News Karnataka Kannada
Wednesday, May 08 2024
ಕಾಸರಗೋಡು

ಕಾಸರಗೋಡು: ಹೆಲಿಕಾಪ್ಟರ್ ಪತನಗೊಂಡು ಮೃತಪಟ್ಟ ಯೋಧನ ಅಂತ್ಯಕ್ರಿಯೆ!

Kasar (1)
Photo Credit : By Author

ಕಾಸರಗೋಡು: ಅರುಣಾಚಲಪ್ರದೇಶದಲ್ಲಿ ಹೆಲಿಕಾಪ್ಟರ್ ಪತನಗೊಂಡು ಮೃತಪಟ್ಟ ಯೋಧ ಪಾರ್ಥಿವ ಶರೀರವನ್ನು ಇಂದು ( ಸೋಮವಾರ) ಹುಟ್ಟೂರಾದ ಕಾಸರಗೋಡಿನ ಚೆರ್ವತ್ತೂರಿಗೆ ತರಲಾಗಿದ್ದು, ಕಿಯಕ್ಕಮುರಿಯ ಮನೆಯ ಪರಿಸರದಲ್ಲಿ ಸಕಲ ಸರಕಾರಿ ಗೌರವ ಗಳೊಂದಿಗೆ ಅಂತ್ಯಕ್ರಿಯೆ ನೆರವೇರಿತು.

ವಿಮಾನ ಮೂಲಕ ಕಣ್ಣೂರಿಗೆ ತರಲಾಗಿದ್ದ ಮೃತದೇಹವನ್ನು ಬಳಿಕ ಚೆರ್ವತ್ತೂರಿಗೆ ತರಲಾಯಿತು . ಸೇನಾಪಡೆಯ ಅಧಿಕಾರಿಗಳು ಜೊತೆಗಿದ್ದರು. ಚೆರ್ವತ್ತೂರು ಕಿಯಕ್ಕಮುರಿಯ ವಾಚನಾಲಯದ ಪರಿಸರದಲ್ಲಿ ಪಾರ್ಥಿವ ಶರೀರವನ್ನು ಅಂತಿಮ ದರ್ಶನಕ್ಕಿಡಲಾಗಿದ್ದು, ಸಾವಿರಾರು ಮಂದಿ ಅಂತಿಮ ದರ್ಶನ ಪಡೆದರು.

ರಾಜ್ಯ ಸರಕಾರದ ಪರ ಬಂದರು ಸಚಿವ ಅಹಮ್ಮದ್ ದೇವರ್ ಕೋವಿಲ್ ಅಂತಿಮ ನಮನ ಸಲ್ಲಿಸಿದರು. ಮುಖ್ಯಮಂತ್ರಿ ಪರ ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ಪುಷ್ಪಚಕ್ರ ಅರ್ಪಿಸಿದರು.

ಸಂಸದ ರಾಜ್ ಮೋಹನ್ ಉಣ್ಣಿ ತ್ತಾನ್, ಶಾಸಕರಾದ ಇ.ಚಂದ್ರಶೇಖರನ್, ಸಿ .ಎಚ್ ಕುಞ೦ಬು, ಟಿ.ಐ.ಮಧುಸೂದನನ್,  ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಪಿ. ಬೇಬಿ ಬಾಲಕೃಷ್ಣನ್, ನೀಲೇಶ್ವರ ಬ್ಲಾಕ್ ಪಂಚಾಯತ್ ಅಧ್ಯಕ್ಷ ಮಾಧವನ್ ಮಣಿಯಾರ, ಮಾಜಿ ಸಂಸದ ಪಿ.ಕರುಣಾಕರನ್, ಪಿ.ಕೆ.ಶ್ರೀಮತಿ , ಮಾಜಿ ಶಾಸಕ ಮಾರಯ್ಯ ಕೆ.ಕುಂಜಿರಾಮನ್ ಕೆ.ಪಿ.ಸತೀಶ್ ಚಂದ್ರನ್, ಟಿ.ವಿ.ರಾಜೇಶ್, ಕೆ.ಪಿ.ಕುಂಞಿಕಣ್ಣನ್, ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಎಂ.ವಿ.ಬಾಲಕೃಷ್ಣನ್, ಚೆರ್ವತ್ತೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಸಿ.ವಿ.ಪ್ರಮೀಳಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವೈಭವ್ ಸಕ್ಸೇನಾ, ಡಿವೈಎಸ್ಪಿ ಪಿ.ಬಾಲಕೃಷ್ಣನ್ ನಾಯರ್, ತಹಸೀಲ್ದಾರ್ ಎನ್. ಮಣಿರಾಜ್ . ಕಿನಾನೂರ್ ಕರಿಂದಳ ಮಿಲಿಟರಿ ಅಸೋಸಿಯೇಶನ್ ಮಿಲಿಟರಿ ಅಸೋಸಿಯೇಷನ್, ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ಮಿಲಿಟರಿ ಮತ್ತು ಪೊಲೀಸ್ ಅಧಿಕಾರಿಗಳು, ಯುವಕರು ಮತ್ತು ಸ್ವಯಂಸೇವಕ ಸಂಘಟನೆಗಳ ಮುಖಂಡರು ಸೇರಿದಂತೆ ಸಮಾಜದ ವಿವಿಧ ವಲಯಗಳ ಸಾವಿರಾರು ಜನರು ವೀರ ಯೋಧನಿಗೆ ಅಂತಿಮ ನಮನ ಸಲ್ಲಿಸಿದರು.

ಬಳಿಕ ಪಾರ್ಥಿವ ಶರೀರವನ್ನು ಸ್ವಗ್ರಹಕ್ಕೆ ತರಲಾಯಿತು. ಮಿಲಿಟರಿ ಅಂತ್ಯಕ್ರಿಯೆಯ ವಿಧಿಗಳ ನಂತರ, ಮನೆಯ ಪರಿಸರದಲ್ಲಿ ಅಂತ್ಯಕ್ರಿಯೆ ಪ್ರಕ್ರಿಯೆ ಆರಂಭಗೊಂಡಿತು.

ಸೇನಾ ಅಧಿಕಾರಿಗಳು ರಾಷ್ಟ್ರಧ್ವಜ ಹಾಗೂ ಸೈನಿಕರ ಸಮವಸ್ತ್ರವನ್ನು ಪೋಷಕರಾದ ಕೌಸಲ್ಯ ಮತ್ತು ಅಶೋಕ್ ಅವರಿಗೆ ಹಸ್ತಾಂತರಿಸಿದರು. ಡಿಎಸ್‌ಸಿ ಸ್ಟೇಷನ್ ಕಮಾಂಡೆಂಟ್ ಕರ್ನಲ್ ಲೋಕೇಂದ್ರ ಸಿಂಗ್ ನೇತೃತ್ವದಲ್ಲಿ ಯೋಧರು ಅಂತ್ಯಕ್ರಿಯೆ ನೆರವೇರಿಸಿದರು. ಮೃತ ದೇಹವನ್ನು ಸೇನಾ ಗೌರವಗಳೊಂದಿಗೆ ಅಂತ್ಯಸಂಸ್ಕಾರ ಮಾಡಲಾಯಿತು.

ಕೆ.ವಿ ಅಶ್ವಿನ್ ಅವರಿಗೆ ಸೇರಿದ ಸೇನೆಯ ಎಇಎನ್ ಕಾರ್ಪ್ಸ್ ಕ್ಯಾಪ್ಟನ್ ಆರ್.ಯುವರಾಜ್ ನೇತೃತ್ವದಲ್ಲಿ ಆರು ಯೋಧರು ಮೃತದೇಹದ ಜೊತೆಗಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
176
Stephen K

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು