News Karnataka Kannada
Monday, April 29 2024
ಮಂಗಳೂರು

ಅಡಕೆ ಮನುಷ್ಯರಿಗೆ ಮತ್ತು ಜಾನುವಾರುಗಳಿಗೆ ಬೇಕಾದ ಔಷಧೀಯ ಗುಣ ಹೊಂದಿರುವ ಪದಾರ್ಥ: ಕ್ಯಾಂಪ್ಕೊ

Arecanut
Photo Credit :

ಮಂಗಳೂರು (ನ.10) : ಜಾರ್ಖಂಡ್‌  ಸಂಸದ ನಿಶಿಕಾಂತ್‌ ದುಬೆ ಅವರು ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲದೆ ಮಾನವನ ಆರೋಗ್ಯದ ಮೇಲೆ ಅಡಕೆಯ  ಹಾನಿಕಾರಕ ಪರಿಣಾಮಗಳನ್ನು ಪಟ್ಟಿ ಮಾಡಿದ್ದಾರೆ. ಇದು ತಪ್ಪು ದಾರಿಗೆ ಎಳೆಯುವುದು ಮಾತ್ರವಲ್ಲದೆ, ಅಡಕೆ ರೈತರ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಕ್ಯಾಂಪ್ಕೊ ಹೇಳಿದೆ.

ಅಡಕೆ ಮನುಷ್ಯರಿಗೆ ಮತ್ತು ಜಾನುವಾರುಗಳಿಗೆ ಬೇಕಾದ ಔಷಧೀಯ ಗುಣಗಳನ್ನು ಹೊಂದಿರುವ ಪದಾರ್ಥ. ಮಧುಮೇಹ , ಕೊಲೆಸ್ಟರಾಲ್, ಹಲವಾರು ಅನುಪಯುಕ್ತ ಬ್ಯಾಕ್ಟೀರಿಯಾ, ಶಿಲೀಂಧ್ರಗಳು, ಪ್ರೊಟೊ ಜೋವನ್‌ ಪರಾವಲಂಬಿಗಳು ಇತ್ಯಾದಿಗಳನ್ನು ಸವಾರಿಸುವ ಶಕ್ತಿ ಹೊಂದಿದೆ. ಇದು ಎಚ್‌ಐವಿ ವಿರುದ್ಧ ಹೋರಾಡುವ ಶಕ್ತಿಯನ್ನು ಹೊಂದಿದ್ದು, ಆಂಟಿ ಮಲೇರಿಯಲ್, ಆಂಥೆಲ್ಮಿಂಟಿಕ್‌ ಗುಣ ಲಕ್ಷಣಗಳನ್ನು ಸಹ ಹೊಂದಿದೆ. ಇದು ನೋವನ್ನು ಕಡಿಮೆ ಮಾಡಲು, ಗಾಯಗಳು ಮತ್ತು ಹುಣ್ಣುಗಳನ್ನು ಗುಣಪಡಿಸಲು ಸಹಾಯ ಮಾಡುತ್ತದೆ. ಇದು ಉತ್ತಮ ಆಂಟಿ – ವೆನಮ್‌ ಗುಣ ಲಕ್ಷಣಗಳನ್ನು ಹೊಂದಿದೆ ಎಂದಿದೆ.

ಅಡಕೆ ಎಲ್ಲ ಧಾರ್ಮಿಕ, ಸಾಮಾಜಿಕ  ಮತ್ತು ಸಾಂಸ್ಕೃತಿಕ ಕಾರ್ಯಗಳಲ್ಲಿ ಬಹಳ ಮಹತ್ವದ ಸ್ಥಾನವನ್ನು ಪಡೆಯುತ್ತದೆ ಮತ್ತು ಚರಕ ಸಂಹಿತೆಯಷ್ಟು ಹಿಂದಿನ ಆಯುರ್ವೇದ ಔಷಧದಲ್ಲಿ ಸುದೀರ್ಘ ಇತಿಹಾಸವನ್ನು ಹೊಂದಿದೆ. ಅಡಕೆ ಮಾತ್ರ ಕ್ಯಾನ್ಸರ್‌ ಕಾರಕವಲ್ಲ ಎಂಬುದು ಮತ್ತೆ ಸಾಬೀತಾಗಿದೆ. ದೇಶೀಯ ಮತ್ತು ಅಂತರಾಷ್ಟ್ರೀಯ ಸಮರ್ಥ ಸಂಶೋಧನಾ ಸಂಸ್ಥೆಗಳು ನಡೆಸಿದ ಇತ್ತೀಚಿನ ಸಂಶೋಧನೆಗಳು ಸಕಾರಾತ್ಮಕ ಫಲಿತಾಂಶಗಳನ್ನು ಸಾಬೀತು ಪಡಿಸಿವೆ. 1974ರಲ್ಲಿ ಬೆಂಗಳೂರಿನ  ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿಗಳು ಅಡಕೆ ಕ್ಯಾನ್ಸರ್‌ನ್ನು ಗುಣಪಡಿಸುತ್ತದೆ ಎಂದು ವರದಿ ಮಾಡಿದ್ದಾರೆ.

ಅಮೆರಿಕಾ, ಅಟ್ಲಾಂಟಾ, ಎಮೋರಿ ವಿಶ್ವ ವಿದ್ಯಾಲಯದ ವಿನ್ಶಿಪ್‌ ಕ್ಯಾನ್ಸರ್‌ ಇನ್ಸ್ಟಿ ಟ್ಯೂಟ್‌ನ ಪ್ರಖ್ಯಾತ ವಿಜ್ಞಾನಿಗಳ ಗುಂಪಿನಿಂದಲೂ ಇದನ್ನು ದೃಢೀಕರಿಸಲಾಗಿದೆ.

ಚೀನಾದಲ್ಲಿ  ಈಗಾಗಲೇ ಅಡಕೆ ಬಳಸಿ 30ಕ್ಕೂ ಹೆಚ್ಚು ಔಷಧಗಳನ್ನು ತಯಾರಿಸಲಾಗಿದೆ ಮತ್ತು ‘ಮೆಟೀರಿಯಾ ಮೆಡಿಕಾ’ದಲ್ಲಿ ವರದಿ ಮಾಡಿದಂತೆ ಈಗಲೂ ಅಭ್ಯಾಸ ಮಾಡಲಾಗುತ್ತಿದೆ. ಆ ಮಟ್ಟಿಗೆ ಕ್ಯಾಂಪ್ಕೊ ಈಗಾಗಲೇ ಸಂಶೋಧನೆಯ ಕಾರ್ಯಗಳಿಗೆ ಕ್ರಮಗಳನ್ನು ಪ್ರಾರಂಭಿಸಿದೆ ಮತ್ತು ಅಂತಾರಾಷ್ಟ್ರೀಯ ಖ್ಯಾತಿಯನ್ನು ಹೊಂದಿರುವ ಪ್ರತಿಷ್ಠಿತ ಸಂಶೋಧನಾ ಸಂಸ್ಥೆಗಳಿಗೆ ಅದನ್ನು ಮಂಜೂರು ಮಾಡಿದೆ. ಆಹಾರ ಕಲಬೆರಕೆ ತಡೆ ಕಾಯ್ದೆಯ ಸೆಕ್ಷನ್‌-2(ವಿ) ರ ಅರ್ಥದಲ್ಲಿ ಅಡಕೆ ಆಹಾರ ಎಂದು ಸುಪ್ರೀಂ ಕೋರ್ಟ್‌ ಕೂಡ ತೀರ್ಪು ನೀಡಿದೆ ಎಂದು ವಿವರಿಸಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು