News Karnataka Kannada
Sunday, April 28 2024
ಕಾಸರಗೋಡು

ಕಾಸರಗೋಡು: ಕಡಲತೀರ ಸಂರಕ್ಷಣೆಗಾಗಿ ಯುವ ಉದ್ಯಮಿಯಿಂದ ವಿನೂತನ ಪರಿಕಲ್ಪನೆ ಸೀ ವೇವ್ ಬ್ರೇಕರ್ಸ್

KASARGOD: Sea wave breakers an innovative concept by a young entrepreneur for beach conservation
Photo Credit : By Author

ಕಾಸರಗೋಡು: ಕರಾವಳಿ ಸಮುದ್ರ ತೀರದ ಕಡಲ್ಕೊರೆತಕ್ಕೆ ಪರಿವಾರವೆಂಬಂತೆ ಕಾಸರಗೋಡಿನ ಉದ್ಯಮಿಯೊಬ್ಬರ ಸೀ ವೇವ್ ಬ್ರೇಕರ್ಸ್ಸ್ ಎಂಬ ವಿನೂತನ ಪರಿಕಲ್ಪನೆಯು ಇದೀಗ ಗಮನ ಸೆಳೆಯುವಂತೆ ಮಾಡಿದೆ. ಕಡಿಮೆ ವೆಚ್ಚ ಹಾಗೂ ಪರಿಸರ ಸ್ನೇಹಿ ಯೋಜನೆ ಯಾಗಿದ್ದು, ಕಾಸರಗೋಡಿನ ಖ್ಯಾತ ಉದ್ಯಮಿ ಯು.ಕೆ.ಯೂಸಫ್ ರವರು, ಈ ಯೋಜನೆಯ ರೂವಾರಿಯಾಗಿದ್ದು, ವಿನೂತನ ಯೋಜನೆ ಎಲ್ಲರ ಗಮನ ಸೆಳೆಯುಂತೆ ಮಾಡಿದೆ.

ಕಡಿಮೆ ವೆಚ್ಚದಲ್ಲಿ ಪರಿಸರ ಸ್ನೇಹಿ ವಿನೂತನ ಕಡಲ್ಕೊರೆತ ಸಂರಕ್ಷಣೆಗಾಗಿರುವ ಯು.ಕೆ.ಯೂಸಫ್ ಇಫೆಕ್ಟ್ಸ್ ಸೀವೇವ್ ಬ್ರೇಕರ್ಸ್ ಸಾಕ್ಷಾತ್ಕರಗೊಂಡಿದೆ. ಇದೀಗ ಕಾಸರಗೋಡು ನೆಲ್ಲಿಕುಂಜೆ ಕಡಲ ತೀರದಲ್ಲಿ ಪರೀಕ್ಷಣಾರ್ಥವಾಗಿ ನಿರ್ಮಿಸಿಲಾಗಿದೆ. ಪ್ರಸ್ತುತ ಇತರ ಕಡಲ್ಕೊರೆತ ಸಂರಕ್ಷಣೆ ಮಾರ್ಗ ಯಶಸ್ವಿಯಾಗದ ಕಡೆ ಯು.ಕೆ.ಯೂಸಫ್ ಸೀವೇವ್ ಬ್ರೇಕರ್ಸ್ಸ್ ಯೋಜನೆ ಯಶಸ್ವಿ ಕಂಡಿದೆ. ಹಲವು ಕರಾವಳಿ ರಕ್ಷಣಾ ಯೋಜನೆಗಳು ಯಶಸ್ವಿಯಾಗಿಲ್ಲ

ಯು. ಕೆ ಯೂಸುಫ್ ಇಜ್ ಸೀವ್ ಬ್ರೇಕರ್ಸ್ ಯೋಜನೆಯ ವಿಶಿಷ್ಟತೆಯ ಹೊರತಾಗಿ, ಪ್ರವಾಸೋದ್ಯಮ ಕ್ಷೇತ್ರಕ್ಕೆ ಸಹ ಪುನರುಜ್ಜೀವನಗೊಳ್ಳುವ ರೀತಿಯಲ್ಲಿ ಕರಾವಳಿಗೆ ಸೌಂದರ್ಯ ಮತ್ತು ದೃಶ್ಯ ಸೌಂದರ್ಯವನ್ನು ಹೆಚ್ಚಿಸು ವ ಯೋಜನೆ ಕೂಡಾ ಆಗಿದೆ.

ಕರ್ನಾಟಕ ಸರಕಾರಕ್ಕೂ ಆಸಕ್ತಿ
ಕಡಲ್ಕೊರೆತ ತಡೆಯಲು ಕಾಸರಗೋಡಿನ ಉದ್ಯಮಿ ಯು.ಕೆ.ಯೂಸಫ್ ಅವರ ವಿನೂತನ ಆವಿಷ್ಕಾರವನ್ನು ಕರ್ನಾಟಕದ ಕರಾವಳಿ ತೀರದಲ್ಲೂ ಅಳವಡಿಸುವ ಕುರಿತುಚಿಂತನೆ ನಡೆಸಿದೆ . ಈ ಕುರಿತು ಈಗಾಗಲೇ ಕರ್ನಾಟಕ ಸಿಎಂ ಬಸವರಾಜ ಬೊಮ್ಮಾಯಿ ಮಂಗಳೂರಿಗೆ ಭೇಟಿ ನೀಡಿದಾಗ ಉಲ್ಲೇಖ ಮಾಡಿದ್ದಾರೆ . ಈ ಹಿನ್ನಲೆಯಲ್ಲಿ ಕರ್ನಾಟಕ ಮೀನುಗಾರಿಕಾ ಹಾಗೂ ಬಂದರು ಸಚಿವ ಎಸ್ . ಅಂಗಾರ ನೇತೃತ್ವದ ತಂಡ ಆಗಮಿಸಿ ಈ ಕುರಿತು ಅಧ್ಯಯನ ನ ನಡೆಸಿದೆ. ಮುಂದಿನ ಹಂತದಲ್ಲಿ ಅಳವಡಿಸುವ ಕುರಿತು ಸರಕಾರ ಮಟ್ಟದಲ್ಲಿ ತೀರ್ಮಾನ ಕೈಗೊಳ್ಳಲಿದೆ.

ವಿನೂತನ ಸೀ ವೇವ್ ಬ್ರೇಕರ್ಸ್ ಗೆ ಕಡಿಮೆ ವೆಚ್ಚ, ಬಾಳ್ವಿಕೆ

ಸೀ ವೇವ್ ಬ್ರೇಕರ್‍ಸ್ ತಂತ್ರಜ್ಞಾನದ ಮೂಲಕ ಉದ್ದದ ಕಾಂಕ್ರೀಟ್ ಫ್ರೇಮ್ ನಿರ್ಮಿಸಿ ಅವುಗಳ ಮೂಲಕ ಕಡಲ್ಕೊರೆತವನ್ನು ತಡೆಯಲಾಗುತ್ತದೆ. ಇಲ್ಲಿ ಸುಮಾರು ೮ ಅಡಿಯಷ್ಟು ಆಳದಲ್ಲಿ ಕಾಂಕ್ರೀಟ್ ಫ್ರೆಮ್‌ಗಳನ್ನು ಜೋಡಿಸಲಾಗುತ್ತದೆ. ಕಡಲ್ಕೊರೆತ ತಡೆಯಲು ತೀರದಲ್ಲಿ ಹಾಕಲಾಗುವ ಬೃಹತ್ ಕಲ್ಲುಗಳು ಪ್ರತೀ ವರ್ಷ ಸಮುದ್ರ ಪಾಲಾಗುತ್ತದೆ. ಆದರೆ ಈ ನೂತನ ಯೋಜನೆಯು ೧೦ ವರ್ಷಗಳ ಬಾಳ್ವಿಕೆ , ವೆಚ್ಚ ಕಡಿಮೆ ಮತ್ತು ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ರೀತಿಯಲ್ಲಿದೆ.
ಸ್ವಂತ ಖರ್ಚಿನಲ್ಲಿ ಯು.ಕೆ.ಯೂಸಫ್ ಅವರು ನೆಲ್ಲಿಕುನ್ನು ತೀರದಲ್ಲಿ ಪರೀಕ್ಷಣಾರ್ಥವಾಗಿ ನಿರ್ಮಿಸಿರುವುದು. ಈ ಸೀ ವೇವ್ ಬ್ರೇಕರ್‌ಗಳು ಸಮುದ್ರ ತೀರದ ಬೃಹತ್ ರಚನೆಗಳಾಗಿದ್ದು, ಸಾಮಾನ್ಯವಾಗಿ ಕಾಂಕ್ರೀಟ್ ಬಳಸಿ ನಿರ್ಮಿಸಲಾಗುವುದು ಮತ್ತು ಮರಳನ್ನು ಈ ರಚನೆಗಳ ಒಳಗೆ ತುಂಬಿಸಲಾಗುತ್ತದೆ. ಇದೀಗ ನಿರ್ಮಿಸಿದ ಬ್ರೇಕರ್ ೫೦ ಮೀಟರ್ ಉದ್ದ, ೨೦ ಅಡಿ ಅಗಲ, ೪೦೦ ಟನ್ ಭಾರವಿರುವ ಸ್ಟ್ರಕ್ಚರ್ ಹೊಂದಿದೆ.

27ರಂದು ಲೋಕಾರ್ಪಣೆ
ಯುಕೆ ಯೂಸುಫ್ ಎಫೆಕ್ಟ್ಸ್ ಸೀವೇವ್ ಬ್ರೇಕರ್ಸ್ ಎಂಬ ವಿನೂತನವಾದ ಕರಾವಳಿ ಸಂರಕ್ಷಣೆಯ ಯೋಜನೆ ಉದ್ಘಾಟನೆಯು ಅ.27ರಂದು ಸಂಜೆ 5ಗಂಟೆಗೆ ನೆಲ್ಲಿಕುಂಜೆ ಕಡಲತೀರದಲ್ಲಿ ನಡೆಯಲಿದ್ದು , ಉದ್ಘಾಟನೆಯನ್ನು ಕೇರಳ ಜಲಸಂಪನ್ಮೂಲ ಸಚಿವ ರೋಶಿ ಅಗಸ್ಟಿನ್ ನೆರವೇರಿಸುವರು . ಕರ್ನಾಟಕ ಮೀನುಗಾರಿಕಾ, ಬಂದರು ಖಾತೆ ಸಚಿವ ಎಸ್. ಅಂಗಾರ ಮುಖ್ಯ ಅತಿಥಿಯಾಗಿರುವರು. ಸಾಂಸ್ಕೃತಿಕ ಕಾರ್ಯಕ್ರಮವನ್ನು ಕೇರಳ ಬಂದರು, ಪುರಾತತ್ವ ಇಲಾಖೆ ಸಚಿವ ಅಹಮ್ಮದ್ ದೇವರ್‌ಕೋವಿಲ್ ಉದ್ಘಾಟಿಸುವರು. ಶಾಸಕ ಎನ್.ಎ.ನೆಲ್ಲಿಕುನ್ನು ಅಧ್ಯಕ್ಷತೆ ವಹಿಸುವರು. ಶಾಸಕರಾದ ಸಿ.ಎಚ್.ಕುಂಞಂಬು, ಎ. ಕೆ. ಎಂ ಅಶ್ರಫ್ , ಇ.ಚಂದ್ರಶೇಖರನ್, ಎಂ.ರಾಜಗೋಪಾಲನ್, ಬೇಬಿ ಬಾಲಕೃಷ್ಣನ್, ರವೀಶತಂತ್ರಿ ಕುಂಟಾರು, ವಿ.ಎಂ.ಮುನೀರ್, ಎಂ.ವಿ.ಬಾಲಕೃಷ್ಣನ್ ಮೊದಲಾದವರು ಉಪಸ್ಥಿತರಿರುವರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
176
Stephen K

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು