ಮಂಗಳೂರು : ಇಂದು ದುಬೈನಿಂದ ಏರ್ ಇಂಡಿಯಾ ಎಕ್ಸ್ ಪ್ರೆಸ್ ನಲ್ಲಿ ಬಂದಿದ್ದ ಮಹಿಳೆಯರು ಹೇರ್ ಬ್ಯಾಂಡ್ ನಲ್ಲಿ ಅಕ್ರಮ ಚಿನ್ನ ಸಾಗಾಟ ಮಾಡುತ್ತಿದ್ದ ವೇಳೆ ಮುರುಡೇಶ್ವರ ಮೂಲದ ವ್ಯಕ್ತಿ ಪತ್ತೆ ಹಚ್ಚಿ ಕಸ್ಟಮ್ ಅಧಿಕಾರಿಗಳಿಗೆ ಒಪ್ಪಿಸಿದ್ದಾರೆ.ಹೇರ್ ಬ್ಯಾಂಡ್ ನ ಮೇಲ್ಬಾಗದಲ್ಲಿ ತಂತಿ ರೂಪದಲ್ಲಿ ಅಡಗಿಸಿ ಸಾಗಾಟ ಮಾಡುತ್ತಿದ್ದರು . ಹೇರ್ ಬ್ಯಾಂಡ್ ನಲ್ಲಿದ್ದ 115 ಗ್ರಾಂ ಚಿನ್ನ. ಒಟ್ಟು ರೂ 5,58,900 ಮೌಲ್ಯದ ಚಿನ್ನ ಅಧಿಕಾರಿಗಳ ವಶವಾಗಿದೆ.
ಆಗಸ್ಟ್ 12 ರಂದು ಇನ್ನೊಂದು ಪ್ರಕರಣ ಪತ್ತೆಯಾಗಿತ್ತು . ಕಾಸರಗೋಡು ಮೂಲದ ಪ್ರಯಾಣಿಕನು ಮಿಕ್ಸರ್ ಗ್ರೈಂಡರ್ ನಲ್ಲಿ ಅಡಗಿಸಿ ಚಿನ್ನ ಸಾಗಾಟ ಮಾಡುತ್ತಿದ್ದ. ರೂ 16,85,087 ರೂ ಮೌಲ್ಯದ 350.330 ಗ್ರಾಂ ಚಿನ್ನ ವಶಕ್ಕೆ. ಮಂಗಳೂರು ಕಸ್ಟಮ್ ಅಧಿಕಾರಿಗಳು ಈ ಎರಡು ಪ್ರಕರಣಗಳ ತನಿಖೆ ನಡೆಸುತ್ತಿದ್ದಾರೆ.