News Karnataka Kannada
Monday, May 06 2024
ಮಂಗಳೂರು

ಎಮ್ಮೆಯ ಬರ್ಬರ ಹತ್ಯೆ: ಜಮೀನು ಮಾಲಿಕ ಬಂಧನ

Yemme
Photo Credit :

ಮಂಗಳೂರು: ನಗರದ ಹೊರವಲಯದ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬಲ್ಯ ಎಂಬಲ್ಲಿ ಜಮೀನಿಗೆ ನುಗ್ಗಿದ ಎಮ್ಮೆಯನ್ನು ಬರ್ಬರವಾಗಿ ಕೊಂದು ಹಾಕಿದ ಘಟನೆಗೆ ಸಂಬಂಧಿಸಿದಂತೆ ಒಬ್ಬನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ನಿನ್ನೆ ಭಾನುವಾರ ಸಾಯಂಕಾಲ ಹೊಲಕ್ಕೆ ನುಗ್ಗಿದ್ದ ಎಮ್ಮೆಯನ್ನು ಹಿಡಿದು ಕೊಂದು ಹಾಕಲಾಗಿತ್ತು. ಎಮ್ಮೆಯ ಗಂಟಲನ್ನು ಆರೋಪಿಗಳು ಸೀಳಿ ಹಾಕಿದ್ದರು. ಸತ್ತು ಹೋದ ಎಮ್ಮೆಯನ್ನು ಕಂಡು ಸ್ಥಳೀಯರು ಹಿಂದೂಪರ ಸಂಘಟನೆಗಳಿಗೆ ಮಾಹಿತಿ ನೀಡಿದ್ದರು.

ಹಿಂದೂಪರ ಕಾರ್ಯಕರ್ತರು ಕೂಡಲೇ ಸ್ಥಳಕ್ಕೆ ಬಂದು ಜಮೀನಿನ ಮಾಲಿಕ ಜಯರಾಮ್ ಶೆಟ್ಟಿ ಇತರರ ಸಹಾಯದಿಂದ ಎಮ್ಮೆಯನ್ನು ಕೊಂದುಹಾಕಿದ್ದಾರೆ ಎಂದು ಆರೋಪಿಸಿದ್ದಾರೆ. ಸ್ಥಳದಲ್ಲಿ ದ್ವಿಚಕ್ರ ವಾಹನವೊಂದನ್ನು ಬಿಟ್ಟು ಪರಾರಿಯಾಗಿದ್ದು ಎಮ್ಮೆಯನ್ನು ಕೊಂದು ಆರೋಪಿಗಳು ಪರಾರಿಯಾಗಿದ್ದಾರೆ ಎಂದು ಕಾರ್ಯಕರ್ತರು ಆರೋಪಿಸಿದ್ದಾರೆ.

ಪೊಲೀಸರಿಗೆ ವಿಷಯ ತಲುಪಿದಾಗ ಸ್ಥಳಕ್ಕೆ ಉಳ್ಳಾಲ ಇನ್ಸ್ ಪೆಕ್ಟರ್ ಸಂದೀಪ್ ಭೇಟಿ ನೀಡಿದರು. ಜಯರಾಮ್ ಶೆಟ್ಟಿಯವರನ್ನು ವಿಚಾರಣೆ ನಡೆಸಿ ತಮ್ಮ ಕಸ್ಟಡಿಗೆ ತೆಗೆದುಕೊಂಡು ಹೋದರು. ಉಳ್ಳಾಲ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಎಮ್ಮೆಯ ಮರಣೋತ್ತರ ಪರೀಕ್ಷೆ ಮುಗಿದ ಮೇಲೆ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು