ಮಂಗಳೂರು : ಪತ್ರಕರ್ತ ಕನ್ನಡ ಖಾಸಗಿ ನ್ಯೂಸ್ ಚಾನೆಲ್ ನ ಜಿಲ್ಲಾ ವರದಿಗಾರ ಎನ್ನುವವನ ಮೇಲೆ ನಿನ್ನೆ ಸಂಜೆ ಮಾರಣಾಂತಿಕ ಹಲ್ಲೆ ನಡೆದ ಘಟನೆ ನಗರದಲ್ಲಿ ನಡೆದಿದೆ ಖಾಸಗಿ ನ್ಯೂಸ್ ಚಾನೆಲ್ ನ ದಕ್ಷಿಣ ಕನ್ನಡ ಜಿಲ್ಲಾ ವರದಿಗಾರ ಸುಖಪಾಲ್ ಪೊಳಲಿ ಹಲ್ಲೆಗೊಳಗಾದ ಪತ್ರಕರ್ತ.
ನಿನ್ನೆ ಸಂಜೆ ವ್ಯಕ್ತಿಯೊಬ್ಬ ಏಕಾಏಕಿ ಬಂದು ಸುಖ್ ಪಾಲ್ ಪೊಳಲಿ ಮೇಲೆ ಮಾರಾಕಾಯುಧದಿಂದ ತಲೆಯ ಭಾಗಕ್ಕೆ ಹಲ್ಲೆ ನಡೆಸಲಾಗಿದ್ದು ಸದ್ಯ ಆರೋಪಿಯನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ ಹಲ್ಲೆ ನಡೆಸಿದ ಆರೋಪಿಯನ್ನು ವಕೀಲ ಯದುನಂದನ್ ಎಂದು ಗುರ್ತಿಸಲಾಗಿದೆ.
ವೈಯಕ್ತಿಕ ವಿಚಾರದ ದ್ವೇಷದ ಹಿನ್ನೆಲೆಯಲ್ಲಿ ಹಲ್ಲೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ .ಹಲ್ಲೆಗೊಳಗಾದ ಸುಖ್ ಪಾಲ್ ಪೊಳಲಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಉರ್ವ ಠಾಣೆಯಲ್ಲಿ ಐಪಿಸಿ ಮುನ್ 30 7ರ ಪ್ರಕಾರ ಕೊಲೆ ಯತ್ನ ಪ್ರಕರಣ ದಾಖಲಾಗಿದೆ ಘಟನೆ ಸಂಬಂಧ ಪಟ್ಟಂತೆ ಪ್ರತಿ ದೂರು ಸಹ ದಾಖಲಿಸಲಾಗಿದೆ