ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೋಮವಾರ (ಮಾ.07) ನಾಲ್ವರಿಗೆ ಕೊರೋನಾ ಸೋಂಕು ದೃಢ ಪಟ್ಟಿರುವುದಾಗಿ ಆರೋಗ್ಯ ಇಲಾಖೆ ತಿಳಿಸಿದೆ. ಕೆಲವು ದಿನಗಳಿಂದ ಜಿಲ್ಲೆಯಲ್ಲಿ ಕೊರೋನ ಸೋಂಕಿತರ ಪ್ರಮಾಣ ಗಣನೀಯವಾಗಿ ಇಳಿಕೆಯಾಗಿದ್ದು, ಒಂದಂಕೆಯಲ್ಲಿ ಮುಂದುವರಿದಿದೆ.
ಇದೇ ವೇಳೆ 6 ಮಂದಿ ಸೋಮವಾರ ಸೋಂಕು ಮುಕ್ತರಾಗಿದ್ದಾರೆ. ಈ ತನಕ ಜಿಲ್ಲೆಯಲ್ಲಿ 1,33,559 ಮಂದಿ ಕೋವಿಡ್ ಮುಕ್ತರಾಗಿದ್ದಾರೆ. ಸೋಮವಾರ ಯಾವುದೇ ಸಾವು ಸಂಭವಿಸಿಲ್ಲ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಈವರೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 1,847 ಕೋವಿಡ್ ಸಾವು ಸಂಭವಿಸಿರುವುದಾಗಿ ಆರೋಗ್ಯ ಇಲಾಖೆ ಹೇಳಿದೆ.
ದಕ್ಷಿಣ ಕನ್ನಡದಲ್ಲಿ ಸಕ್ರಿಯ ಪ್ರಕರಣಗಳು ಎರಡಂಕೆಗಳಿಗೆ ಇಳಿದಿದೆ. ಸೋಮವಾರ 25 ಸಕ್ರಿಯ ಪ್ರಕರಣಗಳು ವರದಿಯಾಗಿವೆ. ಪಾಸಿಟಿವಿಟಿ ದರ ಶೇ.0.25ರಲ್ಲಿದೆ.