News Karnataka Kannada
Sunday, April 28 2024
ಮಂಗಳೂರು

ತೊಕ್ಕೋಟು: ದೇಶದ ಸ್ವಾತಂತ್ರ್ಯಕ್ಕಾಗಿ ಕಾರ್ಮಿಕ ವರ್ಗ ನಡೆಸಿದ ಚಳುವಳಿ ಅವಿಸ್ಮರಣೀಯ

The movement of the working class for the independence of the country is unforgettable.
Photo Credit : By Author
ತೊಕ್ಕೋಟು: ದೇಶದ ಸ್ವಾತಂತ್ರ್ಯ ಚಳುವಳಿಯಲ್ಲಿ ಸರ್ವ ವಿಭಾಗದ ಜನತೆ ಭಾಗವಹಿಸಿದ್ದರೂ ಅದರಲ್ಲಿ ಕಾರ್ಮಿಕ ವರ್ಗ ನಡೆಸಿದ ಚಳುವಳಿಯಂತೂ ತೀರಾ ಅವಿಸ್ಮರಣೀಯವಾಗಿದೆ. ಅಂದು ಬ್ರಿಟಿಷರು ಜಾರಿಗೆ ತಂದಿದ್ದ ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ಪ್ರಬಲ ಹೋರಾಟ ನಡೆಸಿದ್ದ ಕಾರ್ಮಿಕ ವರ್ಗ ಇಂದೂ ಕೂಡ ಆಳುವ ವರ್ಗದ ಆಕ್ರಮಣಕಾರಿ ನೀತಿಗಳನ್ನು ಹಿಮ್ಮೆಟ್ಟಿಸಲು ಸಮರಶೀಲ ಹೋರಾಟದತ್ತ ಮುನ್ನುಗ್ಗುತ್ತಿದೆ. ಆಳುವ ವರ್ಗದ ವಿನಾಶಕಾರಿ ಆರ್ಥಿಕ ನೀತಿಗಳು ಹಾಗೂ ಕೋಮುವಾದಿ ಅಜೆಂಡಾದಿಂದಾಗಿ ದೇಶದ ಸ್ವಾತಂತ್ರ್ಯಕ್ಕೆ ಮತ್ತೆ ಅಪಾಯ ಬಂದೊದಗಿದ್ದು,ದೇಶ ಉಳಿಸುವ ಮೂಲಕ ಜನತೆಯ ಬದುಕನ್ನು ರಕ್ಷಿಸಲು ಕಾರ್ಮಿಕ ವರ್ಗ ಕಟಿಬದ್ದರಾಗಬೇಕಾಗಿದೆ ಎಂದು CITU ಕರ್ನಾಟಕ ರಾಜ್ಯ ಉಪಾಧ್ಯಕ್ಷರಾದ ವಸಂತ ಆಚಾರಿಯವರು ಸೇರಿದ್ದ ಕಾರ್ಮಿಕರಿಗೆ ಕರೆ ನೀಡಿದರು.
ಅವರು ತೊಕ್ಕೋಟುನಲ್ಲಿ ಜರುಗಿದ CITU ಉಳ್ಳಾಲ ವಲಯ ಸಮ್ಮೇಳನವನ್ನು ಉದ್ಘಾಟಿಸುತ್ತಾ ಈ ಮಾತುಗಳನ್ನು ಹೇಳಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಜಿಲ್ಲಾ ಕಾರ್ಮಿಕ ನಾಯಕರಾದ ಸುಕುಮಾರ್ ರವರು, *ಇಂದು ಕಾರ್ಪೊರೇಟ್ ಹಿಂದುತ್ವದ ಕೂಟ ದೇಶವನ್ನು ಆಳುತ್ತಿದ್ದು ದೇಶದ ಸ್ವಾತಂತ್ರ್ಯ, ಸಮಗ್ರತೆ,ಸಾರ್ವಭೌಮತ್ವವನ್ನು ನಾಶ ಮಾಡುತ್ತಿದೆ.ಸರ್ವ ಜನಾಂಗದ ಶಾಂತಿಯ ತೋಟವಾದ ಭಾರತವನ್ನು ಜಾತಿ ಧರ್ಮದ ಆಧಾರದಲ್ಲಿ ಮತ್ತೆ ವಿಭಜಿಸಲು ಹುನ್ನಾರ ನಡೆಸುತ್ತಿದೆ. ಕಾರ್ಮಿಕ ವರ್ಗದ ಹಕ್ಕು ಭಾಧ್ಯತೆಗಳನ್ನು ಇಲ್ಲವಾಗಿಸಿ ಕಾರ್ಮಿಕರನ್ನು ಮತ್ತೆ ಗುಲಾಮಗಿರಿಯತ್ತ ದೂಡುತ್ತಿದೆ* ಎಂದು ಹೇಳಿದರು.
ಸಮ್ಮೇಳನಕ್ಕೆ ಮಾರ್ಗದರ್ಶನ ನೀಡಿದ CITU ದ.ಕ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ರವರು ಮಾತನಾಡುತ್ತಾ, *ಐಕ್ಯತೆ ಮತ್ತು ಹೋರಾಟದ ನಿನಾದದೊಂದಿಗೆ ಜನ್ಮ ತಾಳಿದ CITU ವಿವಿಧ ವಿಭಾಗದ ಕಾರ್ಮಿಕರ ಸಂಕಷ್ಟಗಳಿಗೆ ಸ್ಪಂದಿಸುವ ಮೂಲಕ ದೇಶದ ಬಲಿಷ್ಠ ಕಾರ್ಮಿಕ ಸಂಘಟನೆಯಾಗಿ ಮೂಡಿ ಬಂದಿದೆ.ಕಾರ್ಮಿಕ ವರ್ಗದ ಮಧ್ಯೆ ಐಕ್ಯತೆ ಸಾಧಿಸಿ ಚಳುವಳಿಯನ್ನು ವಿಸ್ತರಿಸಿ ದೇಶವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಲು ಕಾರ್ಮಿಕ ವರ್ಗಕ್ಕೆ ಮಾತ್ರ ಸಾಧ್ಯ* ಎಂದು ಹೇಳಿದರು.
ಕರ್ನಾಟಕ ಪ್ರಾಂತ ರೈತ ಸಂಘದ ಕ್ರಷ್ಣಪ್ಪ ಸಾಲ್ಯಾನ್ ರವರು ಸಮ್ಮೇಳನಕ್ಕೆ ಶುಭಕೋರಿ ಮಾತನಾಡಿದರು. ಸಭೆಯ ಅಧ್ಯಕ್ಷತೆಯನ್ನು CITU ಉಳ್ಳಾಲ ವಲಯಾಧ್ಯಕ್ಷರಾದ ಪದ್ಮಾವತಿ ಶೆಟ್ಟಿಯವರು ವಹಿಸಿದ್ದರು.ಬಳಿಕ ನಡೆದ ಪ್ರತಿನಿಧಿ ಅಧಿವೇಶನದಲ್ಲಿ CITU ಉಳ್ಳಾಲ ವಲಯ ಪ್ರಧಾನ ಕಾರ್ಯದರ್ಶಿ ಜಯಂತ ನಾಯಕ್ ರವರು ಕರಡು ವರದಿ ಮಂಡಿಸಿದರು. ಸಮ್ಮೇಳನದ ಸಮಾರೋಪ ಭಾಷಣವನ್ನು ಜಿಲ್ಲೆಯ ಹಿರಿಯ ಕಾರ್ಮಿಕ ನಾಯಕರಾದ ಯು.ಬಿ.ಲೋಕಯ್ಯರವರು ಮಾಡಿದರು.
 ಸಮ್ಮೇಳನವು ನೂತನ ವಲಯ ಸಮಿತಿಯನ್ನು ರಚಿಸಿತು. ನೂತನ ಅಧ್ಯಕ್ಷರಾಗಿ ಸುಂದರ ಕುಂಪಲ,ಪ್ರಧಾನ ಕಾರ್ಯದರ್ಶಿಯಾಗಿ ರೋಹಿದಾಸ್ ಭಟ್ನಗರ, ಖಜಾಂಚಿಯಾಗಿ ವಿಲಾಸಿನಿ ತೊಕ್ಕೋಟುರವರು ಸರ್ವಾನುಮತದಿಂದ ಆಯ್ಕೆಯಾದರು. ಉಪಾಧ್ಯಕ್ಷರುಗಳಾಗಿ ಪದ್ಮಾವತಿ ಶೆಟ್ಟಿ,ರಾಮಚಂದ್ರ ಪಜೀರು,ಜನಾರ್ಧನ ಕುತ್ತಾರ್, ಜಯಂತ ನಾಯಕ್, ಕಾರ್ಯದರ್ಶಿಗಳಾಗಿ ಅಶೋಕ ಶೆಟ್ಟಿ,ಚಂದ್ರಹಾಸ ಪಿಲಾರ್, ಬಾಬು ಪಿಲಾರ್, ರತ್ನಮಾಲಾ ಉಚ್ಚಿಲರವರನ್ನು ಆರಿಸಲಾಯಿತು.
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
15229
Jaya Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು