News Karnataka Kannada
Thursday, May 02 2024
ದೆಹಲಿ

ಭಾರತದಲ್ಲಿ ಹುತಾತ್ಮ ಯೋಧರ ಕುಟುಂಬಕ್ಕೆ 35 ಲಕ್ಷ ರೂ. ಆರ್ಥಿಕ ನೆರವು

Indain Army
Photo Credit :

ನವದೆಹಲಿ: ದೇಶದ ರಕ್ಷಣಾ ಕಾರ್ಯಾಚರಣೆ ವೇಳೆ ಹುತಾತ್ಮರಾದ ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆಗಳ (CAPF) ಯೋಧರ ಕುಟುಂಬಗಳಿಗೆ ನೀಡುತ್ತಿದ್ದ ಹಣಕಾಸಿನ ನೆರವಿನ ಪ್ರಮಾಣವನ್ನು ನವೆಂಬರ್ ತಿಂಗಳಿನಿಂದ ಹೆಚ್ಚಿಸಲಾಗುವುದು ಎಂದು ಗೃಹ ಸಚಿವಾಲಯದ ಮೂಲಗಳಿಂದ ತಿಳಿದು ಬಂದಿದೆ.

“ಕಾರ್ಯಾಚರಣೆ ಸಂದರ್ಭಗಳಲ್ಲಿ ಹುತಾತ್ಮರಾದ ಎಲ್ಲಾ CAPF ಸಿಬ್ಬಂದಿಗೂ ಏಕಕಾಲಕ್ಕೆ 35 ಲಕ್ಷ ರೂಪಾಯಿ ಆರ್ಥಿಕ ನೆರವು ನೀಡುವುದಕ್ಕೆ ಕೇಂದ್ರ ಗೃಹ ಸಚಿವಾಲಯ ಬಯಸಿದೆ.

ಮೂಲಗಳ ಪ್ರಕಾರ, ಸೇನಾ ಕಾರ್ಯಾಚರಣೆಗಳಲ್ಲಿ ಹುತಾತ್ಮರಾದ ಬಹುತೇಕ ಎಲ್ಲಾ ಪಡೆಗಳ ವಾರಸುದಾರರಿಗೆ ನೀಡುವ ಆರ್ಥಿಕ ನೆರವಿನ ಮೊತ್ತವನ್ನು 35 ಲಕ್ಷ ರೂಪಾಯಿಗೆ ಹೆಚ್ಚಿಸುವುದರ ಕುರಿತು ಆದೇಶ ಹೊರಡಿಸಲಾಗಿದೆ.

ಈ ಹೊಸ ನಿಯಮವು 2021ರ ನವೆಂಬರ್ 1 ರಿಂದ ಅನ್ವಯವಾಗುತ್ತದೆ. ಇತರ ರೀತಿಯಲ್ಲಿ ಮೃತಪಡುವ ಯೋಧರ ಕುಟುಂಬಕ್ಕೆ ನೀಡುವ ಪರಿಹಾರದ ಮೊತ್ತದಲ್ಲಿ ಯಾವುದೇ ಬದಲಾವಣೆಯಾಗಿಲ್ಲ ಎಂದು ತಿಳಿದು ಬಂದಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು