News Karnataka Kannada
Monday, May 06 2024
ಕಾಸರಗೋಡು

ಕಾಸರಗೋಡು: ನಿಯಂತ್ರಣ ತಪ್ಪಿ ಹೊಂಡಕ್ಕೆ ಉರುಳಿದ ಕಾರು, ಮೂವರ ದುರ್ಮರಣ

Three killed as car falls into gorge in Kasargod
Photo Credit : By Author

ಕಾಸರಗೋಡು: ಕಾರು ನಿಯಂತ್ರಣ ತಪ್ಪಿ ಹೊಂಡಕ್ಕೆ ಉರುಳಿದ ಪರಿಣಾಮ ಕಾಸರಗೋಡಿನ ವಿದ್ಯಾರ್ಥಿನಿ ಸೇರಿದಂತೆ ಮೂವರು ಮೃತ ಪಟ್ಟ ಘಟನೆ ಆದಿತ್ಯವಾರ ಸಂಜೆ ವಯನಾಡ್ ಕಲ್ಪಟ್ಟ ಸಮೀಪ ನಡೆದಿದೆ. ಮೂವರು ಗಂಭೀರ ಗಾಯ ಗೊಂಡಿದ್ದಾರೆ.

ಕಾಸರಗೋಡು ವೆಳ್ಳರಿಕಂಡು ವಿನ ಸ್ನೇಹಾ ಜೋಸ್ (20), ಜಿಸ್ನಾ ಮೇರಿ ಜೋಸೆಫ್(20) ಮತ್ತು ಅಡೋನ್ ಬೆಸ್ಟಿ (20) ಮೃತ ಪಟ್ಟವರು. ಇವರು ಕಣ್ಣೂರು ಅಂಗಾಡಿ ಕಡವು ಡೋನ್ ಬೋಸ್ಕೊ ಕಾಲೇಜಿನ ಮೂರನೇ ವರ್ಷದ ಪದವಿ ವಿದ್ಯಾರ್ಥಿ ಗಳಾಗಿದ್ದರು. ಅಡೋನ ಸಹೋದರಿ ಡಿಯೋನಾ ಬೆಸ್ಟಿ, ಸ್ನೇಹಾಳ ಸಹೋದರಿ ಸೋನಾ ಜೋಸೆಫ್ ಮತ್ತು ಸಾಂಜೋ ಜೋಸ್ ಗಾಯ ಗೊಂಡಿದ್ದು, ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದಿತ್ಯವಾರ ಸಂಜೆ ಈ ಅಪಘಾತ ನಡೆದಿದ್ದು, ನಿಯಂತ್ರಣ ತಪ್ಪಿದ ಕಾರು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬಳಿಕ ರಸ್ತೆ ಬದಿಯ ಹೊಂಡಕ್ಕೆ ಉರುಳಿ ಬಿದ್ದು ಈ ಅವಘಡ ನಡೆದಿದೆ. ಟೂರಿಗೆ ತೆರಳಿ ಮರಳುತ್ತಿದ್ದಾಗ ಈ ಅಪಘಾತ ನಡೆದಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
176
Stephen K

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು