News Karnataka Kannada
Thursday, May 02 2024
ಕಾಸರಗೋಡು

ಕಾಸರಗೋಡು: ವಿಜ್ಞಾನ ಮೇಳದಲ್ಲಿ ಚಪ್ಪರ ಕುಸಿತ ಪ್ರಕರಣ, 6 ಮಂದಿ ಬಂಧನ

ವಿಮಾನ ನಿಲ್ದಾಣದ ಬಳಿ ಇರುವ ಏರೋಸಿಟಿಯ ಐಷಾರಾಮಿ ಹೋಟೆಲ್‌ನಲ್ಲಿ 15 ದಿನಗಳ ಕಾಲ ಯಾವುದೇ ಹಣವನ್ನು ಪಾವತಿಸದೆ ತಂಗಿದ್ದ ಆರೋಪದ ಮೇಲೆ 37 ವರ್ಷದ ಆಂಧ್ರದ ಮಹಿಳೆಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Photo Credit : Pexels

ಕಾಸರಗೋಡು: ಮಂಜೇಶ್ವರ ಉಪ ಜಿಲ್ಲಾ ವಿಜ್ಞಾನ ಮೇಳ ನಡೆಯುತ್ತಿದ್ದ ಸಂದರ್ಭದಲ್ಲಿ ಚಪ್ಪರ ಕುಸಿದು 59 ಮಂದಿ ಗಾಯಗೊಂಡ ಘಟನೆಗೆ ಸಂಬಂಧ ಪಟ್ಟಂತೆ ಆರು ಮಂದಿಯನ್ನು ಮಂಜೇಶ್ವರ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಚಪ್ಪರದ ಗುತ್ತಿಗೆ ದಾರ ಗೋಕುಲ್ ದಾಸ್, ಅಹಮ್ಮದಾಲಿ ಎ.ಪಿ, ಅಬ್ದುಲ್ ಬಶೀರ್, ಅಬ್ದುಲ್ ಶಾಮಿಲ್, ಇಲ್ಯಾಸ್ ಮುಹಮ್ಮದ್ ಮತ್ತು ಅಶ್ರಫ್ ಬಂಧಿತರು.

ಇವರ ವಿರುದ್ಧ ಜುವೈನಲ್ ಕಾಯ್ದೆ ಸೇರಿದಂತೆ ಹಲವು ಮೊಕದ್ದಮೆ ದಾಖಲಿಸಲಾಗಿದೆ. ಶುಕ್ರವಾರ ಮಧ್ಯಾಹ್ನ ಬೇಕೂರು ಸರಕಾರಿ ಹಯರ್ ಸೆಕೆಂಡರಿ ಶಾಲೆಯಲ್ಲಿ ಘಟನೆ ನಡೆದಿತ್ತು. ಘಟನೆ ಬಗ್ಗೆ ತನಿಖೆ ನಡೆಸಿ ವರದಿ ನೀಡುವಂತೆ ಕೇರಳ ಶಿಕ್ಷಣ ಸಚಿವ ಶಿವನ್ ಕುಟ್ಟಿ ಆದೇಶ ನೀಡಿದ್ದಾರೆ.

ಗಾಯಗೊಂಡು ಮಂಗಳೂರು ಹಾಗೂ ಕಾಸರಗೋಡು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿ ರುವ 15 ಮಂದಿ ಚೇತರಿಸಿ ಕೊಳ್ಳುತ್ತಿದ್ದಾರೆ. ಉಳಿದವರು ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಬಿಡುಗಡೆ ಗೊಂಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
176
Stephen K

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು