ಮಂಗಳೂರು: 2021-22ನೇ ಶೈಕ್ಷಣಿಕ ಸಾಲಿನ ತುಳು ಸ್ನಾತಕೋತ್ತರ ಅಧ್ಯಯನ ವಿಭಾಗಕ್ಕೆ ಎರಡು ರ್ಯಾಂಕ್ ಗಳು ಲಭಿಸಿವೆ. ಮಣಿ ಎಂ.ರೈ ಹಾಗೂ ವಿಜಯಲಕ್ಷ್ಮಿ ಪಿ. ರೈ ಇವರಿಬ್ಬರೂ 8.3 ಗ್ರೇಡ್ ಪಡೆದಿದ್ದು, ಪ್ರಥಮ ರ್ಯಾಂಕ್ ಹಂಚಿಕೊಂಡಿದ್ದಾರೆ.
ಮಂಗಳೂರು ವಿಶ್ವವಿದ್ಯಾನಿಲಯವು 2018 ರಲ್ಲಿ ನಗರದ ವಿಶ್ವವಿದ್ಯಾನಿಲಯ ಸಂಧ್ಯಾ ಕಾಲೇಜಿನಲ್ಲಿ ತುಳು ಸ್ನಾತಕೋತ್ತರ ಅಧ್ಯಯನ ವಿಭಾಗ ಆರಂಭಿಸಿದ್ದು, ತುಳು ಎಂ.ಎಯ ಎರಡನೇ ಬ್ಯಾಚ್ ಇದು.
ಎಪ್ರಿಲ್ 23 ರಂದುಮಂಗಳಗಂಗೋತ್ರಿಯಲ್ಲಿ ನಡೆದ ಘಟಿಕೋತ್ಸವದಲ್ಲಿ ರ್ಯಾಂಕ್ ಪ್ರದಾನ ಮಾಡಲಾಯಿತು.