News Karnataka Kannada
Monday, April 29 2024
ಕಾಸರಗೋಡು

ಕಾಸರಗೋಡು: ಅರುಣಾಚಲ ಪ್ರದೇಶದಲ್ಲಿ ಹೆಲಿಕಾಪ್ಟರ್ ಪತನ, ಕಾಸರಗೋಡಿನ ಸೈನಿಕ ಸಾವು

Soldier killed in helicopter crash in Arunachal Pradesh
Photo Credit : By Author

ಕಾಸರಗೋಡು: ಅರುಣಾಚಲ ಪ್ರದೇಶದಲ್ಲಿ ಉಂಟಾದ ಹೆಲಿಕಾಪ್ಟರ್ ಪತನದಲ್ಲಿ ಮೃತಪಟ್ಟವರಲ್ಲಿ ಕಾಸರಗೋಡಿನ ಸೈನಿಕ ಚೆರ್ವತ್ತೂರು ಕಾಟುವಳಪ್ಪಿನ ಅಶೋಕನ್ ಕೆ.ವಿ, ಕೌಶಲ್ಯ ದಂಪತಿ ಪುತ್ರ ಅಶ್ವಿನ್ ಕೆ.ವಿ (24)  ಮೃತಪಟ್ಟಿದ್ದಾರೆ.

ದುರಂತದ ಬಗ್ಗೆ ಸೇನಾ ಅಧಿಕಾರಿಯೋರ್ವರು ಅಶ್ವಿನ್ ರವರ ಮನೆಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ನಾಲ್ಕು ವರ್ಷದ ಹಿಂದೆ ಇಲೆಕ್ಟ್ರಾನಿಕ್ ಆಂಡ್ ಮೆಕಾನಿಕಲ್ ವಿಭಾಗದ ಇಂಜಿನಿಯರ್ ಆಗಿ ಅಶ್ವಿನ್ ಸೇನಾಪಡೆಗೆ ಸೇರ್ಪಡೆಗೊಂಡಿದ್ದರು.

ಕೆಲ ಸಮಯದ ಹಿಂದೆಯಷ್ಟೇ ರಜೆಯಲ್ಲಿ ಮನೆಗೆ ಬಂದು ಒಂದು ತಿಂಗಳ ಹಿಂದೆ ಮರಳಿದ್ದರು. ಶುಕ್ರವಾರ ಬೆಳಿಗ್ಗೆ 10. 45 ರ ಸುಮಾರಿಗೆ ಅರುಣಾಚಲ ಪ್ರದೇಶದ ಸಿಯಾಂಗ್ ಜಿಲ್ಲೆಯ ಮಿಗ್ಲಿಂಗ್ ಎಂಬಲ್ಲಿ ಭಾರತೀಯ ಸೇನಾ ಪಡೆಯ ಅತ್ಯಾಧುನಿಕ ಲಘು ಹೆಲಿಕಾಪ್ಟರ್ ಪತನಗೊಂಡಿತ್ತು. ಹೆಲಿಕಾಪ್ಟರ್ ನಲ್ಲಿ ಒಟ್ಟು ಐವರು ಪ್ರಯಾಣಿಕರಿದ್ದರು. ನಾಲ್ವರ ಮೃತದೇಹ ಲಭಿಸಿದೆ ಪಾರ್ಥಿವ ಶರೀರ ಎರಡು ದಿನಗಳೊಳಗೆ ಊರಿಗೆ ತರುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
176
Stephen K

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು