ್ಲಿ ಬರೋಬ್ಬರಿ 5.38 ಕೋಟಿ ದಂಡ ವಸೂಲಿ ಮಾಡಿದ ಬಿಎಂಆರ್‌ಸಿಎಲ್‌

ನಮ್ಮ ಮೆಟ್ರೋದಲ್ಲಿ ಸುರಕ್ಷತೆ, ಭದ್ರತೆ ದೃಷ್ಟಿಯಿಂದ ಹಲವಾರು ನೀತಿ ನಿಯಮಗಳನ್ನು ಬಿಎಂಆರ್‌ಸಿಎಲ್‌ ಜಾರಿ ಮಾಡಿದೆ. ಬರೀ ನಿಯಮ ಮಾಡಿದ್ದು ಮಾತ್ರವಲ್ಲದೇ…

34 mins ago

ಆರ್‌ಸಿಬಿ ಸಿಎಸ್‌ಕೆ ಹೈವೋಲ್ಟೇಜ್ ಪಂದ್ಯ: ಸೈಬರ್‌ ಖದೀಮರಿಂದ ವಂಚನೆ

ಇಂದು ಚಿನ್ನಸ್ವಾಮಿಯಲ್ಲಿ ನಡೆಯಲಿರುವ ಹೈವೋಲ್ಟೇಜ್ ಪಂದ್ಯದ ಟಿಕೆಟ್ ಈಗಾಗಲೇ ಸೋಲ್ಡ್ ಔಟ್ ಆಗಿದೆ. ಆದರೆ ಈ ಪಂದ್ಯದ ಟಿಕೆಟ್‌ ನೀಡುತ್ತೇವೆ…

50 mins ago

ದೇಶಿಯ ಮದ್ಯಗಳ ಬೆಲೆ ಹೆಚ್ಚಿಸಲು ಮುಂದಾದ ಸರಕಾರ

ಪಂಚ ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸುವುದು ಸರಕಾರಕ್ಕೆ ಸವಾಲಾಗಿದ್ದು, ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ದೇಶಿಯ ಮದ್ಯಗಳ ಬೆಲೆ ಹೆಚ್ಚಿಸಲು…

1 hour ago

ಬಹುಭಾಷೆಯಲ್ಲಿ ಡಬ್ ಆಗಿದೆ ದೊಡ್ಮನೆ ಕುಡಿಯ ‘ಯುವ’ ಸಿನಿಮಾ

ದೊಡ್ಮನೆ ಕುಡಿ ಯುವರಾಜ್‌ಕುಮಾರ್ ನಟನೆಯ ‘ಯುವ’ ಸಿನಿಮಾ ಒಟಿಟಿಗೆ ಲಗ್ಗೆ ಇಟ್ಟಿದ್ದು ಇದೀಗ ಬಹುಭಾಷೆಯಲ್ಲಿ ಯುವ ಸಿನಿಮಾ ಡಬ್ ಆಗಿದೆ.…

1 hour ago

ಕೊನೆಯ ಸ್ಥಾನದೊಂದಿಗೆ ಐಪಿಎಲ್ ಅಂತ್ಯಗೊಳಿಸಿದ ಮುಂಬೈ ಇಂಡಿಯನ್ಸ್

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಶುಕ್ರವಾರ  ನಡೆದ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ  ಹಾರ್ದಿಕ್ ಪಾಂಡ್ಯ ಪಡೆ ಮುಂಬೈ ಇಂಡಿಯನ್ಸ್ ಸೋಲನುಭವಿಸಿದೆ.

2 hours ago