News Karnataka Kannada
Sunday, May 05 2024
ಕಾಸರಗೋಡು

ಕಾಸರಗೋಡು: ಮುಸ್ಲಿಂ ಲೀಗ್ ಜಿಲ್ಲಾಧ್ಯಕ್ಷ ಟಿ.ಇ ಅಬ್ದುಲ್ಲ ನಿಧನ

Kasargod: Muslim League district president T. E Abdulla passes away
Photo Credit : By Author

ಕಾಸರಗೋಡು: ಕಾಸರಗೋಡು ನಗರಸಭಾ ಮಾಜಿ ಅಧ್ಯಕ್ಷ ಹಾಗೂ ಮುಸ್ಲಿಂ ಲೀಗ್ ಜಿಲ್ಲಾಧ್ಯಕ್ಷ ಟಿ. ಇ ಅಬ್ದುಲ್ಲ (65) ಫೆ. 1ರ ಮಧ್ಯಾಹ್ನ ನಿಧನರಾದರು. ಮೂರು ಬಾರಿ ಕಾಸರಗೋಡು ನಗರಸಭಾ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.

ಕೆಲ ದಿನಗಳಿಂದ ಕೋಜಿಕ್ಕೊಡ್ ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ವಿದ್ಯಾರ್ಥಿ ಸಂಘಟನೆಯಾದ ಎಂಎಸ್ ಎಫ್ ಮೂಲಕ ರಾಜಕೀಯಕ್ಕೆ ಪ್ರವೇಶಿಸಿದ್ದ ಅಬ್ದುಲ್ಲರವರು 1978 ರಲ್ಲಿ ತಲಂಗರೆ ವಾರ್ಡ್ ಮುಸ್ಲಿಂ ಲೀಗ್ ಕಾರ್ಯದರ್ಶಿ ಯಾಗಿ ಆಯ್ಕೆಯಾದರು. ಯೂತ್ ಲೀಗ್ ನ ಜಿಲ್ಲಾ , ರಾಜ್ಯ ಸಮಿತಿ ಪದಾಧಿಕಾರಿಗಳಾಗಿ ಕಾರ್ಯ ನಿರ್ವಹಿಸಿದ್ದರು. ಮುಸ್ಲಿಂ ಲೀಗ್ ಜಿಲ್ಲಾ ಸಮಿತಿ ಅಧ್ಯಕ್ಷ ಹಾಗೂ ಇನ್ನಿತರ ಸ್ತನಗಳನ್ನು ಅಲಂಕರಿಸಿದ್ದರು. 2018 ರಿಂದ ಮುಸ್ಲಿಂ ಲೀಗ್ ರಾಜ್ಯ ಸಮಿತಿ ಸದಸ್ಯರಾಗಿದ್ದರು. ಚೆರ್ಕಳಂ ಅಬ್ದುಲ್ಲ ರವರ ನಿಧನದ ಬಳಿಕ ಮುಸ್ಲಿಂ ಲೀಗ್ ಜಿಲ್ಲಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದರು.

1988 ರಲ್ಲಿ ಕಾಸರಗೋಡು ನಗರಸಭಾ ಸದಸ್ಯ ರಾಗಿ ಆಯ್ಕೆ ಯಾದ ಅಬ್ದುಲ್ಲ ರವರು ಬಳಿಕ 2000=ಮತ್ತು 2005 ರಲ್ಲಿ ಯೂ ಸದಸ್ಯರಾಗಿ ಆಯ್ಕೆ ಯಾಗಿದ್ದರು. 27 ವರ್ಷಗಳ ಕಾಲ ಕಾಸರಗೋಡು ನಗರಸಭೆಯ ಸದಸ್ಯರಾಗಿಯೂ ಸೇವೆ ಸಲ್ಲಿಸಿ ದ್ದರು. ಮೂರು ಬಾರಿ ಕಾಸರಗೋಡು ನಗರಸಭಾ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದು, 2000-2005 ರ ಅವಧಿಯಲ್ಲಿ ರಾಜ್ಯದಲ್ಲೇ ಅತ್ಯುತ್ತಮ ನಗರಸಭೆ ಎಂಬ ಹೆಗ್ಗಳಿಕೆಗೂ ಪಾತ್ರವಾಗಿತ್ತು.

ಕಾಸರಗೋಡು ಸಂಯುಕ್ತ ಮುಸ್ಲಿಂ ಜಮಾಅತ್ ಜನರಲ್ ಕಾರ್ಯದರ್ಶಿ , ಮಾಲಿಕ್ ದಿನಾರ್ ಜುಮಾ ಅತ್ ಮಸೀದಿ ಸಮಿತಿ ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ಪತ್ನಿ, ನಾಲ್ವರು ಮಕ್ಕಳು ಹಾಗೂ ಅಪಾರ ಬಳಗವನ್ನು ಅಗಲಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
176
Stephen K

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು