News Karnataka Kannada
Tuesday, April 30 2024
ಮಂಗಳೂರು

ನದಿ ನೀರಿನಲ್ಲಿ ಮುಳುಗಿ ಉಜಿರೆಯ‌ ಯುವಕ ಬಲಿ

Navab
Photo Credit :

ಬೆಳ್ತಂಗಡಿ : ನಡ ಗ್ರಾಮದ ಕುತ್ರೊಟ್ಟು ದೇವರ ಗುಂಡಿ ಎಂಬಲ್ಲಿ ಸ್ನೇಹಿತರ ಜೊತೆ ಸ್ನಾನಕ್ಕೆ ಹೋಗಿದ್ದ ಯುವಕ ನಬಾನ್ (22) ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ರವಿವಾರ ನಡೆದಿದೆ.

ಕಾಶಿಬೆಟ್ಟು ಟಿಬಿ ಕ್ರಾಸ್ ಬಳಿಯ ಇಸ್ಮಾಯಿಲ್ ಅವರ ಪುತ್ರ ನಬಾನ್ ಅವರು ಇನ್ನಿಬ್ಬರು ಸಂಗಡಿಗರ ಜೊತೆ ನದಿಗೆ ಸ್ನಾನಕ್ಕೆ ಹೋಗಿದ್ದರು‌. ಈ ವೇಳೆ ಅಪಾಯಕ್ಕೆ ಸಿಲುಕಿದ ನಬಾನ್ ಅವರನ್ನು ರಕ್ಷಿಸಲು ಒಬ್ಬಾತ ಯತ್ನಿಸಿದ್ದರೂ ಅವರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ‌.

ತಕ್ಷಣ ಅವರನ್ನು ಸ್ಥಳೀಯರ ಸಹಕಾರದೊಂದಿಗೆ ಮೇಲಕ್ಕೆತ್ತಿ ಅಂಬುಲೆನ್ಸ್ ಮೂಲಕ ಬೆಳ್ತಂಗಡಿ ಆಸ್ಪತ್ರೆಗೆ ಕರೆತರಲಾಯಿತಾದರೂ ಅದಾಗಲೇ ಅವರ ಪ್ರಾಣ ಪಕ್ಷಿ ಹಾರಿಹೋಗಿತ್ತು.

ಇದೀಗ ಮೃತದೇಹ ಬೆಳ್ತಂಗಡಿ ಸರಕಾರಿ ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ. ಅವರ ಜೊತೆ ನದಿಗೆ ಹೋಗಿದ್ದ ಸಂಗಡಿಗರಿಬ್ಬರನ್ನೂ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡಸುತ್ತಿದ್ದಾರೆನ್ನಲಾಗಿದೆ

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
154
Deepak Atavale

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು