ಕಾಸರಗೋಡು: ಸ್ಕೂಟರ್ ಮತ್ತು ಖಾಸಗಿ ಬಸ್ಸು ನಡುವೆ ಉಂಟಾದ ಅಪಘಾತದಲ್ಲಿ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಿಸಲಾಗಿದ್ದ ಸವಾರನೋರ್ವ ಮೃತ ಪಟ್ಟಿದ್ದಾರೆ. ಉಪ್ಪಳ ಸೊಂಕಾಲ್’ನ ಇಬ್ರಾಹಿಂ ಖಲೀಲ್ (23) ಮೃತ ಪಟ್ಟವರು. ರವಿವಾರ ರಾತ್ರಿ ಕುಂಬಳೆ ಭಾಸ್ಕರ ನಗರದಲ್ಲಿ ಅಪಘಾತ ನಡೆದಿತ್ತು. ಗಂಭೀರ ಗಾಯಗೊಂಡು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದ್ದ ಖಲೀಲ್ ಇಂದು ಬೆಳಿಗ್ಗೆ ಮೃತ ಪಟ್ಟಿದ್ದಾರೆ. ಜೊತೆಗಿದ್ದ ಉಪ್ಪಳ ಮಣಿಮುಂಡದ ಮುಹಮ್ಮದ್ ಮಾಝ್ ಗಾಯಗೊಂಡಿದ್ದು, ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಕುಂಬಳೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸ್ಕೂಟರ್ – ಖಾಸಗಿ ಬಸ್ಸು ನಡುವೆ ಅಪಘಾತ: ಸವಾರ ಸಾವು
Photo Credit :
By Author
ಹನಿ ಹನಿ ಕೂಡಿ ಹಳ್ಳ
ನ್ಯೂಸ್ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.