News Karnataka Kannada
Sunday, May 12 2024
ಮಂಗಳೂರು

ಜಾಗ ಮಾರಾಟ: ನಕಲಿ ದಾಖಲೆ ಸೃಷ್ಟಿಸಿ ವಂಚನೆ ಹಿನ್ನೆಲೆ ಇಬ್ಬರ ಬಂಧನ

Accused
Photo Credit : News Kannada

ಮಂಗಳೂರು : ವೃದ್ಧರೋರ್ವರ ಜಾಗ ಮಾರಾಟಕ್ಕೆ ಸಂಬಂಧಿಸಿ ನಕಲಿ ದಾಖಲೆ ಸೃಷ್ಟಿಸಿ 60 ಲ.ರೂ.ಗೂ ಅಧಿಕ ವಂಚನೆ ಎಸಗಿದ ಪ್ರಕರಣಕ್ಕೆ ಸಂಬಂಧಿಸಿ ಮಂಗಳೂರು ಪೊಲೀಸರು ಉಡುಪಿಯ ಅಶೋಕ ಕುಮಾರ್‌(47) ಮತ್ತು ರೇಷ್ಮಾ ವಾಸುದೇವ್‌ ನಾಯಕ್‌ (36) ಎಂಬವರನ್ನು ಬಂಧಿಸಿದ್ದಾರೆ.

ಬೆಂಗಳೂರು ಮೂಲದ, ಪ್ರಸ್ತುತ ಬಜಪೆ ಬಳಿ ವಾಸವಿರುವ ಕ್ರಿಸ್ಟಿನ್‌ ಎಡ್ವಿನ್‌ ಜೋಸೆಫ್ ಗೋನ್ಸಾಲ್ವಿಸ್‌(84) ವಂಚನೆಗೊಳಗಾದವರು. ಅವರು ಉಡುಪಿ ಜಿಲ್ಲೆಯ ಮೂಡುತೋನ್ಸೆ ಗ್ರಾಮದಲ್ಲಿ 77 ಸೆಂಟ್ಸ್‌ ಜಾಗ ಹೊಂದಿದ್ದು ಅದನ್ನು ಮಾರಾಟ ಮಾಡಲು ಇಚ್ಛಿಸಿದ್ದರು. ಅದನ್ನು ತಮ್ಮ ಪರಿಚಯದ ರಾಮ ಪೂಜಾರಿ ಎಂಬವರಿಗೆ ಹೇಳಿದ್ದರು.

ಅಶೋಕ್‌ ಕುಮಾರ್‌ ಮತ್ತು ರೇಷ್ಮಾ ನಾಯಕ್‌ ಜಾಗ ಖರೀದಿಸಲು ಆಸಕ್ತಿ ಹೊಂದಿರುವ ಬಗ್ಗೆ ರಾಮ ಪೂಜಾರಿ ತಿಳಿಸಿದ್ದರು. ಅನಂತರ ಕರಾರು ಪತ್ರ ಮಾಡಲಾಗಿತ್ತು. ಆ ಸಂದರ್ಭ ಮುಂಗಡವಾಗಿ ಚೆಕ್‌ ಮೂಲಕ 30 ಲ.ರೂ.ಗಳನ್ನು ನೀಡಿದ್ದು ಉಳಿದ ಹಣವನ್ನು 6 ತಿಂಗಳೊಳಗೆ ನೀಡಿ ಕ್ರಯಪತ್ರ ರಿಜಿಸ್ಟರ್‌ ಮಾಡಿಕೊಳ್ಳುವುದಾಗಿ ತಿಳಿಸಿದ್ದರು.

ಅನಂತರ ಖರೀದಿದಾರರು ಹಣದ ಕೊರತೆ ಇರುವುದರಿಂದ ಮೊದಲು 40 ಸೆಂಟ್ಸ್‌ ನೋಂದಣಿ ಮಾಡಿಸಿ ಹಣ ನೀಡಿ, ಉಳಿದ 37 ಸೆಂಟ್ಸ್‌ ಅನಂತರ ನೋಂದಣಿ ಮಾಡಿಕೊಳ್ಳುವುದಾಗಿ ತಿಳಿಸಿದ್ದರು. ಆದರೆ ಅವರು ವಂಚಿಸಿ ಎಲ್ಲ 77 ಸೆಂಟ್ಸ್‌ಗೆ ಕ್ರಯಪತ್ರ ಮಾಡಿಸಿದ್ದರು. ಅದಕ್ಕೆ ಪೂರಕವಾಗಿ ವಿವಿಧ ದಾಖಲೆಪತ್ರಗಳನ್ನು ನಕಲಿಯಾಗಿ ಮಾಡಿರುವುದು ಗೊತ್ತಾಗಿದೆ.

ಅಲ್ಲದೆ ಅವರು ನೀಡಿದ ಚೆಕ್‌ ಕೂಡ ಬೌನ್ಸ್‌ ಆಗಿರುವ ಬಗ್ಗೆ ಕ್ರಿಸ್ಟಿನ್‌ ಎಡ್ವಿನ್‌ ಅವರು ಮಂಗಳೂರಿನ ಸೈಬರ್‌ ಮತ್ತು ಆರ್ಥಿಕ ಅಪರಾಧಗಳ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು