News Karnataka Kannada
Friday, May 03 2024
ಮಂಗಳೂರು

ಪಣಂಬೂರು: ಲಾರಿಯಲ್ಲಿ‌ ಅಗ್ನಿ ಅವಘಡ- ಬೆಂಕಿ ನಂದಿಸುವಲ್ಲಿ‌ ಯಶಸ್ವಿಯಾದ ಅಗ್ನಿ ಶಾಮಕ ದಳ

Fire
Photo Credit : News Kannada

ಪಣಂಬೂರು : ಲಾರಿಯೊಂದರಲ್ಲಿ‌ ಹಠಾತ್ ಆಗಿ ಬೆಂಕಿ‌ ಕಾಣಿಸಿಕೊಂಡ‌ ಘಟನೆ ಪಣಂಬೂರು ಪೊಲೀಸ್ ಠಾಣೆ ವ್ಯಾಪ್ತಿಯ ಎನ್‌ಎಂಪಿಟಿ ಗೇಟ್ ಬಳಿ ಸೋಮವಾರ ಸಂಜೆ‌ ನಡೆದಿದೆ.

ಗೋವಾದಿಂದ ತ್ರಿಶೂರ್ ಕಡೆಗೆ ತೆರಳುತ್ತಿದ್ದ ಕಂಟೈನರ್ ವಾಹನ, ಪಣಂಬೂರು ಎನ್ ಎಂಪಿಟಿ ಮುಖ್ಯ ಗೇಟ್ ಬಳಿ ತಲುಪಿದಾಗ ಅದರ ಕ್ಯಾಬಿನ್ ಹಾಗೂ ಬಾಡಿಯ ಹಿಂಭಾಗದ ಮಧ್ಯ ಭಾಗದಲ್ಲಿ ಬೆಂಕಿ ಕಾಣಿಸಿದೆ. ತಕ್ಷಣ ಎಚ್ಚೆತ್ತುಕೊಂಡ ಚಾಲಕ ಉತ್ತರ ಪ್ರದೇಶ ಮೂಲದ ರವೀಂದ್ರ ಕುಮಾರ್ ಚೌದರಿ ಎಂಬಾತ ವಾಹನವನ್ನು ರಸ್ತೆಯ ಬದಿಯಲ್ಲಿ‌ ನಿಲ್ಲಿಸಿ ಪಾರಾಗಿದ್ದಾನೆ ಎಂದು ತಿಳಿದು ಬಂದಿದೆ.

ಮಾಹಿತಿ‌ ತಿಳಿದು ತಕ್ಷಣ ಸ್ಥಳಕ್ಕಾಗಮಿಸಿದ ಹೊಯ್ಸಳ ಸಿಬ್ಬಂದಿ ಎನ್ ಎಂ ಪಿ ಟಿ ಯವರ ಅಗ್ನಿ ಶಾಮಕ ವಾಹನ ತರಿಸಿ ಬೆಂಕಿ ನಂದಿಸುವಲ್ಲಿ‌ ಯಶಸ್ವಿಯಾಗಿದ್ದಾರೆ. ಈ ಸಂದರ್ಭ ಸಾರ್ವಜನಿಕರು ಸಹಕರಿಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇಂಜಿನ್ ಶಾರ್ಟ್ ಸೆರ್ಕ್ಯುಟ್ ನಿಂದಾಗಿ ಈ ಘಟನೆ ನಡೆದಿದೆ. ಲಾರಿಯ ಚಾಲಕ‌ ಮತ್ತು‌ ಹೊಯ್ಸಳ ಸಿಬ್ಬಂದಿಯ‌ ಸಮಯ‌ ಪ್ರಜ್ಞೆಯಿಂದ ವಾಹನಕ್ಕೆ ಯಾವುದೇ ನಷ್ಟವುಂಟಾಗಿಲ್ಲ‌ ಮತ್ತು‌ ನಡೆಯಬಹುದಾಗಿದ್ದ‌ ದೊಡ್ಡ ದುರಂತವೊಂದು ತಪ್ಪಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಈ ಸಂಬಂಧ ಮಂಗಳೂರು ಉತ್ತರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ‌ ದಾಖಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು